ಹೊಸಪೇಟೆ: ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು 1ಲಕ್ಷ 16 ಸಾವಿರ ಕ್ಯುಸೆಕ್‌ಗೆ ತಲುಪಿದ್ದು, ಜಲಾಶಯದಲ್ಲಿ 65.110 ಟಿಎಂಸಿ ನೀರು ಸಂಗ್ರಹವಾಗಿದೆ. ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಬಹುದು. ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಆಯಾ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ವಿಜಯನಗರ ಜಿಲ್ಲೆಯ ಹಂಪಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಭಾಗದಲ್ಲಿ ತೊಂದರೆ ಆಗಲಿದೆ. ನದಿಯಿಂದ ಒಮ್ಮೆಲೆ ನೀರು ಬಿಟ್ಟರೆ ಈ ಪ್ರದೇಶದಲ್ಲಿ ತೊಂದರೆ ಆಗಲಿದೆ. ಇನ್ನು ಮಂತ್ರಾಲಯ ಪ್ರದೇಶದಲ್ಲೂ ತೊಂದರೆ ಆಗಲಿದೆ. ನದಿಪಾತ್ರದ ಹಳ್ಳಿ, ಪಟ್ಟಣಗಳ ಜನರು ಎಚ್ಚರಿಕೆ ವಹಿಸಲು ತುಂಗಭದ್ರಾ ಮಂಡಳಿ ಸೂಚಿಸಿದೆ. ಇದರಿಂದ ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಸ್ಥಳೀಯಾಡಳಿತಗಳು ತುಂಗಭದ್ರಾ ನದಿ ರಭಸವಾಗಿ ಹರಿಯಲಿದ್ದು, ಎಚ್ಚರಿಕೆ ವಹಿಸಲು ಡಂಗೂರ ಸಾರುತ್ತಿವೆ.