ಶಾಲೆಗೆ ಹೊಂದಿಕೊಂಡಿರುವ ಸರ್ಕಾರಿ ಗೋಮಾಳದ 18 ಗುಂಟೆ ಜಾಗ
ತಾಲೂಕಿನ ಹಡಗಲು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಆಟದ ಮೈದಾನದಲ್ಲಿ ಶುಕ್ರವಾರ ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಶಾಲೆಗೆ ಹೊಂದಿಕೊಂಡಂತಿರುವ ಸರ್ಕಾರಿ ಗೋಮಾಳದ 18 ಗುಂಟೆ ಜಾಗ ಆಟದ ಮೈದಾನವಾಗಿ ಬಳಕೆಯಾಗುತ್ತಿದೆ. ಈ ಜಾಗವನ್ನು ಶಾಲಾ ಆಟದ ಮೈದಾನ ಎಂದು ದಾಖಲಿಸುವಂತೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ ಈ ಜಾಗದಲ್ಲಿ ಜೆಸಿಬಿಗಳು ನೆಲ ಸಮತಟ್ಟಿಗೆ ಬಂದಾಗ ಆಕ್ರೋಶಗೊಂಡ ಸ್ಥಳಿಯರು ಸದ್ಯದಲ್ಲೆ ಗ್ರಾಮದ ಮುಖಂಡರೊಬ್ಬರ ಮನೆ ಗೃಹಪ್ರವೇಶವಿದ್ದು, ಅಲ್ಲಿಗೆ ತೆರಳಲು ಈ ಮೈದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರಕ್ಕೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮದ ಮುಖಂಡರು ಅಡ್ಡ ನಿಂತು ಪ್ರತಿಭಟಿಸಿದ್ದಾರೆ.ಈ ವ್ಯಕ್ತಿ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು ಹಣದ ಪ್ರಭಾವದಿಂದ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಕಾರಣ ಅಧಿಕಾರಿ ಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರ ಆರೋಪಿಸಿದರು. ಈ ವೇಳೆ ಒಂದಿಷ್ಟು ಬಿಗುವಿನ ವಾತಾವರಣ ಉಂಟಾಗಿ ಪೊಲೀಸರು ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರ ವಹಿಸಿದರು.ಸದ್ಯಕ್ಕೆ ಪ್ರತಿಭಟನೆ ಹೆಚ್ಚಾದಂತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿ ಉಳ್ಳವರೇ ಶಾಲೆಯ ಜಾಗವನ್ನು ಕಬಳಿಸಿ ತಮ್ಮ ಮನೆಗಳಿಗೆ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ಶಾಲೆ ಮುಖ್ಯ ಶಿಕ್ಷಕ, ಬಿಇಒ, ಇಒ, ಕಂದಾಯ, ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಉಳ್ಳವರ ಪರವಾಗಿ ನಿಂತಿರುವುದು ದುರಂತ ಎಂದು ಗ್ರಾಮದ ಹಿರಿಯ ಮುಖಂಡರೊಬ್ಬರು ಹೇಳಿದರು. - ಬಾಕ್ಸ್ ಸುದ್ದಿಗೆ--
- ಗಿರೀಶ್ , ಕಂದಾಯ ಅಧಿಕಾರಿ 31ಕೆಕೆಡಿಯು4.