ಎಚ್.ಎನ್,ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಹೊಳವನಹಳ್ಳಿಯಿಂದ ಬಿ.ಡಿ.ಪುರ ರಸ್ತೆ ಗುಂಡಿ ಬಿದ್ದು ವರ್ಷಗಳೇ ಕಳೆದರೂ ದುರಸ್ತಿ ಮಾಡದ ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳ ವಿರುದ್ದ ಗ್ರಾಮೀಣ ಭಾಗದ ಜನರು ಹಿಡಿಶಾಪ ಹಾಕುತ್ತಿದ್ದಾರೆ.ಹೊಳವನಹಳ್ಳಿ ಕ್ಯಾಮೇನಹಳ್ಳಿ ಮಧ್ಯೆ ಇರುವ ಶನಿಮಹಾತ್ಮ ದೇವಸ್ಥಾನದಿಂದ ಬೋಮ್ಮಲದೇವಿಪುರ ಗ್ರಾಮದವರೆಗೂ ನೂರಾರು ಗುಂಡಿಗಳು ರಸ್ತೆಯಲ್ಲಿ ಕಾಣಬಹುದಾಗಿದೆ. ಸುಮಾರು ವರ್ಷಗಳಿಂದ ರಸ್ತೆಯಲ್ಲಿ ಗುಂಡಿ ಬಿದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ನನಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವ ಹಾಗೆ ಕಚೇರಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹೊಳವನಹಳ್ಳಿಯ ಸಾರ್ವಜನಿಕರು ದೂರಿದ್ದಾರೆ.ಹೊಳವನಹಳ್ಳಿಯಿಂದ ಸಾಕಷ್ಟು ಗ್ರಾಮಗಳಿಗೆ ಕಲ್ಪಿಸುವ ಈ ರಸ್ತೆಯಲ್ಲಿ ಮೊಣಕಾಲು ಉದ್ದದ ಗುಂಡಿಗಳು ಕಾಣಬಹುದಾಗಿದೆ. ಒಂದು ಬೈಕ್ ಹೋಗಲಾರದಷ್ಟು ಗುಂಡಿಗಳು ಬಿದ್ದಿವೆ. ಇನ್ನೂ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭಿವಿಸಿ ಕೊರಟಗೆರೆ ತುಮಕೂರು ಆಸ್ಪತ್ರೆಗಳಿಗೆ ದಾಖಲಾಗಿರುವ ಘಟನೆಗಳು ನಡೆದಿವೆ. ಸಿಮೆಂಟ್ ಲಾರಿಗಳಿಂದ ರಸ್ತೆ ಹಾಳುಗೌರಿಬಿದನೂರು ತಾಲೂಕಿನ ತೊಂಡೇಬಾವಿಯಲ್ಲಿರುವ ಸಿಮೆಂಟ್ ಕಾರ್ಖಾನೆಯಿಂದ ಪ್ರತಿನಿತ್ಯ ನೂರಾರು ಲಾರಿಗಳು ತೊಂಡೇಬಾವಿಯಿಂದ ಬೈರೇನಹಳ್ಳಿ ಹಾಗೂ ಬಿ.ಡಿ.ಪುರ ಹೊಳವನಹಳ್ಳಿ ಕೊರಟಗೆರೆ ಮಾರ್ಗವಾಗಿ ಬರುತ್ತಿದ್ದು ಹೆಚ್ಚು ತೂಕ ಹೊತ್ತು ಬರುವ ಲಾರಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ. ಇನ್ನೂ ಆರ್‌ಟಿಒ ಅಧಿಕಾರಿಗಳು ಇತ್ತಕಡೆ ಬರದೆ ಇರುವ ಕಾರಣ ಲಾರಿಗಳು ಇದೆ ಮಾರ್ಗವಾಗಿ ಸಂಚಾರ ಮಾಡುತ್ತವೆ. ಈಗಲಾದರೂ ಆರ್‌ಟಿಒ ಹಾಗೂ ಪಿಡಬ್ಲೂಡಿ ಅದಿಕಾರಿಗಳು ಈ ಮಾರ್ಗವಾಗಿ ಲಾರಿಗಳು ಬರದಂತೆ ಮಾಡಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.ಬಾಕ್ಸ್ 20 ಕಿಮೀ ಸುತ್ತಾಗಿ ಬರಬೇಕು
ತಾಲೂಕಿನ ಗಡಿ ಭಾಗವಾದ ಅಕ್ಕಾಜಿಹಳ್ಳಿ, ಕರೇಚಿಕ್ಕನಹಳ್ಳಿ, ಚಿಕ್ಕಪಾಳ್ಯ, ದೊಡ್ಡಪಾಳ್ಯ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಶಾಲಾ ವಿದ್ಯಾರ್ಥಿಗಳು, ತೀರ್ವ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರಟಗೆರೆಗೆ ಬರಬೇಕಾದರೆ ೨೦ ಕೀ.ಲೋ ದೂರದಿಂದ ಬರಬೇಕು. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವವರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೋಟ್ ...1ಕೊರಟಗೆರೆ ಪಟ್ಟಣದಿಂದ ನಮ್ಮ ಗ್ರಾಮಕ್ಕೆ ನಾವು ಪ್ರತಿನಿತ್ಯ ಇದೆ ರಸ್ತೆಯಲ್ಲಿ ಓಡಾಡಬೇಕು. ಹೊಳವನಹಳ್ಳಿಯಿಂದ ಅಕ್ಕಾಜಿಹಳ್ಳಿವರೆಗೂ ರಸ್ತೆ ತುಂಬಾ ಹಾಳಾಗಿದ್ದು, ಮೊಣಕಾಲು ಉದ್ದದ ಗುಂಡಿಗಳು ಕಾಣಬಹುದಾಗಿದೆ. ಅನೇಕ ಬಾರಿ ವಾಹನ ಸವಾರರು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಮೆಂಟ್ ತುಂಬಿದ ಲಾರಿಗಳಿಂದ ರಸ್ತೆ ಗುಂಡಿ ಬಿದ್ದಿದ್ದು, ಈ ರಸ್ತೆಯಲ್ಲಿರುವ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ.- ನಾಗರಾಜು ಚುಂಚೇನಹಳ್ಳಿ ಗ್ರಾಮಸ್ಥ,
ಕೋಟ್ ...2
ಈಗಾಲೇ ಹೊಳವನಹಳ್ಳಿಯಿಂದ ಬಿಡಿ ಪುರ ಗ್ರಾಮದವರೆಗೂ ರಸ್ತೆ ನಿರ್ವಹಣೆಗಾಗಿ ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಅದಷ್ಟು ಬೇಗ ರಸ್ತೆ ಗುಂಡಿ ಮುಚ್ಚವಂತೆ ಕೆಲಸ ಪ್ರಾರಂಭ ಮಾಡಲಾಗುವುದು. ರಸ್ತೆ ಡಾಂಬರಿಕರಣ ಮಾಡುವ ಕೆಲಸಕ್ಕೆ ಈಗಾಲೇ ೩ ಕೋಟಿ ರು. ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗಿದ್ದು, ಹಣ ಬಂದ ಕೂಡಲೆ ಡಾಂಬರಿಕರಣ ಮಾಡಲಾಗುವುದು. - ಸಂಪತ್‌ಕುಮಾರ್, ಎಇಇ ಪಿಡಬ್ಲೂಡಿ ಇಲಾಖೆ ಕೊರಟಗೆರೆ.