ರಿಜ್ವಾನ್ ಮುದ್ದಾಬಳ್ಳಿಗೆ ತಬಲಾ ನರ್ತನ ಪ್ರವೀಣ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Oct 27, 2023, 12:30 AM IST
ಫೋಟುಃ-26ಜಿಎನ್ಜಿ 3- ಗಂಗಾವತಿ ನಗರದ ಖ್ಯಾತ ತಬಲಾ ವಾದಕರಾದ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರಿಗೆ ತಾಲೂಕಿನದಾಸನಾಳ ಗ್ರಾಮದಲ್ಲಿ ‘ತಬಲಾ ನರ್ತನ ಪ್ರವೀಣ’ ಪ್ರಶಸ್ತಿ ಪ್ರಧಾನಮಾಡಲಾಯಿತು  | Kannada Prabha

ಸಾರಾಂಶ

ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ ನಾಡಿನಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ತಬಲಾ ವಾದನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಸಂಗೀತ ಶಾಲೆ ತೆರೆದು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಮುದ್ದಾಬಳ್ಳಿ ಕುಟುಂಬದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಗಂಗಾವತಿ: ನಗರದ ಖ್ಯಾತ ತಬಲಾ ವಾದಕ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ ಅವರಿಗೆ ತಾಲೂಕಿನ ದಾಸನಾಳ ಗ್ರಾಮದಲ್ಲಿ ತಬಲಾ ನರ್ತನ ಪ್ರವೀಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಾಸನಾಳ ಗ್ರಾಮದ ಶ್ರೀದುರ್ಗಾದೇವಿಯ 16ನೇ ವರ್ಷದ ಶರನ್ನವರಾತ್ರಿ ಪುರಾಣ ಮಹಾಮಂಗಳ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ ನಾಡಿನಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ತಬಲಾ ವಾದನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಸಂಗೀತ ಶಾಲೆ ತೆರೆದು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಮುದ್ದಾಬಳ್ಳಿ ಕುಟುಂಬದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಈ ಸಂದರ್ಭದಲ್ಲಿ ದಾಸನಾಳ ಗ್ರಾಮದ ವೇದಮೂರ್ತಿ ಬಸಣ್ಣಯ್ಯ ಹಿರೇಮಠ ಸ್ವಾಮಿಗಳು ಶಿವಯ್ಯ ತಾತನವರು, ಮಲ್ಲಿಕಾರ್ಜುನ ಗೌಡ್ರು, ಡಾ.ತಿಮ್ಮಣ್ಣ ಭೀಮರಾಯ, ಶಿವಲಿಂಗಯ್ಯ ಶಾಸ್ತ್ರಿಗಳು, ಭೀಮನಗೌಡ, ಹನುಮನಗೌಡ ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ