ಕನಕಗಿರಿ ಪಟ್ಟಣದ ರುದ್ರಸ್ವಾಮಿ ಸಾರ್ವಜನಿಕ ಉಚಿತ ಪ್ರಸಾದ ನಿಲಯ ಸಹಯೋಗದಲ್ಲಿ ಶನಿವಾರ ಚೆನ್ನಶ್ರೀ ಸಭಾಭವನ ಉದ್ಘಾಟನಾ ಸಮಾರಂಭ ನಡೆಯಿತು. ಘಟಪ್ರಭಾ ಕೆಂಪಯ್ಯಸ್ವಾಮಿಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಕನಕಗಿರಿ: ಕನಕಗಿರಿಯಲ್ಲಿ ಶಿಕ್ಷಣದ ಕ್ರಾಂತಿಗೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಬೆಳಕಾಗಿದೆ ಎಂದು ಘಟಪ್ರಭಾ ಕೆಂಪಯ್ಯಸ್ವಾಮಿಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.
ಪಟ್ಟಣದ ರುದ್ರಸ್ವಾಮಿ ಸಾರ್ವಜನಿಕ ಉಚಿತ ಪ್ರಸಾದ ನಿಲಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚೆನ್ನಶ್ರೀ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಭಕ್ತರ ಸಹಕಾರ, ಸೇವೆಯಿಂದ ಸುವರ್ಣಗಿರಿ ವಿರಕ್ತಮಠ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗಿದೆ. ಹತ್ತಾರು ವರ್ಷಗಳ ಹಿಂದೆ ಪಿಯು ಕಾಲೇಜು ಆರಂಭಗೊಂಡಿದೆ. ಇದಾದ ನಂತರ ಸಭಾಭವನ ಕೂಡಾ ಉದ್ಘಾಟನೆಯಾಗಿದೆ. ಪದವಿ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕೆಲವೇ ವರ್ಷಗಳಲ್ಲಿ ಇದು ಕೂಡಾ ಆರಂಭಗೊಳ್ಳಲಿದೆ. ಕನಕಗಿರಿ ಐತಿಹ್ಯ ಕೇಂದ್ರದಲ್ಲಿ ಸುವರ್ಣಗಿರಿ ಮಠದ ಸಹಯೋಗದಲ್ಲಿ ಶಿಕ್ಷಣ ಕ್ರಾಂತಿಯಾಗಿರುವುದು ಸಂತಸ ತಂದಿದೆ. ಮಾನಸಿಕ ರೋಗಿಗಳಿಗೆ ಉಚಿತ ಔಷಧ ವಿತರಣೆ, ಉಚಿತ ಅರೋಗ್ಯ ತಪಾಸಣೆ, ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ ಹೀಗೆ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಠವು ಸಮಾಜದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಉಚಿತ ಪ್ರಸಾದ ನಿಲಯದ ಕಾರ್ಯದರ್ಶಿ ವಾಗೇಶ ಹಿರೇಮಠ ಮಾತನಾಡಿ, ವರ್ಷದಲ್ಲಿ ನಡೆದ ಸೇವಾ ಕಾರ್ಯಗಳ ಕುರಿತು ವರದಿ ವಾಚಿಸಿದರು.
ನಿವೃತ್ತ ಶಿಕ್ಷಕ ಗಂಗಾಧರ ಗದ್ದಿ ಅವರಿಗೆ, ವಿವಿಧ ಆಟೋಟಗಳಲ್ಲಿ ರಾಜ್ಯ ಮಟ್ಟದ ವರೆಗೆ ಮಿಂಚಿದ ವಿದ್ಯಾರ್ಥಿಗಳಿಗೆ ಹಾಗೂ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪುರಸ್ಕರಿಸುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.