ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ

KannadaprabhaNewsNetwork |  
Published : Nov 21, 2026, 02:15 AM IST
ಜೊಯಿಡಾ  20 ಶುಕ್ರವಾರ | Kannada Prabha

ಸಾರಾಂಶ

ಔರಾದ್- ಸದಾಶಿವಗಡ ರಾಜ್ಯ ಹೆದ್ದಾರಿ 34 ನುಜ್ಜಿಯಿಂದ ಬಾಡಪೋಲಿ ತನಕ ಸಂಪೂರ್ಣ ಹಾಳಾಗಿದ್ದು, ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗುವ ಪ್ರಯಾಣಿಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಗರ್ಭಿಣಿ ಬಾಣಂತಿಯರೂ ಸೇರಿದಂತೆ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು.

ಜೋಯಿಡಾ: ತೀವ್ರವಾಗಿ ಹದಗೆಟ್ಟಿರುವ ತಾಲೂಕಿನಲ್ಲಿ ಹಾದುಹೋಗಿರುವ ಔರಾದ್- ಸದಾಶಿವಗಡ ರಾಜ್ಯ ಹೆದ್ದಾರಿ 34ಅನ್ನು ದುರಸ್ತಿಗೆ ಒತ್ತಾಯಿಸಿ ಶುಕ್ರವಾರ ಅಣಶಿಯಲ್ಲಿ ಕುಣಬಿ ಸಮಾಜ ಹಾಗೂ ಸ್ಥಳೀಯರು ಸೇರಿ ರಸ್ತೆತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಔರಾದ್- ಸದಾಶಿವಗಡ ರಾಜ್ಯ ಹೆದ್ದಾರಿ 34 ನುಜ್ಜಿಯಿಂದ ಬಾಡಪೋಲಿ ತನಕ ಸಂಪೂರ್ಣ ಹಾಳಾಗಿದ್ದು, ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗುವ ಪ್ರಯಾಣಿಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಗರ್ಭಿಣಿ ಬಾಣಂತಿಯರೂ ಸೇರಿದಂತೆ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು.

ಅಧಿಕಾರಿಗಳ ತರಾಟೆ: ಸದಾಶಿವಗಡ- ಔರಾದ್ ರಾಜ್ಯ ಹೆದ್ದಾರಿ 34 ಅಭಿವೃದ್ಧಿ ಪಡಿಸಲು ₹3 ಕೋಟಿ ಅನುದಾನವನ್ನು ಶಾಸಕ ಆರ್.ವಿ. ದೇಶಪಾಂಡೆ ಅವರು ಮಂಜೂರು ನೀಡಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಟೀಕಿಸಿದರು.ಪ್ರಯಾಣಿಕರಿಗೆ ತೊಂದರೆ: ಅಣಶಿಯಲ್ಲಿ ನಡೆದ ರಸ್ತೆತಡೆಯಿಂದ ನೂರಾರು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಅನೇಕ ಬಸ್, ಜೀಪ್, ಕಾರು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.ತಹಸೀಲ್ದಾರರಿಗೆ ಮನವಿ: ನ. 30ರ ಒಳಗೆ ರಸ್ತೆಯನ್ನು ದುರಸ್ತಿ ಮಾಡಬೇಕು. ಅಲ್ಲಿಯವರೆಗೆ ಪ್ರತಿದಿನ ರೋಲಿಂಗ್ ಮಾಡಿ ರಸ್ತೆಗೆ ನೀರು ಹಾಕಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸದಿದ್ದರೆ ಕಚೇರಿ ಎದುರು ನಿರಂತರ ಹೋರಾಟ ಮಾಡಲಾಗುವುದು ಎಂದು ತಹಸೀಲ್ದಾರ್ ಪ್ರಕಾಶ್ ಎಂ. ಕಲ್ಲೋಳ್ಳಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಬಸವರಾಜ ಎಸ್. ಇದ್ದರು. ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಜಗದೀಶ ನಾಯ್ಕ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕೃಷ್ಣ ಮಿರಾಶಿ, ದಿವಾಕರ ಕುಂಡಲಕರ, ಪುಷ್ಪಾ ವೇಳಿಪ, ಸತೀಶ್ ದೇಸಾಯಿ, ರಾಮಕೃಷ್ಣ ಪೇಡ್ನೆಕರ, ಸಂದೀಪ್ ನಾಯ್ಕ, ವಿನಯ ದೇಸಾಯಿ, ಅರುಣ್ ಕಾಮರೇಕರ, ಮಾಬಳು ಕುಂಡಲಕರ, ಆಕಾಶ್ ಅನಸ್ಕರ್, ಸುಭಾಷ್ ವೇಳಿಪ, ಸಿದ್ದು ಜೊಕೆರ, ರಾಜೇಶ್ ದೇಸಾಯಿ, ನಾಮದೇವ ಗಾವಡಾ, ಗಜಾನನ ನಾಯ್ಕ, ಸೀತಾರಾಮ ಅಣಶಿಕರ, ವೀರೇಂದ್ರ ಗಾವಡಾ, ಶಶಿಕಾಂತ ದೇಸಾಯಿ, ಮಾಮನ ದೇಸಾಯಿ, ಕೃಷ್ಣ ಮಸ್ಕರ ಇತರರು ಇದ್ದರು.ಹೋರಾಟಗಾರರ ಬಂಧನ

ಅಣಶಿಯಲ್ಲಿ ರಸ್ತೆತಡೆ ನಡೆಯುತ್ತಿದ್ದಂತೆ ಜೋಯಿಡಾ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಮುಖಂಡರನ್ನು ಬಂಧಿಸಿದರು. ಕುಣಬಿ ಸಮಾಜದ ಅಧ್ಯಕ್ಷರಾದ ಪ್ರೇಮಾನಂದ ವೇಳಿಪ, ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ, ರವಿ ರೆಡಕರ್, ಅಜಿತ್ ಮಿರಾಶಿ, ದಯಾನಂದ ಕುಮಗಾಳಕ, ರಾಜಕುಮಾರ ವೇಳಿಪ, ಎಂ.ಎಸ್. ಕಾಜುಗಾರ, ಕೃಷ್ಣ ಅಣಶಿಕರ, ಅಲಕೇಶ ದೇಸಾಯಿ, ಅಖಿಲ ದೇಸಾಯಿ, ಸುರೇಶ್ ಗಾವಡಾ, ವಿನೋದ್ ದೇಸಾಯಿ, ಗಜಾನನ ವೇಳಿಪ, ವಸಂತ ವೇಳಿಪ, ಪ್ರಭಾಕರ ನಾಯ್ಕ, ಸದಾಶಿವ ದೇಸಾಯಿ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ
ಗುಡ್ಡದ ಮಣ್ಣು ತೆಗೆಯುವುದಕ್ಕೆ ವಿರೋಧ