ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಕ್ರೆಡೈ ಅಧ್ಯಕ್ಷರು, ಸದಸ್ಯರು ಮತ್ತು ಎಸಿಸಿಇ ಕಾರ್ಯದರ್ಶಿಯವರೊಂದಿಗೆ ಶುಕ್ರವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸಮಸ್ಯೆಗಳನ್ನು ಪರಿಶೀಲಿಸಿದರು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಕ್ರೆಡೈ ಅಧ್ಯಕ್ಷರು, ಸದಸ್ಯರು ಮತ್ತು ಎಸಿಸಿಇ ಕಾರ್ಯದರ್ಶಿಯವರೊಂದಿಗೆ ಶುಕ್ರವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸಮಸ್ಯೆಗಳನ್ನು ಪರಿಶೀಲಿಸಿದರು.

ಸಂಘನಿಕೇತನ (ಮಣ್ಣಗುಡ್ಡ), ಉರ್ವ-ಚಿಲಿಂಬಿ, ಕೊಟ್ಟಾರ ಚೌಕಿ, ಕೆಪಿಟಿ–ಯೆಯ್ಯಾಡಿ ರಸ್ತೆ, ಶಕ್ತಿನಗರ, ಹಂಪನಕಟ್ಟೆ, ಪಂಪ್‌ವೆಲ್ ಹೆದ್ದಾರಿ ಹಾಗೂ ಕುಂಟಿಕಾನ ಹೆದ್ದಾರಿ ಪ್ರದೇಶಗಳಿಗೆ ಭೇಟಿ ನೀಡಿದರು. ಈ ವೇಳೆ ಒಳಚರಂಡಿ ವ್ಯವಸ್ಥೆ, ಮಳೆನೀರು ಚರಂಡಿ ನಿರ್ವಹಣೆ, ಕಾಲುದಾರಿ ಹಾಗೂ ರಸ್ತೆ ಸಮಸ್ಯೆಗಳ ಕುರಿತು ಕ್ರೆಡೈ ಸದಸ್ಯರು ಆಯುಕ್ತರಿಗೆ ಮಾಹಿತಿ ನೀಡಿದರು. ಕೈಗೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳ್ಳಬೇಕಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ವಿವರಿಸಿದರು.ಮೂಲಸೌಕರ್ಯ ಹಾಗೂ ರಸ್ತೆ ಅಭಿವೃದ್ಧಿ ಕುರಿತು ಚರ್ಚಿಸಿದ ಆಯುಕ್ತರು, ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಯೆಯ್ಯಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಸಾಧ್ಯತೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಚಾರ ದಟ್ಟಣೆ ತಪ್ಪಿಸಲು ಸೂಕ್ತ ಬಸ್ ನಿಲ್ದಾಣ ಹಾಗೂ ಬಸ್ ಬೇಗಳನ್ನು ರೂಪಿಸುವಂತೆ ಸಲಹೆ ನೀಡಿದರು.ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಇಂಟರ್‌ಲಾಕಿಂಗ್ ವ್ಯವಸ್ಥೆ ಕಲ್ಪಿಸುವುದು ಹಾಗೂ ಪಾದಚಾರಿಗಳಿಗಾಗಿ ಸಮರ್ಪಕ ಕಾಲುದಾರಿ ನಿರ್ವಹಿಸುವಂತೆ ಸೂಚಿಸಿದರು. ಪಾಲಿಕೆಯ ನಗರ ಯೋಜನಾ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದ್ದರು.