ಕನ್ನಡಪ್ರಭ ವಾರ್ತೆ ಕೆಜಿಎಫ್ನಗರದ ಸೂರಜ್‌ಮಲ್ ರಸ್ತೆಯಿಂದ ಸಲ್ಡಾನ ವೃತ್ತದವರೆಗೆ ರಸ್ತೆ ಅಗಲೀಕರಣದ ಕಾಮಗಾರಿ ಸಂಬಂಧಿಸಿದಂತೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸದೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯ ಒಂದು ಬದಿಯಲ್ಲಿರುವ ೧೫೦ ಮೀಟರ್ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸದೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಫುಟ್‌ಪಾತ್ ಇಲ್ಲದ ರಸ್ತೆ
ನಗರದ ಹೃದಯ ಭಾಗದಲ್ಲಿರುವ ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಪುಟ್‌ಪಾತ್ ಇಲ್ಲದೆ ರಸ್ತೆ ನಿರ್ಮಿಸಿದರೆ ಸಾರ್ವಜನಿಕರು ಸಂಚರಿಸುವುದು ಎಲ್ಲಿ ಎಂಬುದು ಸಾರ್ವಜನಿಕರ ಪ್ರಶ್ನೆ. ಆಸ್ಪತ್ರೆಯ ಮುಂಬಾಗದಲ್ಲಿ ಮೆಡಿಕಲ್ ಸ್ಟೋರ್‌ಗಳು ಇವೆ. ರೋಗಿಗಳು ಔಷದಿಗಳನ್ನು ಖರೀದಿ ಮಾಡಬೇಕಾದರೆ ರಸ್ತೆಯಲ್ಲಿ ನಿಂತು ಖರೀದಿಸುವ ಸ್ಥಿತಿ ಉಂಟಾಗಿದೆ. ಶಾಸಕರ ಆಪ್ತರ ಮಳಿಗೆಗಳು ಸೇಫ್ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿರುವ ವಾಣಿಜ್ಯ ಮಳಿಗೆಳನ್ನು ತೆರವುಗೊಳಿಸಿದ್ದು, ಶಾಸಕರ ಆಪ್ತರಿಗೆ ಸೇರಿದ ಡಿಸಿಸಿ ಬ್ಯಾಂಕ್ ಕಟ್ಟಡ, ಬಲಿಷ್ಠರ ವಾಣಿಜ್ಯ ಮಳಿಗೆಗಳು, ಕಾಂಗ್ರೆಸ್ ಪಕ್ಷದ ನಿವೇಶನ ಪುಟ್‌ಪಾತ್ ಜಾಗವನ್ನು ಅಕ್ರಮಿಸಿಕೊಂಡಿವೆ. ಪ್ರಭಾವಿಗಳು ಲೋಕೊಪೋಯೋಗಿ ಇಲಾಖೆಯ ೭ ಅಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವು ಮಾಡಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ರಸ್ತೆಯ ಒಂದು ಭಾಗದಲ್ಲಿ ಪ್ರಭಾವಿಗಳ ಕಟ್ಟಡಗಳನ್ನು ತೆರವುಗೊಳಿಸದೆ ಬಿಟ್ಟಿರುವುದು ಎಷ್ಟು ಸರಿ ಎಂದು ಜೆಡಿಎಸ್‌ನ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.ಪ್ರತಿಭಟನೆ ನಡೆಸುವ ಎಚ್ಚರಿಕೆಶ್ರೀಮಂತರ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸದೆ ಬಿಟ್ಟಿರುವುದು ನೋಡಿದರೆ ಶಾಸಕರ ಆಪ್ತರೊಬ್ಬರ ಪ್ರಭಾವ ಎದ್ದು ಕಾಣುತ್ತಿದೆ. ಕೂಡಲೇ ರಸ್ತೆ ಮತ್ತು ಪುಟ್‌ಪಾತ್‌ಗೆ ಅಡ್ಡವಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಇಲ್ಲದೇ ಹೋದರೆ ನವಕರವೇ ಕಾರ‍್ಯಕರ್ತರು ಲೊಕೊಪೋಯೋಗಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ನವ ಕರವೇ ರಾಜ್ಯಾಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ಎಚ್ಚರಿಸಿದ್ದಾರೆ.