ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಸೇರಿದಂತೆ ಅಧಿಕಾರಿಗಳ ತಂಡ ಬ್ಯಾಡಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಸ್ಥಳ ಪರಿಶೀಲನೆ ನಡೆಸಿದರು.
ಸರ್ಕಾರಿ ಜಾಗ ಎಲ್ಲಿದೆ:ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ತಾವು ಹೈಕೋರ್ಟ ಕೊಟ್ಟಿರುವ ನಕ್ಷೆಯಲ್ಲಿ ಸರ್ಕಾರಿ ಜಾಗವಿಲ್ಲ, ಏನಿದ್ದರೂ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಬೈಪಾಸ್ ಮಾಡಬೇಕಾಗುವುದು ಅನಿವಾರ್ಯ ಈ ವೇಳೆ ಮುಖ್ಯರಸ್ತೆಯಲ್ಲಿ ಕೆಲ ವರ್ತಕರು ಬೈಪಾಸ್ ಹಾಗೂ ರಿಂಗ್ ರೋಡದ ನಿರ್ಮಾಣ ಮಾಡಲು ನಕ್ಷೆಯಲ್ಲಿ ತೋರಿಸುವ ಪ್ರಯತ್ನ ನಡೆಸಿದರು, ಆದರೆ ತೋರಿಸಿದ ನಕ್ಷೆಯಲ್ಲಿ ಯಾವುದೇ ಸರ್ಕಾರಿ ಜಾಗವಿರಲಿಲ್ಲ ಈ ಹಿನ್ನೆಲೆಯಲ್ಲಿ ನಿಮ್ಮ ದೂರನ್ನು ಪರಿಶೀಲನೆ ನಡೆಸುವುದಾಗಿ ಹೇಳಿ ತೆರಳಿದರು.
750 ಮೀಟರ್ ನಡಿಗೆ:ನಿರಂತರ ಮಳೆಯಿಂದ ಪಟ್ಟಣದ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಇದರಲ್ಲಿಯೇ ಪಟ್ಟಣದ ಕೆಸಿಸಿ ಬ್ಯಾಂಕ್‌ನಿಂದ ಬೀರೇಶ್ವರ ದೇವಸ್ಥಾನದವರೆಗೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ನಡೆದು ಅಕ್ಕಪಕ್ಕ ಕಟ್ಟಡಗಳು ಹಾಗೂ ಉಳಿದಂತೆ ಎಲ್ಲ ವಿಷಯ ಗಮನಿಸಿದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಪಿಡಬ್ಲ್ಯೂಡಿ ಅಧಿಕಾರಿಗಳು, ಭೂಮಾಪನ ಇಲಾಖೆ ಅಧಿಕಾರಿಗಳ ತಂಡ ಉಪಸ್ಥಿತರಿದ್ದರು.