ತರೀಕೆರೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕನ್ನಡಪ್ರಭ ವಾರ್ತೆ, ತರೀಕೆರೆ
ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ವಲಯ -7, ಜಿಲ್ಲೆ-3182, ರೋಟರಿ ಕ್ಲಬ್ ತರೀಕೆರೆಯಿಂದ, ತರೀಕೆರೆಯಿಂದ ಕೊಡಚಾದ್ರಿವರೆಗೆ ರೋಟರಿ ಕ್ಲಬ್ ಸದಸ್ಯರು ಬೈಕ್ ಮತ್ತು ಕಾರ್ ನಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ರಸ್ತೆ ಸುರಕ್ಷತೆ ಮನುಷ್ಯನ ಜೀವನಕ್ಕೆ ಅತಿ ಮುಖ್ಯ. ಹೆಲ್ಮೆಟ್ ರಹಿತ, ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಬಳಕೆ, ಮೂವರ ಸವಾರಿ, ಅತೀವೇಗದಿಂದ ಚಾಲನೆ ಮಾಡುವುದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಸವಾರರು ಸಹಕಾರ ನೀಡಬೇಕೆಂದು ತಿಳಿಸಿದರು. 25ಕ್ಕೂ ಹೆಚ್ಚು ತರೀಕೆರೆ ರೋಟರಿ ಕ್ಲಬ್ ಸದಸ್ಯರು, ರೋಟರಿ ಸೆಂಟ್ರಲ್ ಕ್ಲಬ್, ಶಿವಮೊಗ್ಗ, ರೋಟರಿ ಕ್ಲಬ್, ರಿಪ್ಪನ್ ಪೇಟೆ ಸ್ಥಳಗಳಿಗೆ ಭೇಟಿ ನೀಡಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದ ಮಹತ್ವ ತಿಳಿಸಿದರು. ನಂತರ ಕೊಡಚಾದ್ರಿಗೆ ತೆರಳಿದರು. ದಾರಿಯುವುದ್ದಕ್ಕೂ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರು ಬೈಕ್ ಮತ್ತು ಲಾರಿಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದ ಮಾಹಿತಿ ನೀಡಿ,ಸ್ಟಿಕ್ಕರ್ ಅಂಟಿಸುವ ಮುಖಾಂತರ ಜಾಗೃತಿ ಮೂಡಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪಿ ಡಾ. ಶರತ್ ಜಿ.ಸಿ.,ಬಿ.ವಿ. ದಿನೇಶ್ ಕುಮಾರ್, ಗೋವರ್ಧನ್, ಕಾರ್ಯಕ್ರಮದ ಆಯೋಜಕರಾದ ನವೀನ್ ರಾಜ್, ರಾಜಪ್ಪ, ವೆಂಕಟೇಶ್, ಮಂಜುನಾಥ್ ಬಿ.ಕೆ. ನಾಗ ರಾಜ್, ಕೆ.ಪಿ. ಕುಮಾರ್, ಡಾ.ದೀಪಕ್ , ಡಾ. ಚನ್ನಬಸಪ್ಪ, ಡಾ.ಕಿಶೋರ್ ಕುಮಾರ್ ಬಿ.ವಿ. ಶಿವರಾಜ್, ಪ್ರದೀಪ್ ಇನ್ನಿತರ ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು. ಶಾಸಕರು, ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಲಮೂರ್ತಿರಾವ್ ಮತ್ತಿತರರು ಭಾಗವಹಿಸಿದ್ದರು.-
15ಕೆಟಿಆರ್.ಕೆ,.3ಃತರೀಕೆರೆಯಲ್ಲಿ ನಡೆದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪೊಲೀಸ್ ವರಿಷ್ಠಾಧಿಕಾರಿ ಹಾಲಮೂರ್ತಿರಾವ್ ಮತ್ತಿತರರು ಭಾಗವಹಿಸಿದ್ದರು.