ವಿವಿಧ ಜನಾಂಗಗಳ ಜನಸಂಖ್ಯೆ ಹೆಚ್ಚಾದಲ್ಲಿ ಆಂತರಿಕ ಕಲಹಕ್ಕೆ ದಾರಿ

KannadaprabhaNewsNetwork |  
Published : Jul 20, 2026, 12:15 AM IST
19 ಟಿವಿಕೆ 1 - ತುರುವೇಕೆರೆಯ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಿ.ರಾಮಸ್ವಾಮಿ ಸ್ಮಾರಕ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ದೇಶದ ವಿವಿಧ ಜನಾಂಗಗಳ ಜನಸಂಖ್ಯಾ ಪ್ರಮಾಣ ಏರುಪೇರಾದರೆ ಆಂತರಿಕ ಕಲಹಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅದು ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ನಿಮಾನ್ಸ್ ನ ಮಾಜಿ ಅಧ್ಯಕ್ಷ ಡಿ.ನಾಗರಾಜ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ದೇಶದ ವಿವಿಧ ಜನಾಂಗಗಳ ಜನಸಂಖ್ಯಾ ಪ್ರಮಾಣ ಏರುಪೇರಾದರೆ ಆಂತರಿಕ ಕಲಹಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅದು ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ನಿಮಾನ್ಸ್ ನ ಮಾಜಿ ಅಧ್ಯಕ್ಷ ಡಿ.ನಾಗರಾಜ್ ಎಚ್ಚರಿಸಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ಸುರಭಿ ಸಂಗಮ, ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕರ್ನಾಟಕ ಬ್ಯಾಂಕ್ ಸ್ಥಳೀಯ ಶಾಖೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸಿದ್ದ ಸ್ವಾತಂತ್ರ್ಯಯೋಧ ಡಿ.ರಾಮಸ್ವಾಮಿ ಸ್ಮಾರಕ ಚರ್ಚಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮತಾಂತರ ಅಥವಾ ಅನ್ಯ ಜನಾಂಗೀಯ ನುಸುಳುವಿಕೆಯ ಹಿನ್ನಲೆಯಲ್ಲಿ ದೇಶದ ಮೂಲ ನಿವಾಸಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಬಹುದು. ಪರಕೀಯ ಧರ್ಮ, ಸಂಸ್ಕೃತಿಯ ಆಕ್ರಮಣಕ್ಕೆ ಒಳಗಾಗಬಹುದು. ಇದು ಧಾರ್ಮಿಕ ಸಂಘರ್ಷ ಮತ್ತು ಅಸ್ತಿತ್ವದ ಮೇಲಾಟಕ್ಕೆ ಕಾರಣವಾಗಿ ಅಂತಃಯುದ್ಧ ಸಂಭವಿಸಬಹುದು. ಇಂಡೋನೇಷಿಯ, ಸುಡಾನ್ ಮೊದಲಾದ ದೇಶಗಳು ಜನಾಂಗೀಯ ಸಂಘರ್ಷಕ್ಕೆ ಬಲಿಯಾಗಿ ಒಡೆದು ಛಿದ್ರವಾಗಿವೆ. ಹಾಗಾಗಿ ದೇಶದ ವಿವಿಧ ಜನಾಂಗಗಳ ಜನಸಂಖ್ಯಾ ಪ್ರಮಾಣ ಮತ್ತು ಅನುಪಾತ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾಜಿ ಅಧ್ಯಕ್ಷ ಡಾ. ಬಿ.ಎನ್. ಗಂಗಾಧರ್ ಜನಸಂಖ್ಯೆಯ ವೇಗಕ್ಕೆ ತನ್ನದೇ ಆದ ಚಲನಗತಿ ಇದೆ. ತಕ್ಷಣಕ್ಕೆ ನಿಯಂತ್ರಣಕ್ಕೆ ಸಿಗಲಾರದು. ಹಾಗಾಗಿ ಮುಂದಾಲೋಚನೆಯ ಕಾಲಮಿತಿಯ ಯೋಜನೆಗಳು ಅವಶ್ಯ. ಗುಣಮಟ್ಟದ ಉತ್ಪಾದಕ ಜನಸಂಖ್ಯೆಯು ದೇಶದ ಒಂದು ಅಮೂಲ್ಯ ಸಂಪನ್ಮೂಲವೆನಿಸಿದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕಿಂತ ಜನಸಂಖ್ಯೆಯ ನಿರ್ವಹಣೆಗೆ ಆಧ್ಯತೆ ನೀಡಬೇಕಿದೆ ಎಂದರು. ಪ್ರಿಯಾ ಇಂಗ್ಲೀಷ್ ಶಾಲೆ ಮತ್ತು ಜೆ.ಪಿ.ಆಂಗ್ಲಶಾಲೆಯ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಪಾರಿತೋಷಕ ಪಡೆದರು. ಪ್ರಿಯಾ ಆಂಗ್ಲಶಾಲೆಯ ವಿದ್ಯಾರ್ಥಿನಿ ಡಾಲಿಯಾಮೃತ, ಜೆ.ಪಿ. ಆಂಗ್ಲಶಾಲೆಯ ಅಫ್ಸಾ, ಇಂಡಿಯನ್ ಪಬ್ಲಿಕ್ ಶಾಲೆಯ ಸುಚಲ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಚೌದ್ರಿ ನಾಗೇಶ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ.ಪಂ. ಮಾಜಿ ಸದಸ್ಯ ಟಿ.ಕೆ. ಚಿದಾನಂದ್, ಉದ್ಯಮಿ ಎಂ.ಡಿ.ಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ. ಸುನಿಲ್ ಬಾಬು, ಕಾರ್ಯದರ್ಶಿ ಎಸ್.ವಿ.ರವಿ, ಖಜಾಂಚಿ ಕೆ.ಎನ್. ಆನಂದ್, ಕರ್ನಾಟಕ ಬ್ಯಾಂಕ್ ಅಧಿಕಾರಿ ವಿನಯ್ ರಾಮಕೃಷ್ಣ ಹೆಗಡೆ, ಎಸ್.ಎಂ.ಕುಮಾರಸ್ವಾಮಿ, ತುರುವೇಕೆರೆ ಪ್ರಸಾದ್, ಗುಡ್ಡೇನಹಳ್ಳಿ ಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾಸಕ ಹರ್ಷ, ಚಿದಂಬರೇಶ್ವರ ಗ್ರಂಥಾಲಯ ಸಂಸ್ಥಾಪಕ ಟಿ.ರಾಮಚಂದ್ರು, ನಿವೃತ್ತ ಶಿಕ್ಷಕ ಸಿ.ಪಿ.ಪ್ರಕಾಶ್ ತೀರ್ಪುಗಾರರಾಗಿದ್ದರು. . ರುದ್ರಯ್ಯ ಹಿರೇಮಠ್ ಸ್ವಾಗತಿಸಿದರು. ಎಚ್.ಆರ್. ರಂಗನಾಥ್ ವಂದಿಸಿದರು. ಗಂಗಾಧರ ದೇವರಮನೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ
ಅನುಮತಿ ಬಳಿಕ ಶರಾವತಿ ಪಂಪ್ಡ್‌ ಸ್ಟೋರೇಜ್‌ ಶುರು : ಡಿಕೆ