ಮತದಾನ ಕೇಂದ್ರಗಳಲ್ಲಿ ಮೈಕ್ರೋ ವೀಕ್ಷಕರ ಕಾರ್ಯ ಮಹತ್ವದ್ದು: ದೀಪಾಂಕರ ಸಿನ್ಹಾ

KannadaprabhaNewsNetwork |  
Published : Apr 30, 2024, 02:05 AM IST
ಫೋಟೋ- 29ಜಿಬಿ4 ಮತ್ತು 29ಜಿಬಿ10 | Kannada Prabha

ಸಾರಾಂಶ

ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ದಿನದಂದು ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಚುನಾವಣೆಯ ಸಾಮಾನ್ಯ ವೀಕ್ಷಕರಾದ ದೀಪಾಂಕರ ಸಿನ್ಹಾ ಅವರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಚುನಾವಣೆಯಲ್ಲಿ ಮೈಕ್ರೋ ವೀಕ್ಷಕರ ಕೆಲಸ ಮಹತ್ವದ್ದಾಗಿದ್ದು, ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ದಿನದಂದು ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಚುನಾವಣೆಯ ಸಾಮಾನ್ಯ ವೀಕ್ಷಕರಾದ ದೀಪಾಂಕರ ಸಿನ್ಹಾ ಅವರು ಸೂಚಿಸಿದರು.

ಸೋಮವಾರದಂದು ನಗರದ ಡಾ. ಪಂಡಿತ್ ರಂಗಮಂದಿರದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ನಡೆದ ಮೈಕ್ರೋ ಅಬ್ಸರ್ವರ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಯೋಜಿತ ಮತಗಟ್ಟೆಗಳಲ್ಲಿ ಮತದಾನಕ್ಕೂ ಮುನ್ನ 90 ನಿಮಿಷ ಮುಂಚೆ ನಡೆಯುವ ಅಣಕು ಮತದಾನದಿಂದ ಹಿಡಿದು ಮತದಾನ ಪಕ್ರಿಯೆ ಮುಗಿಯುವ ವರೆಗೂ ತೀವ್ರ ನಿಗಾವಹಿಸಬೇಕು. ಈ ಎಲ್ಲಾ ಪಕ್ರಿಯೆಗಳ ಕುರಿತು ನನಗೆ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಇಲ್ಲಿ ನೀಡುವ ತರಬೇತಿಯಲ್ಲಿ ಚೆನ್ನಾಗಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲ/ಸಂಶಯಗಳಿದಲ್ಲಿ ಇಲ್ಲೇ ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಈ ಮೂಲಕ ಮತದಾನದ ದಿನದಂದು ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿಗಳೂ ಅದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾತನಾಡಿ, ಮೈಕ್ರೋ ಅಬ್ಸರ್ವರ್‌ಗಳು ಮತದಾನಕ್ಕೂ ಮುನ್ನ ದಿನವಾದ ಮೇ 6 ರಂದು ಬೆಳಿಗ್ಗೆ 10 ಗಂಟೆಗೆ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಸಹಾಯಕ ಚುನಾವಣಾಧಿಕಾರಿಗಳ ಮುಂದೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮತದಾನದ ದಿನದಂದು ಮತಗಟ್ಟೆಗಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕಾರ್ಯಚಟುವಟಿಕೆಗಳ ತೀವ್ರ ನಿಗಾವಹಿಸುವುದರ ಜೊತೆಗೆ ಚುನಾವಣೆ ಆಯೋಗ ನೀಡಿರುವ ಮಾರ್ಗದರ್ಶನದಂತೆ ಎಲ್ಲಾ 18 ಅಂಶಗಳು ಪಾಲನೆಯಾಗುವಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

ಅಭ್ಯರ್ಥಿ/ಏಜೆಂಟರು ಎದುರಲ್ಲಿ ಅಣುಕು ಮತದಾನ ಮಾಡಬೇಕು. ಎಲ್ಲಾ ಅಭ್ಯರ್ಥಿಗಳು ಸಮಾನ ಮತಗಳನ್ನು ಚಲಾಯಿಸಬೇಕು. ಚಲಾಯಿತ ಮತಗಳ ಲೆಕ್ಕವಿಡಬೇಕು. ಮತದಾನದಲ್ಲಿ ಚಲಾಯಿಸಿದ ಮತಗಳನ್ನು ಸಿಯು ಮತ್ತು ವಿವಿಪ್ಯಾಟ್‍ನಿಂದ ಅಳಿಸಿ ಹಾಕಬೇಕು ಮುದ್ರಿತ ಚೀಟಿಗಳ ಹಿಂದೆ ಒಔಅಏ Pಔಐಐ SಐIP ಸೀಲ್ ಹಾಕಬೇಕು ಅವುಗಳನ್ನು ಕಪ್ಪು ಬಣ್ಣದ ಕವರಲ್ಲಿಟ್ಟು ಸೀಲ್ ಮಾಡಬೇಕು ಎಂದು ವಿವರಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ ಶಂಕರ್ ಅವರು ಮಾತನಾಡಿ, ಮತದಾನ ದಿನದಂದು ಅತ್ಯಂತ ಸೂಕ್ಷ್ಮ ಮತ್ತು ಗಂಭೀರವಾಗಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಯಾವುದೇ ರೀತಿ ಕರ್ತವ್ಯ ಲೋಪ ಆಗದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.

ನ್ಯಾಷನಲ್ ಲೇವಲ್ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರರೆಡ್ಡಿ ಅವರು ಮೈಕ್ರೋ ಅಬ್ಸರ್ವರ್ ಗಳಿಗೆ ತರಬೇತಿ ನೀಡಿದರು. ಕಲಬುರಗಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸದಾಶಿವ ವೀ ರಾತ್ರಿಕರ್ ಅವರು ಹಾಜರಿದ್ದರು.

ಕೇಂದ್ರ ಸರ್ಕಾರದ ಸಿ ದರ್ಜೆಗಿಂತ ಮೇಲ್ಪಟ್ಟ ಅಧಿಕಾರಿಗಳು, ಬ್ಯಾಂಕ್, ಎಲ್‍ಐಸಿ ಮುಂತಾದ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಮೈಕ್ರೋ ಅಬ್ಸರ್ವರ್ ಆಗಿ ನೇಮಕ ಮಾಡಲಾಗಿದ್ದು, ಎಲ್ಲರೂ ತರಬೇತಿಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ