ತಲೆಮಾರುಗಳ ನಡುವಿನ ಅಂತರ ಮತ್ತು ಬದಲಾದ ಮನಸ್ಥಿತಿಗಳಿಂದಾಗಿ ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಮುಖ್ಯ ಕಾರಣವಾಗಿದೆ. ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಪ್ರೀತಿ, ಕಾಳಜಿ ಮತ್ತು ಭದ್ರತೆಯನ್ನು ಬಯಸುತ್ತಾರೆ. ಅವರನ್ನು ಗೌರವದಿಂದ ಕಾಣುವ ಮತ್ತು ಆರೈಕೆ ಮಾಡುವ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪಾಲಿಸುವ ಅಗತ್ಯ ಇಂದಿನ ಸಮಾಜಕ್ಕಿದೆ ಎಂದು ಹೇಳಿದರು. ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಡಿ.ಬಿ ಮೋಹನ್ ಕುಮಾರ್ ಮಾತನಾಡಿ, ಈ ಪ್ರಶಸ್ತಿಗೆ ಸುಲೇಮಾನ್ ಅವರನ್ನು ಹಿರಿಯ ನಾಗರಿಕರ ದಿನಾಚರಣೆ ಸನ್ಮಾನಕ್ಕೆ ಆಯ್ಕೆ ಮಾಡಿರುವುದು ಅತ್ಯುತ್ತಮವಾಗಿದೆ. ನೇರ ದಿಟ್ಟ ಮತ್ತು ನಿಷ್ಠುರ ವ್ಯಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ದೇಶಭಕ್ತರ ಬಳಗವನ್ನು ಪ್ರಶಂಸಿಸುತ್ತೇವೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್ ವಿಷಾದ ವ್ಯಕ್ತಪಡಿಸಿದರು.ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸಮಾಜಸೇವಕ ಬಿ ಎಚ್ ಸುಲೇಮಾನ್ ಅವರನ್ನು ಪಂಪ್ ಹೌಸ್ ರಸ್ತೆಯ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿ ಯುವಜನತೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ವಯಸ್ಸಾದ ಪೋಷಕರು ತವರೂರಲ್ಲೇ ಒಂಟಿಯಾಗಿ ಉಳಿಯುವಂತಾಗಿದೆ ಎಂದು ತಿಳಿಸಿದರು. ಆಧುನಿಕ ಬದುಕಿನ ವೇಗ, ಆರ್ಥಿಕ ಒತ್ತಡದ ಜೊತೆಗೆ ಕೌಟುಂಬಿಕ ಕಲಹ, ಆದುನಿಕ ಜಗತ್ತಿನ ವ್ಯಾಮೋಹದಿಂದ ಹಿರಿಯರ ಆರೈಕೆಗೆ ಸಮಯ ಮೀಸಲಿಡಲು ಯುವ ಜನತೆಗೆ ಮನಸ್ಸು ಮಾಡುತ್ತಿಲ್ಲ. ತಲೆಮಾರುಗಳ ನಡುವಿನ ಅಂತರ ಮತ್ತು ಬದಲಾದ ಮನಸ್ಥಿತಿಗಳಿಂದಾಗಿ ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಮುಖ್ಯ ಕಾರಣವಾಗಿದೆ. ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಪ್ರೀತಿ, ಕಾಳಜಿ ಮತ್ತು ಭದ್ರತೆಯನ್ನು ಬಯಸುತ್ತಾರೆ. ಅವರನ್ನು ಗೌರವದಿಂದ ಕಾಣುವ ಮತ್ತು ಆರೈಕೆ ಮಾಡುವ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪಾಲಿಸುವ ಅಗತ್ಯ ಇಂದಿನ ಸಮಾಜಕ್ಕಿದೆ ಎಂದು ಹೇಳಿದರು. ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಡಿ.ಬಿ ಮೋಹನ್ ಕುಮಾರ್ ಮಾತನಾಡಿ, ಈ ಪ್ರಶಸ್ತಿಗೆ ಸುಲೇಮಾನ್ ಅವರನ್ನು ಹಿರಿಯ ನಾಗರಿಕರ ದಿನಾಚರಣೆ ಸನ್ಮಾನಕ್ಕೆ ಆಯ್ಕೆ ಮಾಡಿರುವುದು ಅತ್ಯುತ್ತಮವಾಗಿದೆ. ನೇರ ದಿಟ್ಟ ಮತ್ತು ನಿಷ್ಠುರ ವ್ಯಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ದೇಶಭಕ್ತರ ಬಳಗವನ್ನು ಪ್ರಶಂಸಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ದೇಶಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮಹೇಶ್ ಸದಸ್ಯ, ಮೋಹನ್, ಉಪನ್ಯಾಸಕ ಧರ್ಮ ಪ್ರಕೃತಿ, ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ವಕೀಲ ಚಂದ್ರು, ಉಪನ್ಯಾಸಕ ಧನಂಜಯ್ , ಶಿಕ್ಷಕ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಸಿದ್ದೇಗೌಡ, ರಾಜಕುಮಾರ್, ಗಣಿತ ಪ್ರಾಧ್ಯಾಪಕ ಮೋಹನ್ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಪಂಪ್ ಹೌಸ್ ಬಡಾವಣೆ ನಿವಾಸಿಗಳು ಹಾಜರಿದ್ದರು.
ದೇಶಭಕ್ತರ ಬಳಗದ ಸನ್ಮಾನ ಸ್ವೀಕರಿಸುತ್ತಿರುವ ಸುಲೇಮಾನವರು ಬೇಲೂರಿನ ಕಸಾಪ ವೇಲಾಪುರಿ ಸಾಹಿತ್ಯ ವೇದಿಕೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಕಮಿಟಿ ಸದಸ್ಯ ಪುಣ್ಯಭೂಮಿ ಟ್ರಸ್ಟ್ ಹಾಗೂ ಹಸಿರುಭೂಮಿ ಟ್ರಸ್ಟ್ ಬಳಕೆದಾರರ ವೇದಿಕೆ ಭಾಜಪ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಹೊಸನಗರ ಬಡಾವಣೆಯ ಮೂಲಭೂತ ಸೌಕರ್ಯಕ್ಕಾಗಿ ಹೋರಾಡಿದ್ದಾರೆ. ಅಲ್ಲಿನ ಶಾಲೆಗೆ ನೂತನ ಕಟ್ಟಡ ಮತ್ತು ಪೇಂಟಿಂಗ್ ಮುಂತಾದವುಗಳಿಗೆ ದಾನಿಗಳನ್ನು ಒದಗಿಸಿಕೊಟ್ಟಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.