ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಕಸಬಾ ಹೋಬಳಿ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಅವರು, ದೊಡ್ಡಮಣ್ಣುಗುಡ್ಡೆಯ ರೈತರಿಗೆ ಭೂಮಿ ಹಕ್ಕು ಪತ್ರ ಕೊಡಿಸುವ ಮೂಲಕ ಅವರು 30 ರಿಂದ 35 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಮುಕ್ತಿ ಕೊಡಿಸಲಾಗುವುದು ಎಂದರು.
ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ರೈತರ ಭೂಮಿಗೆ ಹಕ್ಕು ಕೊಡಿಸಲು ಸ್ವಂತ ಹಣದಲ್ಲಿ ಡ್ರೋಣ್ ಮೂಲಕ ಸರ್ವೇ ಮಾಡಿಸಿ ರಿಪೋರ್ಟ್ ಸಿದ್ಧಪಡಿಸಿದ್ದರು. ಈ ಡ್ರೋಣ್ ಸರ್ವೇಗೆ ಸುರೇಶ್ ಅವರೇ ವೈಯಕ್ತಿಕವಾಗಿ 68 ಲಕ್ಷ ರು. ಖರ್ಚು ಮಾಡಿದ್ದು, ಸುಪ್ರಿಂಕೋರ್ಟಿನಲ್ಲಿ ದಾವೆ ಹೂಡಿ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ನಿಮ್ಮ ಭೂಮಿಗೆ ಹಕ್ಕು ಕೊಡಿಸುವ ಕೆಲಸವನ್ನು ಸುರೇಶ್ ಅವರ ಕೈಯಲ್ಲಿಯೇ ಮಾಡುತ್ತೇವೆ ಎಂದು ಹೇಳಿದರು.ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆಯಲು ನೀವು ಆಶೀರ್ವಾದ ಮಾಡಿ ನೀವು ಬೆಳೆಸಿದವರಿಂದಲೇ ಜಿಲ್ಲೆಯ ಜನರು ಮೋಸ ಹೋಗಿದ್ದೀರಿ. ಈಗಲಾದರೂ ಕ್ಷೇತ್ರದ ಜನರು ಒಟ್ಟಾಗಿ ಹೊಸದಾಗಿ ಚಿಂತನೆ ನಡೆಸಿ, ಮನೆ ಮಕ್ಕಳನ್ನು ಬೆಂಬಲಿಸುವ ನಿರ್ಧಾರ ಮಾಡಬೇಕು. ನಾವು- ನೀವು ಸೇರಿ ನವ ರಾಮನಗರ ಕಟ್ಟೋಣ ಎಂದು ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ಹಾಲನ್ನು ಅಮೃತ ಎನ್ನುತ್ತೇವೆ. ಹೈನುಗಾರಿಕೆ ನಂಬಿರುವ ಜನರಿಗೆ ಕಾಮದೇನು ಎಂದಿಗೂ ಕೈ ಬಿಡುವುದಿಲ್ಲ. ಹಾಗಾಗಿ ಪ್ರತಿ ಕುಟುಂಬದ ಸದಸ್ಯರು, ಮಹಿಳೆಯರು, ಯುವಕರು ಹಸು ಸಾಕಾಣಿಕೆಗೆ ಹೆಚ್ಚು ಒಲವು ತೋರಿ ನಿಮ್ಮ ಬದುಕನ್ನು ನೀವೇ ಸೃಷ್ಟಿಸಿಕೊಳ್ಳಿ. ಬಡವರಿಗೆ ಹಸು ಸಾಕಾಣಿಕೆಗೆ ಇಲಾಖಾ ವತಿಯಿಂದ ನೆರವು ನೀಡುವ ಜೊತೆಗೆ ಸಂಘಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರು. ಅನುದಾನ ನೀಡುತ್ತೇನೆ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ಹಸುಗಳಿಗೆ ಹೆಣ್ಣು ಕರು ಜನಿಸುವ ಸೆವೆನ್ ಹಾಕಿಸಿ, ಮನೆಯಲ್ಲಿ ಆರೋಗ್ಯವಂತ ಹಸು ಒಂದು ಇದ್ದರೆ ಐಶ್ವರ್ಯ ಉತ್ಪನ್ನವಾಗುತ್ತದೆ ಎಂಬುದನ್ನು ಮನಗಂಡು ಹೈನುಗಾರಿಕೆ ಕ್ಷೇತ್ರವನ್ನು ನಂಬಿ ಆರ್ಥಿಕವಾಗಿ ಸಬಲರಾಗಿ ಎಂದು ರೈತರಿಗೆ ಸಲಹೆ ನೀಡಿದರು.
ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್ ಗೌಡ, ಸದಸ್ಯ ಎಂ. ರಾಜು, ಬಮುಲ್ ನಿರ್ದೇಶಕ ಹರೀಶ್, ಹಾರೋಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್, ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಗಣೇಶ್, ವಿಸ್ತರಣಾಧಿಕಾರಿಗಳಾದ ಕವಿತಾ, ಉಮೇಶ್, ಸಂಘದ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ಸಣ್ಣಪ್ಪ, ಪುಟ್ಟಸ್ವಾಮಯ್ಯ, ಕೆಂಪಲಿಂಗಯ್ಯ, ನರಸಿಂಹಯ್ಯ ಮರಿಸ್ವಾಮಯ್ಯ, ಗುರುರಾಜು, ಶಂಭುಲಿಂಗಯ್ಯ, ಪ್ರಭಾವತಿ, ಸಿಇಒ ಮಂಜುನಾಥ.ಎಸ್, ಮುಖಂಡರಾದ ಗಾಂಧಿನಾಗ, ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕುರುಬರಹಳ್ಳಿ ವಿ.ಎಸ್.ಎಸ್.ಎನ್ ನಿರ್ದೇಶಕ ಎಂ.ಉಮೇಶ್ , ಮುಖಂಡರಾದ ಶೇಖರ್, ಕೃಷ್ಣಪ್ಪ, ಹಾಲು ಪರೀಕ್ಷಕ ಎಸ್. ಮಂಜು ಉಪಸ್ಥಿತರಿದ್ದರು.