ಕನ್ನಡಪ್ರಭ ವಾರ್ತೆ ನಾಪೋಕ್ಲು
ಮರದೊಡ ಸಮೀಪದ ಡಿಂಜಿ ಮೊಟ್ಟೆ ಎಂಬಲ್ಲಿ ನಡಿಕೇರಿಯಂಡ ಮನೆಯ ಪಕ್ಕದ ರಸ್ತೆಗೆ ಭಾರಿ ಗಾತ್ರದ ಮರ ಒಂದು ಉರುಳಿ ಬಿದ್ದು ವಾಹನ ಸಂಚಾರಕ್ಕೆ ಸಂಪರ್ಕ ಅಡಚಣೆ ಉಂಟಾಯಿತು. ಇದರಿಂದಾಗಿ ಪರ್ಯಾಯ ರಸ್ತೆಯಾದ ಕೋಕೇರಿ ರಸ್ತೆಯನ್ನು ವಾಹನಗಳು ಬಳಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಗ್ರಾಮಸ್ಥರು ಶ್ರಮ ವಹಿಸಿ ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಕೊಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೋಯಮಾಡಂಡ ಹರೀಶ್ ಪೊನ್ನಪ್ಪ, ಗಿರೀಶ್ ಪೂವಯ್ಯ , ಮನೋಜ್, ಮೇರಿಯಂಡ ಅಪ್ಪಣ್ಣ, ನಾಚಪ್ಪ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿ ಸಹಕರಿಸಿದರು.