ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931ರಲ್ಲಿ ನಡೆದಿದ್ದ ಈ ರೀತಿಯ ಜಾತಿ ಸಮೀಕ್ಷೆಯೇ ಕೊನೆ. ಸ್ವಾತಂತ್ರ್ಯ ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿ ಗಣತಿ ನಡೆಯಬೇಕು ಎಂಬುದನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾಂತರಾಜ್ ಅರಸು ಆಯೋಗ ರಚಿಸಿದ್ದರು. ಆದರೆ, ಆ ವರದಿ ಸಾಕಷ್ಟು ವಿಳಂಬವಾಗಿದ್ದರಿಂದ ಅದು ಈಗ ಅಪ್ರಸ್ತುತ. ಹಾಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಸಮೀಕ್ಷೆಗೆ ಮುಂದಾಗಿದೆ ಎಂದರು.
ಇದರಿಂದ ಶೋಷಿತ, ಅತಿ ಹಿಂದುಳಿದ ಸವಿತಾ, ಹಡಪದ, ಮಡಿವಾಳ, ಯಾದವ್, ಈಡಿಗ, ಕಂಬಾರ ಸೇರಿದಂತೆ ನೂರಾರು ಸಮುದಾಯಗಳ ಅಭಿವೃದ್ಧಿಗೆ ಈ ಸಮೀಕ್ಷೆ ಅನುಕೂಲವಾಗಲಿದೆ. ಸಮೀಕ್ಷೆಯ ವರದಿಯ ನಂತರ ಆಗಬಹುದಾದ ಸಣ್ಣ, ಪುಟ್ಟ ಗೊಂದಲ ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮತಿಸಿದ್ದಾರೆ ಎಂದರು.ಸವಿತಾ ಸಮಾಜ ಸೇರಿದಂತೆ ಶ್ರಮಿಕ ಸಮುದಾಯಗಳಿಗೆ ಶೇ.4ರಷ್ಟು ಪ್ರತ್ಯೇಕ ಮೀಸಲಾತಿ ಒದಗಿಸಬೇಕು. ಶ್ರಮಿಕ ವರ್ಗಗಳಿಗೆ ನಗರ, ಪಟ್ಟಣಗಳಲ್ಲಿ ನಿವೇಶನ ನೀಡಿ ಕಾಲನಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನಗರಸಭೆಯ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮುಖಂಡರಾದ ಬಸವರಾಜ್, ಚಂದ್ರಣ್ಣ ಮತ್ತಿತರರಿದ್ದರು.