ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾರ್ವಜನಿಕ ವಿತರಣೆ ಪದ್ಧತಿಯಡಿ ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಕೇಂದ್ರ ಸರ್ಕಾರದ 5 ಕೆಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರಕಾರ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯದ ಬದಲಾಗಿ ನೀಡುವ ಹಣದ ಬದಲಿಗೆ ಮಾರ್ಚ್ ಮಾಹೆಯಿಂದ ಅಕ್ಕಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ನೀಡುವ 5 ಕೆಜಿ ಅಕ್ಕಿ ಬದಲಿಗೆ ಈ ಹಿಂದೆ ಪ್ರತಿ ಕೆಜಿಗೆ ₹ 35ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ₹170 ರಂತೆ ಹಣ ವರ್ಗಾಯಿಸಲಾಗುತ್ತಿತ್ತು. ಆದರೆ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ನೇರ ನಗದು ವರ್ಗಾವಣೆ ಬದಲಾಗಿ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಿಸಲು ಸರಕಾರ ಆದೇಶಿಸಿದೆ.
ಫೆಬ್ರವರಿ ಮಾಹೆಯಿಂದ ಅನ್ವಯವಾಗುವಂತೆ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ಬಿಡುಗಡೆ ಮಾಡಲಾಗಿದ್ದು, ಫೆಬ್ರವರಿ ಹಾಗೂ ಮಾರ್ಚ್ ಮಾಹೆಯ ಹಂಚಿಕೆ ಸೇರಿದಂತೆ 2 ಮಾಹೆಯ ಒಟ್ಟು ಹಂಚಿಕೆ ಬಿಡುಗಡೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ (ಎಎವೈ) 1 ರಿಂದ 3 ಸದಸ್ಯರಿರುವ ಪ್ರತಿ ಕಾರ್ಡ್ 35 ಕೆಜಿ ಅಕ್ಕಿ, 4 ಸದಸ್ಯರಿರುವ ಕಾರ್ಡ್‌ಗೆ 45 ಕೆಜಿ, 5 ಸದಸ್ಯರಿರುವ ಕಾರ್ಡ್‌ಗೆ 65 ಕೆಜಿ, 7 ಸದಸ್ಯರಿರುವ ಕಾರ್ಡ್‌ಗೆ 105 ಕೆಜಿ, 8 ಸದಸ್ಯರಿರುವ ಕಾರ್ಡ್‌ಗೆ 125 ಕೆಜಿ, 9 ಸದಸ್ಯರಿರುವ ಕಾರ್ಡ್‌ಗೆ 145 ಕೆಜಿ ಹಾಗೂ 10 ಸದಸ್ಯರಿರುವ ಕಾರ್ಡ್‌ಗೆ 165 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.ಬಿಪಿಎಲ್ ಪಡಿತರ ಚೀಟಿದಾರರಿಗೆ ಓರ್ವ ಸದಸ್ಯರಿರುವ ಪ್ರತಿ ಕಾರ್ಡ್‌ಗೆ 15 ಕೆಜಿ, 2 ಸದಸ್ಯರಿರುವ ಕಾರ್ಡ್‌ಗೆ 30 ಕೆಜಿ, 3 ಸದಸ್ಯರಿರುವ ಕಾರ್ಡ್‌ಗೆ 45 ಕೆಜಿ, 4 ಸದಸ್ಯರಿರುವ ಕಾರ್ಡ್‌ಗೆ 60 ಕೆಜಿ, 5 ಸದಸ್ಯರಿರುವ ಕಾರ್ಡ್‌ಗೆ 75 ಕೆಜಿ, 6 ಸದಸ್ಯರಿರುವ ಕಾರ್ಡ್‌ಗೆ 90 ಕೆಜಿ, 7 ಸದಸ್ಯರಿರುವ ಕಾರ್ಡ್‌ಗೆ 105 ಕೆಜಿ, 8 ಸದಸ್ಯರಿರುವ ಕಾರ್ಡ್‌ಗೆ 120 ಕೆಜಿ, 9 ಸದಸ್ಯರಿರುವ ಕಾರ್ಡ್‌ಗೆ 135 ಕೆಜಿ ಹಾಗೂ 10 ಸದಸ್ಯರಿರುವ ಕಾರ್ಡ್‌ಗೆ 150 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.
ಅಕ್ಕಿ ಮಾರಾಟ ಮಾಡಿದರೆ ಪಡಿತರ ಚೀಟಿ ರದ್ದು:ಈ ತಿಂಗಳು ಪ್ರತಿದಿನ ತಿಂಗಳ ಕೊನೆಯವರೆಗೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ನ್ಯಾಯಬೆಲೆ ಅಂಗಡಿ ತೆರೆದು ಸರಿಯಾದ ಪ್ರಮಾಣದಲ್ಲಿ ವಿತರಣೆ ಮಾಡಬೇಕು. ಒಂದು ವೇಳೆ ಲೋಪದೋಷ ಕಂಡುಬಂದಲ್ಲಿ ನ್ಯಾಯಬೆಲೆ ಅಂಗಡಿಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಹಂಚಿಕೆಯಾದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಪಡಿತರ ಚೀಟಿ ರದ್ದುಪಡಿಸಲಾಗುವುದು. ಪಡಿತರ ವಿತರಣೆ ಕುರಿತು ದೂರು ಇದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ ಸಂ.112, ಮೊ.ನಂ.9480803900, ಆಹಾರ ಇಲಾಖೆ ಸಹಾಯವಾಣಿ 1967, ದೂ.ಸಂ.08354-235094ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.