ಏರುತ್ತಿರುವ ಬಿಸಿಲ ತಾಪ: ಹೊಂಡಗಳತ್ತ ಜನರ ಮುಖ

KannadaprabhaNewsNetwork |  
Published : Apr 29, 2024, 01:40 AM ISTUpdated : Apr 29, 2024, 09:54 AM IST
ಪೋಟೋ೨೮ಸಿಎಲ್‌ಕೆ೦೧ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ಕೃಷಿ ಹೊಂಡದಲ್ಲಿ ಮಕ್ಕಳು, ಯುವಕರು ಬಿಸಿಲ ತಾಪತಣಿಸಿಕೊಂಡರು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ದಿನೇ ದಿನೇ ಏರುತ್ತಿರುವ ಬಿಸಿಲಬೇಗೆ ಭೀಕರತೆ ಸೃಷ್ಟಿಸುತ್ತಿದೆ. ಮಾರ್ಚ್ ಕೊನೆ ವಾರಕಳೆಯುತ್ತಿದ್ದರೂ ಮಳೆಬಾರದೆ ಜನ, ಜಾನುವಾರುಗಳು ಕುಡಿಯುವ ನೀರು, ಮೇವಿಗಾಗಿ ಅವಣಿಸುತ್ತಿವೆ.

ಚಳ್ಳಕೆರೆ: ತಾಲೂಕಿನಾದ್ಯಂತ ದಿನೇ ದಿನೇ ಏರುತ್ತಿರುವ ಬಿಸಿಲಬೇಗೆ ಭೀಕರತೆ ಸೃಷ್ಟಿಸುತ್ತಿದೆ. ಮಾರ್ಚ್ ಕೊನೆ ವಾರಕಳೆಯುತ್ತಿದ್ದರೂ ಮಳೆಬಾರದೆ ಜನ, ಜಾನುವಾರುಗಳು ಕುಡಿಯುವ ನೀರು, ಮೇವಿಗಾಗಿ ಅವಣಿಸುತ್ತಿವೆ.

ತಾಲೂಕಿನಲ್ಲಿ ಬರೋಬ್ಬರಿ 40, 41 ಡಿಗ್ರಿಯಷ್ಟು ಬಿಸಿಲ ತಾಪಮಾನ ಏರುತ್ತಲೇ ಇದೆ. ಪರಿಣಾಮ ಜನರು ಬಿಸಿಲಿನಿಂದ ಹೈರಾಣಾದ ದೇಹಕ್ಕೆ ತಂಪು ನೀಡಲು ಹಲವು ಮಾರ್ಗಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ತಂಪುಪಾನಿಯಗಳತ್ತ ಮುಖ ಮಾಡಿದರೆ, ಕೆಲವರು ಕೃಷಿ ಹೊಂಡ, ಬಾವಿಗಳಲ್ಲಿ ಈಜಾಡಿ ಬಿಸಿಗ ಧಗೆ ನೀಗಿಸಿಕೊಳ್ಳುತ್ತಿದ್ದಾರೆ.

ಏರುತ್ತಿರುವ ತಾಪಮಾನದಿಂದ ಮಧ್ಯಾಹ್ನ ವೇಳೆಗೆ ನಗರ ಸಂಪೂರ್ಣ ಸ್ತಬ್ಧವಾಗುತ್ತಿದೆ. ಗ್ರಾಮೀಣ ಭಾಗಗಳಿಂದ ಬರುವ ಜನರೂ ಸಹ ನಗರಕ್ಕೆ ಬಾರದೆ ನಗರ ಸಂಪೂರ್ಣ ಬಣಗುಡುತ್ತಿದೆ. ಹೊರಗಡೆ ಸುಡುವ ಬಿಸಿಲು, ಮನೆಯೊಳಗೆ ಉಸಿರುಗಟ್ಟಿಸುವ ಧಗೆಯಿಂದ ಜನರು ನರಳುವಂತಾಗಿದೆ. ಹೊರಗೆ ಹೋಗಲಾಗದೇ, ಮನೆಯೊಳಗೂ ಕೂರಲಾಗದೇ ಜನರು ಪರದಾಡುತ್ತಿದ್ದಾರೆ. ವಾತಾವರಣದಲ್ಲೂ ಹಸಿರು ಮಾಯವಾಗಿ ಎಲ್ಲೆಲ್ಲೂ ಒಣಗಿದ ಗಿಡ ಮರಗಳೇ ಕಾಣಿಸುತ್ತಿವೆ. ಜನರು ತೋಟಗಳತ್ತ ಮುಖಮಾಡಿ ನೀರಿನಲ್ಲಿ ಈಜಾಡಿ ಮರ, ಗಿಡಗಳ ಕೆಳಗೆ ತಮ್ಮ ದಾಣಿವಾರಿಸಿಕೊಳ್ಳುತ್ತಿದ್ದಾರೆ.

ಜನರು ಬೇಗನೇ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರೂ ಸಹ ಮಳೆಬಾರದೇ ಪ್ರತಿದಿನ ಏರುತ್ತಿರುವ ಬಿಸಿಲಿಗೆ ನಲುಗಿದ್ದಾರೆ. ಜನರು ತಂಪು ಪಾನೀಯ, ಎಳೆನೀರು, ಮಜ್ಜಿಗೆ, ಕಲ್ಲಂಗಡಿ, ಮೊರೆಹೋಗಿ ಬಿಸಿಲಿನ ತಾಪವನ್ನು ಸಹಿಸಿಕೊಳ್ಳುತ್ತಿರುವುದು ಎಲ್ಲಡೆ ಕಂಡುಬರುತ್ತಿದೆ. ಇದ್ದಕ್ಕಿದ್ದಂತೆ ಬಿಸಿಲು ಹೆಚ್ಚಾಗಿರುವುದು ಪಕೃತಿಯ ಅಸಮತೋಲನವನ್ನು ಸೂಚಿಸುತ್ತಿದೆ.

ತಾಲೂಕಿನ ಮನ್ನಮೈನಹಟ್ಟಿ, ನಾಯಕನಹಟ್ಟಿ, ನನ್ನಿವಾಳ, ಗರ‍್ಲಕಟ್ಟೆ, ಬುಡ್ನಹಟ್ಟಿ, ಗೋಪನಹಳ್ಳಿ ಭಾಗಗಳಲ್ಲಿ ಕೃಷಿ ಹೊಂಡಕ್ಕೆ ಮುಗಿಬಿದ್ದರೆ, ಕಾಪರಹಳ್ಳಿ, ಜಡೇಕುಂಟೆ, ಕಲಮರಹಳ್ಳಿ, ಕಸವಿಗೊಂಡನಹಳ್ಳಿ, ಮೈಲನಹಳ್ಳಿ ಗ್ರಾಮದ ಜನರು ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಿದ ಪರಿಣಾಮ ನದಿಯಲ್ಲಿ ಮಕ್ಕಳು, ಮಹಿಳೆಯರು ಈಜಾಡಿ ತಮ್ಮ ಬೇಸಿಗೆ ದಣಿವು ಆರಿಸಿಕೊಳ್ಳುತ್ತಿದ್ದಾರೆ.

ಮಣ್ಣಿನ ಮಡಿಕೆ ಮೊರೆಹೋದ ಜನರು: ನಗರದ ಕೆಲವು ಭಾಗಗಳಲ್ಲಿ ನಮ್ಮ ಪಾರಂಪರಿಕ ಮಣ್ಣಿನ ಮಡಿಕೆಗೆ ಬೇಡಿಕೆಯೂ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಮಣ್ಣಿನ ಮಡಿಕೆ ತಯಾರಿಕೆ ಮತ್ತು ಮಾರಾಟವೂ ಕಡಿಮೆಯಾದ ಕಾರಣ ಅವುಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ಮಣ್ಣಿನ ಸೋರೆಗೆ ಸುಮಾರು 350 ರಿಂದ 400 ರು.ವರೆಗೂ ಮಾರಾಟ ಮಾಡುತ್ತಿದೆ. ಜನರೂ ಆಧುನಿಕತೆಯಲ್ಲೂ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿರುವುದು ಉತ್ತಮ ಬೆಳವಣಿಗೆಯೂ ಆಗಿದೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?