ಬಲಗೈ ಸಮುದಾಯದವರು ‘ಹೊಲೆಯ’ ಎಂಬ ಜಾತಿ ನಮೂದಿಸಿ: ಜಯರಾಜು

KannadaprabhaNewsNetwork |  
Published : May 05, 2025, 12:46 AM IST
4ಕೆಎಂಎನ್ ಡಿ31 | Kannada Prabha

ಸಾರಾಂಶ

ಬಲಗೈ, ಛಲವಾದಿ ಹೊಲೆಯ ಹೆಸರಿನಿಂದ ಕರೆಯಲ್ಪಡುವ ಜೊತೆಗೆ ಮೀಸಲಾತಿಯನ್ನು ಪಡೆಯುತ್ತಿರುವವರು ಮುಂದಿನ ಮಕ್ಕಳು ಹಾಗೂ ಸಮುದಾಯದ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಾದ್ಯಂತ ಬಲಗೈ ಸಮುದಾಯ ಹೊಲೆಯ ಹೆಸರನ್ನು ನಮೂದಿಸಬೇಕೆಂಬುವುದು ನಾಮ್ಮೇಲ್ಲರ ಅಭಿಪ್ರಾಯವಾಗಿದೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಸರ್ಕಾರದಿಂದ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದಿಂದ ಮೇ 5 ರಿಂದ 17ರವರಗೆ ನಡೆಸುತ್ತಿರುವ ಜಾತಿ ಮತ್ತು ಉಪಜಾತಿ ಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಹೊಲೆಯ ಎಂಬ ಜಾತಿ ನಮೂದಿಸಬೇಕೆಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಲಗೈ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿ, ಬಲಗೈ, ಛಲವಾದಿ ಹೊಲೆಯ ಹೆಸರಿನಿಂದ ಕರೆಯಲ್ಪಡುವ ಜೊತೆಗೆ ಮೀಸಲಾತಿಯನ್ನು ಪಡೆಯುತ್ತಿರುವವರು ಮುಂದಿನ ಮಕ್ಕಳು ಹಾಗೂ ಸಮುದಾಯದ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಾದ್ಯಂತ ಬಲಗೈ ಸಮುದಾಯ ಹೊಲೆಯ ಹೆಸರನ್ನು ನಮೂದಿಸಬೇಕೆಂಬುವುದು ನಾಮ್ಮೇಲ್ಲರ ಅಭಿಪ್ರಾಯವಾಗಿದೆ ಎಂದರು.

ಕರ್ನಾಟಕ ರಾಜ್ಯಾದ್ಯಂತ ಬಲಗೈ ಸಮುದಾಯ ಹೊಲಯ ಹೆಸರಿನಿಂದ ಗಣಕಿದಾರರಿಗೆ ಮಾಹಿತಿ ನೀಡಬೇಕಿದೆ. ಈ ಬಗ್ಗೆ ಮುಖಂಡರ ಸಭೆ ನಡೆಸಿ ಒಕ್ಕೋರಲಿನ ನಿರ್ಣಾಯವನ್ನು ಕೈಗೊಂಡಿದ್ದು, ಹೊಲಯ ಎಂದು ಹೆಮ್ಮೆಯಿಂದ ಹೇಳಿಕೊಂಡು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.

ಸಭೆಯಲ್ಲಿ ಪುರಸಭೆ ಸದಸ್ಯ ಸಿದ್ದರಾಜು ಮುಖಂಡರಾದ ಡಾ.ವೆಂಕಟೇಶ್, ಮಹೇಶ್, ಸುರೇಶ್, ಪ್ರಸಾದ್, ಚಂದ್ರಹಾಸ್, ವೆಂಕಟೇಶ್, ಕುಮಾರಸ್ವಾಮಿ, ಚಿಕ್ಕಣ್ಣ, ನಂಜುಂಡಸ್ವಾಮಿ, ಕಾಂತರಾಜು, ಮಹದೇವಸ್ವಾಮಿ, ಮಹದೇವು, ಕಿರಣ್‌ಶಂಕರ್, ಚುಂಚಣ್ಣ, ಕಾಂತರಾಜು, ಮಲ್ಲು, ರಂಗಸ್ವಾಮಿ, ಚೇತನ್‌ಕುಮಾರ್, ಅನಿಲ್ ಸೇರಿದಂತೆ ಇತರರು ಇದ್ದರು.

ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ಗುಜರಾತ್‌ಗೆ ಪ್ರಥಮ ಬಹುಮಾನ

ಶ್ರೀರಂಗಪಟ್ಟಣ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಐದು ದಿನಗಳ ಕಾಲ ನಡೆದ 39ನೇ ಬಾಲಕಿಯರ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಗುಜರಾತ್ ಪ್ರಥಮ, ಕರ್ನಾಟಕ ದ್ವಿತೀಯ ಹಾಗೂ ಉತ್ತರಪ್ರದೇಶ ತೃತೀಯ ಸ್ಥಾನ ಪಡೆದುಕೊಂಡವು.

ಕ್ರೀಡಾಕೂಟದಲ್ಲಿ ದೇಶದ ಒಟ್ಟು 24 ರಾಜ್ಯಗಳು ಭಾಗವಹಿಸಿದ್ದವು. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಹ್ಯಾಂಡ್ ಬಾಲ್ ಅಸೋಸಿಯೇಷನ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಆನಂದೇಶ್ವರ ಪಾಂಡೆ, ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯನ್ ಡಾ.ಮನೋಜ್ ಪಿ.ಸಾಹುಕಾರ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲೋಕೇಶ್, ಖಜಾಂಚಿ ಪ್ರಕಾಶ್ ನರಗಟ್ಟಿ, ಸ್ಥಳೀಯರಾದ ಹಿರಿಯ ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಶಿವಲಿಂಗ ದಳವಾಯಿ, ಮಂಡ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮಂಜೂರಾಂ ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಹಾಗೂ ಕ್ರೀಡಾ ಸಂಘಟಕಾರ ಡಾ.ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಈ ವೇಳೆ ರಾಜ್ಯ ಹಾಗೂ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು, ಪರಿವರ್ತನ, ಶೇಷಾದ್ರಿಪುರಂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಅಚೀವರ್ಸ್ ಅಕಾಡೆಮಿ ವಿದ್ಯಾರ್ಥಿಗಳು, ಚಂದ್ರನಾಗ್, ರಾಜೇಶ್ ದೀಪಕ್, ದೇವರಾಜ್ ರುಕ್ಮಾಂದ, ನಾಗೇಂದ್ರ, ಅನನ್ಯ, ಗುರುಪ್ರಸಾದ್ ಸೇರಿದಂತೆ ಇತರರು ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!