ರಸ್ತೆ ಸುರಕ್ಷತಾ ಸಪ್ತಾಹ: ಬೈಕ್‌, ಕಾರ್‌ ರ್‍ಯಾಲಿ

KannadaprabhaNewsNetwork |  
Published : Feb 01, 2024, 02:01 AM IST
ರ್‍ಯಾಲಿ | Kannada Prabha

ಸಾರಾಂಶ

ಗೋಕುಲ ರಸ್ತೆಯ ಕೆಎಲ್ಇ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ವಿದ್ಯಾನಗರದ ಬಿವಿಬಿ ಕಾಲೇಜು ಕ್ಯಾಂಪಸ್‌ ವರೆಗೆ ರ್ಯಾ ಲಿ ನಡೆಯಿತು.

ಹುಬ್ಬಳ್ಳಿ: ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಇಲ್ಲಿನ ಕೆಎಲ್‌ಇ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಬೈಕ್‌ ಹಾಗೂ ಕಾರ್‌ ರ್‍ಯಾಲಿ ನಡೆಸಲಾಯಿತು.

ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಉತ್ತರ, ಕೆಎಲ್‌ಇ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕೆಎಲ್‌ಇ ತಾಂತ್ರಿಕ ವಿವಿ ಹಾಗೂ ಹುಬ್ಬಳ್ಳಿ ಧಾರವಾಡ ಮೋಟರ್‌ ಡ್ರೈವಿಂಗ್‌ ಸ್ಕೂಲ್‌ ಅಸೋಸಿಯೇಷನ್‌ಗಳ ಸಂಯುಕ್ತಾಶ್ರಯದಲ್ಲಿ ರ್‍ಯಾಲಿ ಆಯೋಜಿಸಲಾಗಿತ್ತು.

ರಸ್ತೆ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂಬ ಧ್ಯೇಯವಾಕ್ಯದಡಿ ನಡೆದ ರ್‍ಯಾಲಿಗೆ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಗೋಕುಲ ರಸ್ತೆಯ ಕೆಎಲ್ಇ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ವಿದ್ಯಾನಗರದ ಬಿವಿಬಿ ಕಾಲೇಜು ಕ್ಯಾಂಪಸ್‌ ವರೆಗೆ ರ‍್ಯಾಲಿ ನಡೆಯಿತು.

ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ., ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ. ದಾಮೋದರ, ಭೀಮನಗೌಡ ಪಾಟೀಲ, ಕೆಎಲ್‌ಇ ಐಟಿ ಪ್ರಾಚಾರ್ಯ ಪ್ರೊ. ಶರದ ಜೋಶಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಅಧ್ಯಕ್ಷ ಡಾ. ನಾಗರಾಜ ಶೆಟ್ಟಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಕಾರ್ಯದರ್ಶಿ ಪ್ರಕಾಶ ಇರಕಲ್ಲ, ಇವೆಂಟ್ ಚೇರಮನ್ ಶಂಕರ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ