ಸಿಂಧನೂರು: ರಸ್ತೆ ಸುರಕ್ಷತೆ ಎನ್ನುವುದು ಅದು ಘೋಷಣೆಯಲ್ಲ. ಅದು ಜೀವನಶೈಲಿ ಆಗಬೇಕು ಎಂದು ಹಿಸಿ ದೇವಿಕ್ಯಾಂಪ್ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್.ವಿ ಹೇಳಿದರು.
ಶಾಲಾ ಮುಖ್ಯ ಗುರು ಶಂಕರ ದೇವರು ಹಿರೇಮಠ ಮಾತನಾಡಿದರು.
ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, 4ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆಶು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಪಾಲಕರು ಹಾಗೂ ಗ್ರಾಮಸ್ಥರು ರಸ್ತೆ ಸುರಕ್ಷತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗುಡದಪ್ಪ, ಮಾಜಿ ಅಧ್ಯಕ್ಷ ಲಕ್ಷ್ಮಣ, ಅಂಗನವಾಡಿ ಶಿಕ್ಷಕಿ ಭಾಗ್ಯಶ್ರೀ, ಆಶಾಕಾರ್ಯಕಾರ್ತೆ ಶಂಕ್ರಮ್ಮ, ಶಿಕ್ಷಕರಾದ ಪ್ರದೀಪ ಕುಮಾರ, ರೇಣುಕಾ ಇದ್ದರು.