ಗ್ರಾಮಾಭಿವೃದ್ಧಿಯಲ್ಲಿ ಸಹಕಾರ ಸಂಘಗಳು, ಡೇರಿಗಳ ಪಾತ್ರ ಪ್ರಮುಖ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಕಿಕ್ಕೇರಿ ಸಹಕಾರ ಸಂಘ ಸರ್ಕಾರ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯದೆ ರೈತ, ಷೇರುದಾರರ ಸಹಕಾರದಲ್ಲಿ 1.40 ಕೋಟಿ ರು.ವೆಚ್ಚದಲ್ಲಿ ಹೈಟೆಕ್ ಸಹಕಾರ ಭವನ ನಿರ್ಮಿಸಿದೆ. ವಾರ್ಷಿಕ ವಹಿವಾಟು 87ಕೋಟಿ ರು.ನಲ್ಲಿ ಸಂಘ 47 ಕೋಟಿ ರು. ನಿವ್ವಳ ಲಾಭ ಗಳಿಸಿದೆ. 23 ಕೋಟಿ ರು.ಡಿಫಾಸಿಟ್, ಚಿನ್ನಾಭರಣ ಸಾಲ 12 ಕೋಟಿ ರು. ಜೊತೆಗೆ ರೈತರಿಗೆ 10.5 ಕೋಟಿ ರು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗ್ರಾಮಗಳ ಅಭಿವೃದ್ಧಿಯಲ್ಲಿ ಸಹಕಾರ ಸಂಘ, ಹಾಲಿನ ಡೇರಿಗಳ ಪಾತ್ರ ಪ್ರಮುಖ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರ ಭವನ ಉದ್ಘಾಟಿಸಿ ಮಾತನಾಡಿ, ಶ್ರೀರಂಗಪಟ್ಟಣದಿಂದ ಆನೆಗೊಳ ರಸ್ತೆ ಅಭಿವೃದ್ಧಿಗೆ ಕೆಸಿಫ್‌ನಲ್ಲಿ ಮಾಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಹಿಂದೆ ಇದ್ದ ಮಾಜಿ ಸಚಿವರ ಕೆ.ಸಿ. ನಾರಾಯಣಗೌಡರ ಕೊಡುಗೆ ಏನು ಎಂದು ಛೇಡಿಸಿದರು.

ಕಿಕ್ಕೇರಿ ಸಹಕಾರ ಸಂಘ ಸರ್ಕಾರ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯದೆ ರೈತ, ಷೇರುದಾರರ ಸಹಕಾರದಲ್ಲಿ 1.40 ಕೋಟಿ ರು.ವೆಚ್ಚದಲ್ಲಿ ಹೈಟೆಕ್ ಸಹಕಾರ ಭವನ ನಿರ್ಮಿಸಿದೆ. ವಾರ್ಷಿಕ ವಹಿವಾಟು 87ಕೋಟಿ ರು.ನಲ್ಲಿ ಸಂಘ 47 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದರು.

23 ಕೋಟಿ ರು.ಡಿಫಾಸಿಟ್, ಚಿನ್ನಾಭರಣ ಸಾಲ 12 ಕೋಟಿ ರು. ಜೊತೆಗೆ ರೈತರಿಗೆ 10.5 ಕೋಟಿ ರು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದೆ. ಜಿಲ್ಲೆಯಲ್ಲಿ 239 ಸಹಕಾರ ಸಂಘವಿದ್ದು ಇಲ್ಲಿನ ನಿರ್ದೇಶಕರ, ಸಿಬ್ಬಂದಿ ಪರಿಶ್ರಮ ಮಾದರಿಯಾಗಿಸಿಕೊಳ್ಳಬೇಕು ಎಂದರು.

ತಾಲೂಕಿನಲ್ಲಿ ಅತೀ ಹೆಚ್ಚು ತೆಂಗು ಬೆಳೆದು, ಎಳನೀರು ಮಾರುವ ರೈತರು ಹೋಬಳಿಯಲ್ಲಿದ್ದಾರೆ. ರೈತರ ಬೇಡಿಕೆಗೆ ಸ್ಪಂದಿಸಿ ಎಳನೀರು ಮಾರುಕಟ್ಟೆ ಆರಂಭಿಸಲಾಗಿದೆ. ವಿರೋಧಿಗಳು ಸುಳ್ಳು, ಟೀಕೆ ಬಿಟ್ಟು ಉತ್ತಮ ಕೆಲಸಕ್ಕೆ ಬೆಂಬಲ ನೀಡಬೇಕು ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿಯೇ ದೊಡ್ಡ ಹೋಬಳಿ ಕೇಂದ್ರ ಕಿಕ್ಕೇರಿ. ಪಟ್ಟಣ ಪಂಚಾಯ್ತಿ ಮೇಲ್ದರ್ದಜೆಗೆ ಏರಿಸಿ ಕಂದಾಯ ಗ್ರಾಮವಾಗಿ ಮಾಡಲು ಸಹಕರಿಸಬೇಕು ಎಂದು ಕೋರಿದರು.

ಇದೇ ವೇಳೆ ಸಹಕಾರ ಸಂಘದ ಪ್ರಗತಿಗೆ ಸ್ಪಂದಿಸದೆ ಸದಸ್ಯರು ಗಣ್ಯರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜೋಗಿಗೌಡ, ಉಪಾಧ್ಯಕ್ಷ ಎಚ್.ಕೆ.ಅಶೋಕ್, ಸಂಘದ ಅಧ್ಯಕ್ಷ ಕಾಯಿ ಸುರೇಶ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಟಿಎಪಿಪಿಸಿಎಂಎಸ್ ಅಧ್ಯಕ್ಷ ಬಿ.ಎಲ್‌ದೇವರಾಜು, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್, ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ಗ್ರಾಪಂ ಅಧ್ಯಕ್ಷ ಕೆ.ಜಿ.ಪುಟ್ಟರಾಜು, ಮೊಟ್ಟೆ ಮಂಜು, ಪುರಸಭಾ ಸದಸ್ಯ ಡಿ.ಪ್ರೇಮ್‌ಕುಮಾರ್, ರವೀಂದ್ರ ಬಾಬು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕುಮಾರ್, ಮುಖಂಡರಾದ ಪುರುಷೋತ್ತಮ್, ಎಲ್.ಪಿ.ನಂಜಪ್ಪ, ಕಾಯಿ ಮಂಜೇಗೌಡ, ಬಾಬು, ಪ್ರೇಮ್‌ಕುಮಾರ್, ಸಿಇಒ ಕೆ.ಆರ್.ಪುಟ್ಟರಾಜು, ಸಂಘದ ನಿರ್ದೇಶಕರು ಇದ್ದರು.

Share this article