ರಸ್ತೆ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ

KannadaprabhaNewsNetwork |  
Published : Jan 10, 2026, 03:00 AM IST
ಡಾ.ಮುರಲೀ ಮೋಹನ ಚೂಂತಾರು | Kannada Prabha

ಸಾರಾಂಶ

ಜನರಲ್ಲಿ ಸುರಕ್ಷಿತ ಪ್ರಯಾಣ ಮತ್ತು ರಸ್ತೆ ಚಾಲನಾ ನಿಯಮಗಳು ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರುಷ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಮಾಸಿಕ ಆಚರಿಸಲಾಗುತ್ತಿದೆ.

ಜನರಲ್ಲಿ ಸುರಕ್ಷಿತ ಪ್ರಯಾಣ ಮತ್ತು ರಸ್ತೆ ಚಾಲನಾ ನಿಯಮಗಳು ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರುಷ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಮಾಸಿಕ ಆಚರಿಸಲಾಗುತ್ತಿದೆ. ಏನಿದು ರಸ್ತೆ ಸುರಕ್ಷಾ ನಿಯಮಗಳು?

ರಸ್ತೆ ಸುರಕ್ಷಾ ನಿಯಮಗಳನ್ನು ವಾಹನ ಚಾಲಕರು ಮತ್ತು ಪಾದಚಾರಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಾವು ನೋವಿನ ಸಂಖ್ಯೆಯನ್ನು ನಿಯಂತ್ರಿಸಬಹುದು ಮತ್ತು ರಾಷ್ಟ್ರೀಯ ಮಾನವ ಸಂಪನ್ಮೂಲದ ಸೋರಿಕೆ ಆಗುವುದನ್ನು ತಪ್ಪಿಸಬಹುದು.

1) ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಶೇಕಡಾ 50 ರಷ್ಟು ಅಪಘಾತಗಳಿಗೆ ಮುಖ್ಯ ಕಾರಣ ಮದ್ಯಪಾನ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

2) ವಾಹನ ಚಾಲನೆ ಮಾಡುವಾಗ ಎಲ್ಲರೂ ಕಡ್ಡಾಯವಾಗಿ ಸೀಟು ಬೆಲ್ಟು ಧರಿಸತಕ್ಕದ್ದು.3) ದ್ವಿಚಕ್ರ ವಾಹನ ಚಾಲಕರು ಮತ್ತು ಜೊತೆ ಪ್ರಯಾಣಿಕರು ಕಡ್ಡಾಯವಾಗಿ ಶಿರ ಕವಚ ಧರಿಸಬೇಕು. BIS ಅನುಮೋದಿತ ISI ಮಾರ್ಕ್ ಉಳ್ಳ ಹೆಲ್ಮೆಟ್ ಬಳಸಿ ರಾಜ್ಯದಲ್ಲಿ ಸಂಭವಿಸಿರುವ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಶೇ 32ರಷ್ಟು ಸವಾರರು ಸಾವಿಗೀಡಾಗಿರುತ್ತಾರೆ. ಹೆಲ್ಮೆಟ್ ಧರಿಸುವುದು ಜೀವರಕ್ಷಣೆ, ಹೆಲ್ಮೆಟ್ ಹೊರೆ ಅಲ್ಲ.4) ವಾಹನ ಚಲಾಯಿಸುವಾಗ ನಿಮ್ಮ ಮುಂದಿನ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ5) ವಾಹನ ಚಲಾವಣೆ ಮಾಡುವಾಗ ಯಾವುದೇ ಕಾರಣಕ್ಕೆ ಮೊಬೈಲ್ ಬಳಸಬೇಡಿ.6) ವಾಹನ ಚಲಾವಣೆ ಮಾಡುವಾಗ ಧೂಮಪಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ಮತ್ತು ಸಮಾಜದ ಆರೋಗ್ಯಕ್ಕೆ ಹಾನಿಕಾರಕ.7) ವಾಹನ ಚಲಾಯಿಸುವಾಗ ನಿಮ್ಮ ವೇಗದ ಮಿತಿಯನ್ನು ನಿಯಂತ್ರಣದಲ್ಲಿಡಿ. ಅವಸರವೇ ಅಪಘಾತಕ್ಕೆ ಕಾರಣ8) ವಾಹನ ಚಲಾಯಿಸುವಾಗ ಯಾವತ್ತೂ ರಸ್ತೆಯ ಎಡಭಾಗದಲ್ಲಿ ಚಲಿಸಿ. ಬೇರೆ ವಾಹನಗಳು ನಿಮ್ಮನ್ನು ದಾಟಿ ಮುಂದೆ ಹೋಗಲು ಬಲಭಾಗದಲ್ಲಿ ಜಾಗವಿರಲಿ.9) ಕರ್ಕಶವಾದ ಹಾರ್ನ್‍ಗಳನ್ನು ದಯವಿಟ್ಟು ಬಳಸಬೇಡಿ. ಅತೀ ಅಗತ್ಯವಿದ್ದಲ್ಲಿ ಮಾತ್ರ ಹಾರ್ನ್ ಬಳಸಿ. ಆದಷ್ಟು ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಿ. ಆಸ್ಪತ್ರೆ, ಶಾಲೆಗಳ ಬಳಿ ಅನಾವಶ್ಯಕ ಹಾರ್ನ್ ಬಳಸುವುದು ಅಪರಾಧವಾಗಿರುತ್ತದೆ.10) ಇನ್ನೊಂದು ವಾಹನವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವಾಗ ಬಲಭಾಗದಿಂದಲೇ ಓವರ್‌ ಟೇಕ್ ಮಾಡಬೇಕು. ರಸ್ತೆ ತಿರುವುಗಳಲ್ಲಿ ವಾಹನ ತಿರುಗಿಸುವ ಮುಂಚೆ ಇಂಡಿಕೇಟರ್ ಸೂಚನೆ ನೀಡಿ.

11) ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು 60 ನಿಮಿಷದೊಳಗೆ (golden hour) ಆಸ್ಪತ್ರೆಗೆ ಸೇರಿಸಿ ಜೀವರಕ್ಷಕರಾಗಿರಿ. ಆರೋಗ್ಯ ಕವಚ 108ಕ್ಕೆ ಕರೆ ಮಾಡಿರಿ.12) ಮೋಟಾರು ವಾಹನ ಕಾಯ್ದೆ-1988 ರ ಪ್ರಕಾರ ರಸ್ತೆ ನಿಯಮ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ

ನೆನಪಿರಲಿ:

1. ಅಜಾಗರೂಕತೆ ಚಾಲನೆ ಹಾಗೂ ವ್ಹೀಲಿಂಗ್ ಅಪಾಯವನ್ನು ಆಹ್ವಾನಿಸಿದಂತೆ.

2. ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ3. ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ4. ಮಂಪರಿನಲ್ಲಿ ವಾಹನ ಚಾಲನೆ ಮಾಡುವುದು ಅಪಾಯಕಾರಿಸುರಕ್ಷಿತವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸಿ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತದೆ.5. ನಿಮ್ಮ ಜೀವ ಅತ್ಯಮೂಲ್ಯ. ಜಾಗೃತ ಚಾಲನೆಗೆ ಮೊದಲ ಆದ್ಯತೆ ನೀಡಿ. ಚಾಲನೆಯಲ್ಲಿ ಮನಸ್ಸು ಪ್ರಶಾಂತವಾಗಿರಲಿ ಮತ್ತು ಸಹನೆ ಇರಲಿ

ಕೊನೆ ಮಾತು:

ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಪೊಲೀಸರ ಭಯ ಮತ್ತು ದಂಡ ತೆರಬೇಕು ಎಂಬ ಕಾರಣದಿಂದ ಸೀಟು ಬೆಲ್ಟ್ ಧರಿಸದೇ ಇರಬೇಡಿ, ನಿಮ್ಮ ರಕ್ಷಣೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ. ಯಾರೂ ನಮ್ಮನ್ನು ಗಮನಿಸದೆ ಇರುವಾಗ ನಮ್ಮ ನಡುವಳಿಕೆಯೇ ನಮ್ಮ ನಿಜವಾದ ಸಂಸ್ಕೃತಿ. ರಸ್ತೆ ಇರುವುದು ಕೇವಲ ವಾಹನ ಸಂಚಾರಕ್ಕೆ ಮಾತ್ರವಲ್ಲ, ರಸ್ತೆ ಬದಿಯಲ್ಲಿ ನಡೆದಾಡುವ ಪಾದಚಾರಿಗಳಿಗೂ ಗೌರವ ನೀಡಿ. ಎಲ್ಲ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸೋಣ. ಸುರಕ್ಷಿತ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ರಸ್ತೆ ಸುರಕ್ಷತೆಗಾಗಿ ಪ್ರತಿಜ್ಞೆ ತೆಗೆದುಕೊಳ್ಳೋಣ.

ಜೈ ಹಿಂದ್-ಡಾ.ಮುರಲೀ ಮೋಹನ ಚೂಂತಾರು, ಮಾಜಿ ಸಮಾದೇಷ್ಟರು, ಗೃಹರಕ್ಷಕದಳ, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ