ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಸ್ವತ್ತಿನ ಮಾಲೀಕರಿಗೆ ನಮೂನೆ 3/ಎ ಇ - ಖಾತಾ ನೀಡಲು ರಾಜ್ಯ ಸರ್ಕಾರ ಇ-ಖಾತಾ ಅಭಿಯಾನದಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಇದನ್ನು ಯಶಸ್ವಿಗೊಳಿಸಲು ನಗರಸಭೆ ಸಿದ್ಧವಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಮನವಿ ಮಾಡಿದರು.
ನಾಳೆಯಿಂದಲೇ ಅರ್ಜಿ ವಿತರಣೆ ಮತ್ತು ಸ್ವೀಕಾರಕ್ಕೆ ಸಿದ್ಧರಾಗಿದ್ದೇವೆ. ಸಕಾಲದಲ್ಲಿ ಕ್ರಮಬದ್ಧವಾದ ದಾಖಲೆ ಒದಗಿಸಿದ ಮಾಲೀಕರುಗಳಿಗೆ 3/ಎ ಇ- ಖಾತಾ ನೀಡಲಾಗುವುದು. ಈ ಅಭಿಯಾನವನ್ನು 3 ತಿಂಗಳೊಳಗೆ ಯಶಸ್ವಿಯಾಗಿ ಮುಗಿಸುತ್ತೇವೆ ಎಂದು ತಿಳಿಸಿದರು.
ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು. ಅನಧಿಕೃತ - ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ರಾಜ್ಯಸರ್ಕಾರ ಒಮ್ಮೆ ಮಾತ್ರ ಅವಕಾಶ - ಒಂದು ಬಾರಿ ಪರಿಹಾರ (ಏಕ ಕಾಲಿಕ ಪರಿಹಾರ) ಕಲ್ಪಿಸಿದೆ. ಆಸ್ತಿದಾರರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶೇಷಾದ್ರಿ ಕೋರಿದರು.ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ನಗರಸಭೆ ವ್ಯಾಪ್ತಿಯ ಅನಧಿಕೃತ, ಕಾನೂನು ಉಲ್ಲಂಘನೆ ಸ್ವತ್ತುಗಳಿಗೆ ನಮೂನೆ 3/ಎ ಇ - ಖಾತಾ ಕೊಡಲು ಸರ್ಕಾರ ಅನುಮತಿ ನೀಡಿದ್ದು, ಸ್ಥಳೀಯ ಸಂಸ್ಥೆಯ ಆದಾಯ ಮೂಲ ವೃದ್ದಿಸುವ ಜೊತೆಗೆ ಆಸ್ತಿ ಮಾಲೀಕರಿಗೆ ಇ-ಖಾತಾ ಸೃಜಿಸುವುದಾಗಿದೆ. 2024ರ ಸೆಪ್ಟೆಂಬರ್ 10ರೊಳಗೆ ನಿರ್ಮಾಣಗೊಂಡಿರುವ ಅನಧಿಕೃತ ಆಸ್ತಿಗಳಿಗೆ ಮಾತ್ರ 3/ಎ ಇ - ಖಾತಾ ಕೊಡಲಾಗುತ್ತಿದೆ ಎಂದರು.
ಇ - ಖಾತಾ ಕುರಿತು ಪರಿಪೂರ್ಣ ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸಲಾಗುವುದು. ಸಹಾಯವಾಣಿಯ ಸಂಖ್ಯೆಯ ಮತ್ತು ವಾಟ್ಸ್ ಆಪ್ ಸಂಖ್ಯೆ ವ್ಯಾಪಕವಾಗಿ ಪ್ರಚುರ ಪಡಿಸಲಾಗುವುದು. ಕಸ ಸಂಗ್ರಹಿಸುವ ವಾಹನಗಳಲ್ಲಿ ಮುದ್ರಿತ ಧ್ವನಿ (ಆಡಿಯೋ), ಕರಪತ್ರ ಹಂಚಿಕೆ, ಮೊಬೈಲ್ ಸಂಖ್ಯೆಗಳಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಫೈರೋಜ್, ಅಜ್ಮತ್ , ಸೋಮಶೇಖರ್, ಬಿ.ಸಿ.ಪಾರ್ವತಮ್ಮ, ಗಿರಿಜಮ್ಮ, ಬೈರೇಗೌಡ, ಸಮದ್ , ಗೋವಿಂದರಾಜು, ನಾಗಮ್ಮ, ಗಿರಿಜಮ್ಮ, ಅಣ್ಣು, ಮುಖಂಡ ಅತಾ ಉಲ್ಲಾ, ಅಧಿಕಾರಿಗಳಾದ ಕಿರಣ್, ನಟರಾಜೇಗೌಡ, ಲಕ್ಷ್ಮಿ, ರೇಖಾ ಇತರರಿದ್ದರು.
ಬಿ ರಿಜಿಸ್ಟರ್ ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ 3/ಎ ಇ - ಖಾತಾ ನೀಡಲು ಪಡೆಯಬೇಕಾದ
*ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
*ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
18ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.