ಕನ್ನಡಪ್ರಭ ವಾರ್ತೆ ಹೊಸದುರ್ಗ
ಸದಸ್ಯ ದಾಳಿಂಬೆ ಗೀರೀಶ್ ಮಾತನಾಡಿ, ಪುರಸಭೆ ನಿಧಿಯಿಂದ ನಮ್ಮ ಕ್ಲಿನಿಕ್ ಗೆ ಎರಡು ಕಂಪ್ಯೂಟರ್ ನಿಗದಿಯಾಗಿದೆ. ಆದರೆ ಒಂದು ಕಂಪ್ಯೂಟರ್ ಮಾತ್ರ ಅಲ್ಲಿದೆ. ಮತ್ತೊಂದು ಕಂಪ್ಯೂಟರ್ ಬಗ್ಗೆ ಮಾಹಿತಿಯಿಲ್ಲ. ಏನೋ ಅವ್ಯವಹಾರ ಆಗಿರಬಹುದು. ಅಧಿಕಾರಿಗಳು ಹಾರಿಕೆ ಉತ್ತರ ನೀಡದೆ ಈ ಬಗ್ಗೆ ಜವಾಬ್ದಾರಿ ವಹಿಸಿ ತನಿಖೆ ಮಾಡಿ ಮೂರು ದಿನಗಳೊಳಗೆ ಉತ್ತರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್, ಈ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ನೊಟೀಸ್ ಜಾರಿ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.ಬಂಡೆ ಸಂತೆಯನ್ನು ಈಗಿರುವ ಸ್ಥಳದಿಂದ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಕೆಲವರಿಂದ ಸಲಹೆ ಬಂದಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸಂತೆ ನಡೆಸಲು ಮಾರುಕಟ್ಟೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅಲ್ಲಿಂದ ಅನುಮೋದನೆ ಸಿಕ್ಕರೆ ನೋಡೋಣ ಆದರೆ ಬಂಡೆ ಸಂತೆಗೆ ಅದರದೆ ಆದ ಅತಿಹ್ಯವಿದೆ ಇದನ್ನು ಏಕಾಏಕೀ ಸ್ಥಳಾಂತಿರಿಸಲು ಸಾಧ್ಯವಿಲ್ಲ ಹಾಗಾಗಿ ರಾತ್ರಿ 8 ಗಂಟೆಯಿಂದಲೇ ಪ್ರಾರಂಭವಾಗುತ್ತಿದ್ದ ಸಂತೆಯ ಸಮಯವನ್ನು ಕಡ್ಡಾಯವಾಗಿ ಬೆಳಿಗಿನ ಜಾವ 4ಗಂಟೆಯಿಂದ ಪ್ರಾರಂಭಿಸುವಂತೆ ಸದಸ್ಯರು ಸಲಹೆ ನೀಡಿದರು.
ಪಟ್ಟಣದಲ್ಲಿ ಫುಡ್ ಗಾಡಿಗಳು ಹೆಚ್ಚಾಗಿದ್ದು, ಫುಟ್‌ಪಾತ್‌ನ್ನು ಆಕ್ರಮಿಸಿಕೊಂಡಿವೆ. ವ್ಯಾಪಾರಸ್ಥರ ಬಳಿ ಕೆಲವರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಕೆಲ ಅಂಗಡಿಗಳ ಮಾಲೀಕರು ಉಪ್ಪಿನ ಚೀಲಗಳನ್ನಿಟ್ಟು ತಿಂಗಳುಗಳೇ ಕಳೆದಿವೆ. ಹೀಗಾದರೆ ಫುಟ್ ಪಾತ್ ಹಾಳಾಗುವುದರ ಜೊತೆಗೆ ಜನಸಾಮಾನ್ಯರ ಓಡಾಟಕ್ಕೂ ತೊಂದರೆಯಾಗಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಪುರಸಭೆ ಸದಸ್ಯ ನಾಗರಾಜ್ ಒತ್ತಾಯಿಸಿದರು.
ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಹಸಿ ಕಸ, ಒಣ ಕಸದ ಬುಟ್ಟಿ ಅಳವಡಿಸಿದರೆ ಕುಸದ ವಿಂಗಡಣೆ ಸುಲಭವಾಗುತ್ತದೆ ಎಂದು ಸದಸ್ಯ ಮಂಜುನಾಥ್ ಸಲಹೆ ನೀಡಿದರು. ಶಾಂತಿನಗರದಲ್ಲಿನ ಅಂಬೇಡ್ಕರ್ ಭವನ ಸಂಪೂರ್ಣವಾಗಿ ಹದಗೆಟ್ಟಿದೆ. ಕಾಂಪೌಂಡ್ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲಿಲ್ಲ.ಕುಡುಕರ ತಾಣವಾಗಿದೆ. ಹಿರಿಯೂರು ರಸ್ತೆ ದುರಸ್ತಿ ಮಾಡಿಸುವ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.