ರೋಟರಿ ಸಹಯೋಗದಲ್ಲಿ ಉದ್ಯಾನವನಕ್ಕೆ ಮರುಜೀವ

KannadaprabhaNewsNetwork |  
Published : Nov 21, 2024, 01:04 AM IST
19ಎಚ್ಎಸ್ಎನ್3 :  | Kannada Prabha

ಸಾರಾಂಶ

ಹೌಸಿಂಗ್ ಬೋರ್ಡ್‌ನಲ್ಲಿರುವ ಹಾಳು ಬಿದ್ದಿದ್ದ ಪಾರ್ಕನ್ನು ಪುರಸಭೆಯೊಂದಿಗೆ ರೋಟರಿ ಕ್ಲಬ್ ವಿಷನ್ ರವರು ಕೈಜೋಡಿಸಿ ಪಾರ್ಕ್ ಅನ್ನು ಪುನಶ್ಚೇತನಗೊಳಿಸಿದರು. ಇಪ್ಪತ್ತೈದು ಸಾವಿರ ಬೆಲೆಯ ೬ ಸಿಮೆಂಟ್ ಬೆಂಚುಗಳನ್ನು ಪಾರ್ಕಿಗೆ ಕೊಡುಗೆಯಾಗಿ ನೀಡಲಾಯಿತು. ಅನುಪಯುಕ್ತವಾಗಿ ಬಿದ್ದಿದ್ದ ವಾಹನ ಟೈರ್‌ಗಳನ್ನು ಸಂಗ್ರಹಿಸಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಆಟೋಪ ಚಟುವಟಿಕೆ ಸಾಮಗ್ರಿಗಳನ್ನಾಗಿ ಮಾಡಲಾಯಿತು. ಪಾರ್ಕ್‌ನಲ್ಲಿ ಪರಿಸರ ಕಾಪಾಡುವ ದೃಷ್ಟಿಯಿಂದ ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ಹಾಳು ಬಿದ್ದಿದ್ದ ಪಾರ್ಕನ್ನು ಪುರಸಭೆಯೊಂದಿಗೆ ರೋಟರಿ ಕ್ಲಬ್ ವಿಷನ್ ರವರು ಕೈಜೋಡಿಸಿ ಪಾರ್ಕ್ ಅನ್ನು ಪುನಶ್ಚೇತನಗೊಳಿಸಿದರು.

ಈ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಬೆಲೆಯ ೬ ಸಿಮೆಂಟ್ ಬೆಂಚುಗಳನ್ನು ಪಾರ್ಕಿಗೆ ಕೊಡುಗೆಯಾಗಿ ನೀಡಲಾಯಿತು. ಅನುಪಯುಕ್ತವಾಗಿ ಬಿದ್ದಿದ್ದ ವಾಹನ ಟೈರ್‌ಗಳನ್ನು ಸಂಗ್ರಹಿಸಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಆಟೋಪ ಚಟುವಟಿಕೆ ಸಾಮಗ್ರಿಗಳನ್ನಾಗಿ ಮಾಡಲಾಯಿತು. ಪಾರ್ಕ್‌ನಲ್ಲಿ ಪರಿಸರ ಕಾಪಾಡುವ ದೃಷ್ಟಿಯಿಂದ ಸಸಿಗಳನ್ನು ನೆಡಲಾಯಿತು. ಶಾಸಕ ಸಿ. ಎನ್. ಬಾಲಕೃಷ್ಣ ರೋಟರಿ ಕ್ಲಬ್ ಕೊಡುಗೆಯನ್ನು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಸಂಸ್ಥೆಗಳಿಂದ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲು ಸಹಕಾರಿಯಾಗುತ್ತಿದೆ. ಉಪಯೋಗಕ್ಕೆ ಬಾರದ ವಾಹನಗಳ ಟೈರ್‌ಗಳಲ್ಲಿ ಮಕ್ಕಳ ಆಟಿಕೆಗಳನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಇದೇ ರೀತಿ ತಾಲೂಕಿನಲ್ಲಿ ಇರುವ ಸಂಸ್ಥೆಗಳು ಮುಂದೆ ಬಂದು ಪಾರ್ಕ್‌ಗಳ ನಿರ್ವಹಣೆಗೆ ಮುಂದಾಗಬೇಕು ಎಂದರು. ಪುರಸಭೆಯ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ. ವಿ. ವಿಜಯ್, ಖಜಾಂಚಿ ನಟರಾಜ್, ಗಿರೀಶ್, ಅಡವೇಗೌಡ, ಶಿವನಂಜೇಗೌಡ, ಮಾಜಿ ಜಿಲ್ಲಾ ಸಹಾಯಕರಾದ ಪದ್ಮನಾಭ, ಸದಸ್ಯರಾದ ಪುಟ್ಟರಾಜು, ಲೋಕೇಶ್, ಭರತ್ ಕುಮಾರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!
ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ