ಧರ್ಮ ಜಾಗೃತಿಯಿಂದ ಪೂಜ್ಯ ಭಾವನೆ ಹೆಚ್ಚುತ್ತದೆ-ದುಂಡಿಗೌಡ್ರ

KannadaprabhaNewsNetwork |  
Published : Feb 03, 2025, 12:32 AM IST
ಪೊಟೋ ಪೈಲ್ ನೇಮ್ ೨ಎಸ್‌ಜಿವಿ೨ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ೩ ನೇ ದಿನದ ಧರ್ಮಸಭೆ ಉದ್ದೇಶಿಸಿ  ಬಂಕಾಪೂರ ಕೆಂಡದಮಠ ಸಿದ್ದಯ್ಯ ಸ್ವಾಮಿಗಳು ಮಾತನಾಡಿದರು | Kannada Prabha

ಸಾರಾಂಶ

ಕರ್ನಾಟಕದಲ್ಲಿ ಧರ್ಮ ಜಾಗೃತಿ ಮೂಡಿಸುವುದರಿಂದ ಅಪರಾಧ ಮನೋಭಾವನೆ ಕಡಿಮೆ ಆಗಿ ಪೂಜ್ಯ ಭಾವನೆ ಬರುತ್ತಿದೆ ಎಂದು ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಶಿಗ್ಗಾಂವಿ: ಕರ್ನಾಟಕದಲ್ಲಿ ಧರ್ಮ ಜಾಗೃತಿ ಮೂಡಿಸುವುದರಿಂದ ಅಪರಾಧ ಮನೋಭಾವನೆ ಕಡಿಮೆ ಆಗಿ ಪೂಜ್ಯ ಭಾವನೆ ಬರುತ್ತಿದೆ ಎಂದು ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ೩ನೇ ದಿನದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶ ಆರ್ಥಿಕ ವ್ಯವಸ್ಥೆಯು ವಿಶ್ವದಲ್ಲಿ ೫ನೇ ಸ್ಥಾನದಲ್ಲಿದೆ. ನಾವು ಆರ್ಥಿಕ ವ್ಯವಸ್ಥೆ ಜೊತೆಗೆ ಆಧ್ಯಾತ್ಮಿಕವಾಗಿ ಮುಂದೆ ಬರಲು ಇಂತಹ ಧರ್ಮಸಭೆ ಕಾರಣ ಎಂದರು. ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಧರ್ಮಸಭೆ ತಿಳಿಸುತ್ತದೆ ಅಲ್ಲದೇ ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾತ್ರ ಎಲ್ಲವನ್ನೂ ಪಡೆಯಬಹುದು ಎಂಬುದಕ್ಕೆ ಧರ್ಮಸಭೆ ಸಾಕ್ಷಿ ಎಂದರು.ಕೇದಾರಪ್ಪ ಬಗಾಡೆ ಮಾತನಾಡಿ, ದುಡ್ಡಿನಿಂದ ಶ್ರೀಮಂತರಾಗದೇ ಮನಸ್ಸಿನಿಂದ ಶ್ರೀಮಂತರಾಗೋಣ ಅಂದಾಗ ಧರ್ಮಸಭೆಗೆ ಅರ್ಥ ಬರುತ್ತದೆ ಎಂದರು.

ಮಲ್ಲಿಕಾರ್ಜುನ ಹಡಪದ ಮಾತನಾಡಿ, ದೈವ ಶಕ್ತಿ ಇದ್ದಾಗ ದುಷ್ಟಶಕ್ತಿ ನಶಿಸಿ ಹೋಗುತ್ತದೆ. ಅಲ್ಲದೇ ತಂದೆ ತಾಯಿಗಳ ಸೇವೆ ಮಾಡುವ ಮೂಲಕ ನಮ್ಮ ಸಂಸ್ಕಾರ ಕಾಪಾಡಬೇಕು ಎಂದರು.

ದಿವ್ಯ ಸಾನಿದ್ಯವಹಿಸಿದ ಬಂಕಾಪೂರ ಕೆಂಡದಮಠ ಸಿದ್ದಯ್ಯ ಸ್ವಾಮಿಗಳು ಮಾತನಾಡಿ, ನೆಮ್ಮದಿ ಸಿಗಬೇಕಾದರೆ ನೀವು ಮಂದಿರಕ್ಕೆ ಬರಬೇಕು, ಬರಬೇಕಾದರೆ ಶುದ್ಧ ಮನಸ್ಸಿನ ಭಕ್ತಿಯಿಂದ ಬರಬೇಕು ಎಂದು ಆಶೀರ್ವದಿಸಿದರು. ಧರ್ಮಸಭೆಯಲ್ಲಿ ರಮೇಶ ಸ್ವಾಮಿಗಳು, ಚಂದ್ರಪ್ಪ ಕಾಳೆ ಭಾವನಮಠ ಆಶೀರ್ವದಿಸಿದರು. ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಲಿಂಗರಾಜಗಾಣಗೇರ ಅಧ್ಯಕ್ಷತೆ ವಹಿಸಿದ್ದರು.

೩ ನೇ ದಿನದ ಪುರಾಣ ಪ್ರವಚನವನ್ನು ಪ್ರಭಯ್ಯಶಾಸ್ತ್ರೀ ಹಿರೇಮಠ ಪಠಿಸಿದರು. ಶಿವಾನಂದ ಮಂದೇವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ನೀಡಿದರು. ದಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಡಾ.ವಿವೇಕ ಜೈನಕೇರಿ, ಜಗದೀಶ ತೊಂಡಿಹಾಳ, ಕೆದಾರಪ್ಪ ಬಗಾಡೆ, ದಯಾನಂದ ಅಕ್ಕಿ, ವೀರಪ್ಪ ನವಲಗುಂದ, ರವಿ ಚವ್ಹಾಣ, ನಂದನ ಬ್ರಹ್ಮಾವರ, ಅಶೋಕ ಬಂಕಾಪೂರ, ಮಲ್ಲಿಕಾರ್ಜುನ ಹಡಪದ, ಉಳವಪ್ಪ ಅರಳೇಶ್ವರ, ಜಗದೀಶ ಯಲಿಗಾರ, ಬಸವರಾಜ ಬಡ್ಡಿ, ಬಾಳಪ್ಪ ಬೊಯಿತೆ, ಎಂ.ವ್ಹಿ. ಗಾಡದ, ಪುಟ್ಟಪ್ಪ ಲಮಾಣಿ, ಶಿವಾನಂದ ದೇವಗೇರಿ, ಮಹಾದೇವಪ್ಪ ಅತ್ತಿಗೇರಿ, ನೀಲಮ್ಮ ಓಲೇಕಾರ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ರಾಜು ಕೆಂಬಾವಿ ಸ್ವಾಗತಿಸಿದರು. ಸಂತೋಷ ಮೊರಬದ ವಂದಿಸಿದರು. ಪ್ರೊ. ಶಶಿಕಾಂತ ರಾಠೋಡ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ