ನರಗುಂದ: ತಾಲೂಕಿಗೆ ಹೊಂದಿಕೊಂಡಿರುವ ಕುರ್ಲಗೇರಿ ಗ್ರಾಮದ ಪಕ್ಕ ಬೆಣ್ಣಿ ಹಳ್ಳದ ಸೇತುವೆ ಪಕ್ಕ ರಸ್ತೆ ಶುಕ್ರವಾರ ಕುಸಿದಿದ್ದರಿಂದ ನರಗುಂದ-ಗದಗ ಒಳ ರಸ್ತೆಗಳಲ್ಲಿ ಬಸಗಳ ಓಡಾಟ ನಿಂತಿದೆ.
ಇದೇ ರಸ್ತೆಯಲ್ಲಿ ಓಡಾಟ:ಬೆಣ್ಣಿ ಹಳ್ಳದ ಸೇತುವೆ ಬಳಿ ರಸ್ತೆ ಕುಸಿದಿದೆ. ಇದೇ ರಸ್ತೆಯಲ್ಲಿ ಬೈಕ್, ಲಘು ವಾಹನಗಳು ಸಂಚರಿಸುತ್ತಿವೆ. ಆದರೆ ಕುಸಿದ ರಸ್ತೆ ಪಕ್ಕದಲ್ಲಿ ಮತ್ತೆ ಯಾವಾಗ ಕುಸಿಯುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ, ಆದರೆ ಈ ಅಪಾಯದ ರಸ್ತೆಯಲ್ಲಿ ಜನರು ಓಡಾಟ ಮಾಡಿದರೂ ಕೂಡ ಸಂಬಂಧ ಪಟ್ಟ ಇಲಾಖೆಯವರು ಮತ್ತು ಪೊಲೀಸರು ಈ ಸ್ಥಳಕ್ಕೆ ಬಂದು ರಸ್ತೆಯಲ್ಲಿ ವಾಹನ ಸಂಚಾರ ನಿಲ್ಲಿಸದೆ ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕುರ್ಲಗೇರಿ ಬಳಿಯ ಬೆಣ್ಣಿ ಹಳ್ಳದ ಸೇತುವೆ ಬಳಿ ರಸ್ತೆ ಕುಸಿದಿದ್ದರಿಂದ ನರಗುಂದಿಂದ-ಗದುಗಿಗೆ ಹೋಗುವ ಒಳ ಮಾರ್ಗದಲ್ಲಿ ಓಡಾಟ ಮಾಡುವ ಬಸ್‌ಗಳನ್ನು ಬಂದ್ ಮಾಡಲಾಗಿದೆ. ಶಾಲಾ ಮಕ್ಕಳಿಗೆ ತೊಂದರೆ ಆಗಬಾರದೆಂದು ಕುರ್ಲಗೇರಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಪ್ರತಿ ದಿವಸ ಬಸಗಳ ಓಡಾಟದ ಹಾಗೆ ಬಸ್‌ಗಳ ಸಂಚಾರ ಆ ಗ್ರಾಮಕ್ಕೆ ಇದೆ ಎಂದು ಕೆಎಸ್‌ಆರ್‌ಟಿಸಿ ತಾಲೂಕು ವ್ಯವಸ್ಥಾಪಕ ಪರಶುರಾಮ ಪ್ರಭಾಕರ ಹೇಳಿದರು.ಪ್ರತಿ ದಿವಸ ಜಿಲ್ಲಾ ಕೇಂದ್ರಕ್ಕೆ ಮತ್ತು ನರಗುಂದಕ್ಕೆ ಬೇರೆ ತಾಲೂಕಿನ ವಿದ್ಯಾರ್ಥಿಗಳು ಶಿಕ್ಷಣ ಕಲಿಯುಲು ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಆದ್ದರಿಂದ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ರಸ್ತೆ ಬೇಗ ದುರಸ್ತಿ ಮಾಡಬೇಕು ಎಂದು ಕುರ್ಲಗೇರಿ ಗ್ರಾಮಸ್ಥ ಯಲ್ಲಪ್ಪ ಚಲವಣ್ಣವರ ಹೇಳಿದರು.