ರೋಬಸ್ಟಾ ರ್‍ಯಾಲಿ: ಗೌರವ್‌ ಗಿಲ್-ಅನಿರುದ್ ರಘ್ನೇಕರ್ ಜೋಡಿಗೆ ಪ್ರಶಸ್ತಿ

KannadaprabhaNewsNetwork | Published : Nov 29, 2024 1:02 AM

ಸಾರಾಂಶ

ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್ ಮತ್ತು ಅರ್ಜುನ್ ಪ್ರಶಸ್ತಿ ವಿಜೇತ ದೇಹಲಿ ಮೂಲದ ಗೌರವ್ ಗಿಲ್ ಮತ್ತು ಅನಿರುದ್ ರಘ್ನೇಕರ್ ಜೋಡಿ ಅಭಿಮಾನಿಗಳ ನಿರೀಕ್ಷೆಯಂತೆ ಪ್ರಥಮ ಸ್ಥಾನ ಪಡೆದುಕೊಂಡಿತು. 8 ಮಂದಿ ಮಹಿಳಾ ಸ್ಪರ್ಧಿಗಳು ಹಾಗೂ ಕೊಡಗು ಜಿಲ್ಲೆಯ 7 ಮಂದಿ ಸ್ಪರ್ಧಿಗಳೋಂದಿಗೆ ದೇಶದ ವಿವಿಧ ಸ್ಥಳಗಳಿಂದ ಆಗಮಿಸಿದ ಒಟ್ಟು 61 ವಾಹನಗಳು ಸ್ಪರ್ಧಾ ಕಣದಲ್ಲಿದ್ದವು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ದಕ್ಷಿಣ ಕೊಡಗಿನ ಸಿದ್ದಾಪುರ ಸಮೀಪದ ಕಾಫಿ ತೋಟಗಳಲ್ಲಿ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಇಂಡಿಯ ಅಧೀನದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ 2024 ಬ್ಲೂಬ್ಯಾಂಡ್ ಸ್ಪೋರ್ಟ್ಸ್‌ ಮತ್ತು ರೋಬಾಸ್ಟ ಅಡ್ವೆಂಚರ್ ಅಂಡ್ ಸ್ಪೋಟ್ಸ್ ಆಕಾಡೆಮಿ ಕೊಡಗು ಸಂಸ್ಥೆ ಆಶ್ರಯದಲ್ಲಿ ಆಕರ್ಷಕ ರೋಬಾಸ್ಟ ರ್‍ಯಾಲಿ ನಡೆಯಿತು.ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್ ಮತ್ತು ಅರ್ಜುನ್ ಪ್ರಶಸ್ತಿ ವಿಜೇತ ದೇಹಲಿ ಮೂಲದ ಗೌರವ್ ಗಿಲ್ ಮತ್ತು ಅನಿರುದ್ ರಘ್ನೇಕರ್ ಜೋಡಿ ಅಭಿಮಾನಿಗಳ ನಿರೀಕ್ಷೆಯಂತೆ ಪ್ರಥಮ ಸ್ಥಾನ ಪಡೆದುಕೊಂಡಿತು.ಅಮ್ಮತ್ತಿ, ಪಾಲಿಬೆಟ್ಟ, ಟಾಟಾ ಕಾಫಿ ತೋಟಗಳ ದುರ್ಗಮ ಹಾದಿಯಲ್ಲಿ ರ್‍ಯಾಲಿ ನಡೆಯಿತು. 8 ಮಂದಿ ಮಹಿಳಾ ಸ್ಪರ್ಧಿಗಳು ಹಾಗೂ ಕೊಡಗು ಜಿಲ್ಲೆಯ 7 ಮಂದಿ ಸ್ಪರ್ಧಿಗಳೋಂದಿಗೆ ದೇಶದ ವಿವಿಧ ಸ್ಥಳಗಳಿಂದ ಆಗಮಿಸಿದ ಒಟ್ಟು 61 ವಾಹನಗಳು ಸ್ಪರ್ಧಾ ಕಣದಲ್ಲಿದ್ದವು.

ಎರಡು ದಿನಗಳು ನಡೆದ ರ‍್ಯಾಲಿಯಲ್ಲಿ ಸ್ಪರ್ಧಾಳುಗಳಿಗೆ ನಿಗದಿತ ಅವದಿಯಲ್ಲಿ ನಾಲ್ಕು ಹಂತಗಳನ್ನು ಮೂರು ಬಾರಿ ಚಲಿಸಿ 111 ಕಿ.ಮೀ. ಕ್ರಮಿಸಬೇಕಿತ್ತು. ಚಾಲನೆಯಲ್ಲಿ ಚಾಲಕನ ಚಾಕಚಕ್ಯತೆ, ಸಹಚಾಲಕನ ನಿರ್ದೇಶನ ಹಾಗೂ ವಾಹನದ ವೇಗ ಮೀತಿ ಅಳವಡಿಸಿಕೊಂಡು ರ‍್ಯಾಲಿ ಸ್ಪರ್ಧಾಳುಗಳು ವಾಹನ ಚಾಲನೆ ಮಾಡಿದರು.

ಫಲಿತಾಂಶ:

ಐ.ಎನ್.ಆರ್.ಸಿ.ಸಮಗ್ರ ಪ್ರದರ್ಶನ ವಿಭಾಗದಲ್ಲಿ ಪ್ರಥಮ: ಗೌರವ್ ಗಿಲ್ ದೇಹಲಿ ಮತ್ತು ಸಹ ಚಾಲಕ ಅನಿರುದ್ ರಘ್ನೇಕರ್ ಪುಣೆ.

ದ್ವಿತೀಯ: ಕರ್ಣ ಕಡೂರು (ಆರ್ಕ ಮೋಟಾರ್ ಸ್ಪೋರ್ಟ್ಸ್ ಬೆಂಗಳೂರು) ಮೂಸಾ ಶರೀಫ್ ಕಾಸರಗೋಡ್

ತೃತೀಯ: ಆದಿತ್ಯ ಠಾಕೂರು (ಚೆಟ್ಟಿನಾಡ್ ಸ್ಪೋರ್ಟಿಂಗ್‌ ಸೊಲನ್) ಮತ್ತು ಸಹ ಚಾಲಕ ವಿರೇಂದ್ರ ಕಶ್ಯಪ್ (ಶಿಮ್ಲ)

ಐ.ಎನ್.ಆರ್.ಸಿ. ಟ್ಯುನರ್ ಪ್ರಶಸ್ತಿ ಇಜ್ಜಾ ಮತ್ತು ಜೋಯಿ ಅವರು ಪಡೆದುಕೊಂಡರು.

ಐ.ಎನ್.ಆರ್.ಸಿ ವಿಭಾಗ 2ರಲ್ಲಿ:

ಪ್ರಥಮ: ಆದಿತ್ಯ ಠಾಕೂರು (ಸೊಲನ್) ಮತ್ತು ಸಹ ಚಾಲಕ ವೀರೇಂದ್ರ ಕಶ್ಯಪ್ (ಶಿಮ್ಲ)

ದ್ವಿತೀಯ: ಜಸನ್ ಸಾಲ್ಡಾನಾ ಹಾಸನ ( ಆರ್ಕ ಮೋಟಾರ್ ಸ್ಪೋರ್ಟ್ಸ್ ) ತಿಮ್ಮು ಉದ್ದಪಂಡ ಅಮ್ಮತ್ತಿ, ಕೊಡಗು.

ತೃತೀಯ: ಡೀನ್ ಮಸ್ಕರಿನಸ್ಸ್ (ಮಂಗಳೂರು) ಕೊಂಗಂಡ ಗಗನ್ ಕರುಂಬಯ್ಯ ಅಮ್ಮತ್ತಿ, ಕೊಡಗು.

ಐ.ಎನ್.ಆರ್.ಸಿ. ಟ್ಯುನರ್ ಪ್ರಶಸ್ತಿಯನ್ನು ಚೆಟ್ಟಿನಾಡ್ ಮೋಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತು.

ಐ.ಎನ್.ಆರ್.ಸಿ ವಿಭಾಗ 03 ರಲ್ಲಿ:

ಪ್ರಥಮ: ಡಾ.ಯರಿಶ್ ಶರಾಫ್ ಮುಂಬೈ (ಚೆಟ್ಟಿನಾಡ್ ಸ್ಪೋರ್ಟಿಂಗ್ ) ಆರ್ಜುನ್ ಧೀರೇಂದ್ರ ಬೆಂಗಳೂರು.

ದ್ವಿತೀಯ: ರ‍್ನವ್ ಪ್ರತಾಪ್ ಸಿಂಗ್ ಗುರುಗ್ರಾಮ್ (ಸ್ನಾಫ್ ರೇಸಿಂಗ್ ) ರೋಹಿತ್ ಎನ್. ಬೆಂಗಳೂರು.

ತೃತೀಯ: ಜೀತ್ ಜಬಾಖ ಹೈದರಾಬಾದ್ ( ಚೆಟ್ಟಿನಾಡ್ ಸ್ಪೋರ್ಟಿಂಗ್) ವಿ. ಶೇಖರ್ ಇರೂಡ್.

ಐ.ಎನ್.ಆರ್.ಸಿ. ಟ್ಯುನರ್ ಪ್ರಶಸ್ತಿಯನ್ನು ಚೆಟ್ಟಿನಾಡ್ ಮೋಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತು.

ಮಹಿಳಾ ವಿಭಾಗ:

ಪ್ರಥಮ: ಅನುಶ್ರೀಯ ಗುಲಾಟಿ (ಅರ್ಕ ಮೋಟಾರ್ ಸ್ಪೋರ್ಟ್ಸ್ ಡೆಹರಡೂನ್) ಕರಣ್ ಔಕ್ತ ಜಬ್ಬಾಲ್

ದ್ವಿತೀಯ: ನಿಕೀತಾ ಟಾಕ್ಲೆ (ಪುಣೆ), ರಘುರಾಮ ಸ್ವಾಮಿನಾಥನ್ ಕೊಯಂಬತ್ತೂರು.

ತೃತೀಯ: ಪೋಬೆ ನಗ್ರೂಮ್ (ಶಿಲ್ಲಾಂಗ್) ನಾಶ್ ರೋಸ್ (ಹೈದರಬಾದ್)

ಐ.ಎನ್.ಆರ್.ಸಿ. ಟ್ಯುನರ್ ಪ್ರಶಸ್ತಿಯನ್ನು ಆರ್ಕ ಮೋಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತು.

ಐ.ಎನ್.ಆರ್.ಸಿ. ಕಿರಿಯರ ವಿಭಾಗ 01ರಲ್ಲಿ:

ಪ್ರಥಮ: ರ‍್ನವ್ ಪ್ರತಾಪ್ ಸಿಂಗ್ ಗುರುಗ್ರಾಮ್ (ಸ್ನಾಫ್ ರೇಸಿಂಗ್ ) ರೋಹಿತ್ ಎನ್. ಬೆಂಗಳೂರು

ದ್ವೀತಿಯ: ಅಬಿನ್ ಆರ್.ರೈ ಮಡಿಕೇರಿ ಕೊಡಗು ಮತ್ತು ಅರವಿಂದ್ ಧೀರೆಂದ್ರ ಬೆಂಗಳೂರು (ಐಡಿಯಲ್ ರೇಸಿಂಗ್ ಬೆಂಗಳೂರು)

ತೃತೀಯ: ಆರ್ಜುನ್ ರಾಜೀವ್ (ಚೆಟ್ಟಿನಾಡ್ ಸ್ಪೋರ್ಟಿಂಗ್) ವಿನಯ್ ಪದ್ಮಶಾಲಿ ಬೆಂಗಳೂರು.

ಸ್ನಾಫ್ ರೇಸಿಂಗ್ ಟ್ಯುನರ್ ಪ್ರಶಸ್ತಿ ಪಡೆದುಕೊಂಡರು.

ಎಫ್.ಎಂ.ಎಸ್.ಸಿ.ಐ ಕ್ಲಾಸಿಕ್ ಚಾಲೇಂಜ್ ವಿಭಾಗದಲ್ಲಿ:

ಪ್ರಥಮ: ಜಿನು ಜಾನ್ಸನ್ ಮತ್ತು ಅನಿರುದ್ ರಮೇಶ್ (ಮೈಸೂರು)

ದ್ವೀತಿಯ: ಪ್ರವೀಣ್ ದ್ವಾರಕನಾಥ್ ಮತ್ತು ಕಾರ್ಯಪ್ಪ (ಕಾಸ್ ಮೋಟಾರ್ ಸ್ಪೋರ್ಟ್ಸ್ ಬೆಂಗಳೂರು)

ತೃತೀಯ: ಆನೀಶ್‌ನಾಥ್ ಎಸ್. ಮತ್ತು ಆಮೀತಾ ಅನೀಶ್ (ಎ.ಎ. ಮೋಟಾರ್ ಸ್ಪೋರ್ಟ್ಸ್ ಹೈದರಾಬಾದ್)

ಜಾನ್ಸನ್ ಜೋ 01 ರ‍್ಯಾಲಿಂಗ್ ಟ್ಯೂನರ್ ಪ್ರಶಸ್ತಿ ಪಡೆದುಕೊಂಡರು.

ಎಫ್.ಎಂ.ಎಸ್.ಸಿ.ಐ ಜಿಪ್ಸಿ ಚಾಲೇಂಜ್ ವಿಭಾಗದಲ್ಲಿ:

ಪ್ರಥಮ: ಕೊಕ್ಕೇಯಂಗಡ ದರ್ಶನ್ ನಾಚಪ್ಪ ಮತ್ತು ಮೇಕೆರಿರ ಆಭಿನವ್ ಗಣಪತಿ ಕೊಡಗು (ಟೀಮ್ ಆಸ್ಪರೇ)

ದ್ವಿತೀಯ: ಬಲ್ಜಿಂದರ್ ಸಿಂಗ್ ದಿಲ್ಲೂನ್ ದೆಹಲಿ (ಎ.ಆ್ಯಂಡ್ಎ ಮೋಟಾರ್ ಸ್ಪೋರ್ಟ್ಸ್) ಗೌತಮ್ ಸಿ.ಪಿ. (ಚಿಕ್ಕಮಗಳೂರು)

ತೃತೀಯ: ಕೊಂಗಂಡ ಕವನ್ ಕಾರ್ಯಪ್ಪ ವಿರಾಜಪೇಟೆ ಮತ್ತು ಮನೆಯಪಂಡ ಗೌರವ್ ಅಯ್ಯಪ್ಪ ಗೊಣಿಕೊಪ್ಪ (ಟೀಮ್)

ಚೆಪ್ಪುಡಿರ ಮಾಚಯ್ಯ ಎಂ.ಎಸ್.ಪಿ ಟ್ಯುನರ್ ಪ್ರಶಸ್ತಿ ಪಡೆದುಕೊಂಡರು.

Share this article