-ಯಾದಗಿರಿ ನಗರದ ರೈಲ್ವೆ ಸೇತುವೆಯ ಅಪ್ರೋಚ್ ರಸ್ತೆ ಬಿರುಕು
ಕನ್ನಡಪ್ರಭಾ ವಾರ್ತೆ ಯಾದಗಿರಿ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಯಾದಗಿರಿ ನಗರದಲ್ಲಿ ಹಾದು ಹೋಗುವ ವನಮಾರಪಲ್ಲಿ ರಾಯಚೂರು (ರಾಷ್ಟ್ರೀಯ ಹೆದ್ದಾರಿ-15) ರಸ್ತೆಯ ಕಿ.ಮೀ. 214ರಲ್ಲಿ (ಯಾದಗಿರಿ ನಗರದ ರೈಲ್ವೆ ಸೇತುವೆಯ ಅಪ್ರೋಚ್ ರಸ್ತೆ) ಬಿರುಕು ಬಿಟ್ಟು ಹಾನಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನೀಯರ ತಿಳಿಸಿದ್ದಾರೆ. ಈ ರಸ್ತೆಯು ಸತತ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ತಡೆಗೋಡೆಯೂ ಒಂದು ಕಡೆ ವಾಲಿರುವ ಪ್ರಯಕ್ತ ಸಂಪೂರ್ಣವಾಗಿ ಭೂಕುಸಿತ ಹೊಂದಿ ಅವಘಡವಾಗುವ ಸಂಭವವಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಈ ಕೂಡಲೇ ಭಾರಿ ಮತ್ತು ಲಘು ವಾಹನಗಳ ಸಂಚಾರ ನಿಷೇಧಿಸಿದೆ.ಸೆ.9 ರಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ, ಜಿಲ್ಲಾ ವರಿಷ್ಠಾಧಿಕಾರಿಗಳು ಅವರೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಭಾರಿ ಮತ್ತು ಲಘು ವಾಹನಗಳ ಸಂಚಾರ ನಿಷೇಧಿಸುವಂತೆ ನಿರ್ದೇಶಿಸಿರುವ ಹಿನ್ನೆಲೆ ಭಾರೀ ಮತ್ತು ಲಘು ವಾಹನಗಳಿಗೆ ಗುರುಸುಣಗಿ ಕ್ರಾಸ್ ಮುಖಾಂತರ ಪರ್ಯಾಯ ರಸ್ತೆ ಉಪಯೋಗಿಸುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಕ್ರಮ ವಹಿಸಲು ಹಾಗೂ ಬಿರುಕು ಬಿದ್ದಿರುವ ಸ್ಥಳಕ್ಕೆ ಸಾರ್ವಜನಿಕರ ನಿರ್ಬಂಧಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಕ್ರಮ ವಹಿಸುವಂತೆ ಅವರು ತಿಳಿಸಿದ್ದಾರೆ.
------11ವೈಡಿಆರ್2: ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮೇಲ್ಸೇತುವೆ ಭೂಕುಸಿತಗೊಂಡಿದ್ದು, ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.