ನಾಪೋಕ್ಲು: ಕೊಡಗಿನ ಕಾಡ್ಯಮಾಡ ರಿಯಾ ಅಚ್ಚಯ್ಯ ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದಾರೆ.
ಮೈಸೂರು ವಿಜಯನಗರದ ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಅನ್ನು ಡಿಸ್ಟಿಂಕ್ಷನ್‌ನಲ್ಲಿ ಪೂರ್ಣಗೊಳಿಸಿದ ಕಾಡ್ಯಮಾಡ ರಿಯಾ ಅಚ್ಚಯ್ಯ ಅವರು ಮೈಸೂರಿನ ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದು, ಹಿಂದೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಾಗಿ 2 ಕಂಚು ಗೆದ್ದ ಅಂತಾರಾಷ್ಟ್ರೀಯ ಸ್ಕೇಟರ್ ಕೂಡ ಆಗಿದ್ದಾರೆ.
ಇವರು ಮೂಲತಃ ಗೋಣಿಕೊಪ್ಪಲಿನ ಅತ್ತೂರಿನವರಾದ, ಇದೀಗ ಮೈಸೂರಿನಲ್ಲಿ ನೆಲೆಸಿರುವ ಕಾಡ್ಯಮಾಡ ಅರುಣ್ ಅಚ್ಚಯ್ಯ ಮತ್ತು ಪ್ರಿಯಾ ದಂಪತಿಯ ಪುತ್ರಿಯಾಗಿದ್ದಾರೆ.