ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ಫಿರ್ ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಸಹಯೋಗದಲ್ಲಿ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮ ನಡೆಯಿತು.
ಉರ್ದು ಭಾಷೆ ಕೂಡ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದ ಭಾಷೆಯಾಗಿದ್ದು, ನಮ್ಮ ಕನ್ನಡ ಹಿಂದಿ ಮತ್ತು ದೇಶದ ಇತರ ಭಾಷೆಯಂತೆ ಅತ್ಯಂತ ಸೊಗಸಾದ ಭಾಷೆಯಾಗಿದೆ ಉರ್ದು ಕವಿಗಳು ಹಿಂದಿ ಮತ್ತು ಕನ್ನಡ ಕವಿ ಒಳಗೊಂಡಂತೆ ಉತ್ತಮ ಕವಿ ಸಮ್ಮೇಳನ ಮಾಡುತ್ತಾ ಬಂದಿದ್ದಾರೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಪರಸ್ಪರ ಅನುಭವ ಹಂಚಿಕೊಳ್ಳಲು ಭಾಷೆ ಅತ್ಯಂತ ಮಹತ್ವವಾಗಿದೆ. ಉರ್ದು ಭಾಷೆ ನಮ್ಮ ದೇಶದ ಭಾಷೆ ಇದು ಎಲ್ಲರೂ ಮಾತಾಡುವಂತಹ ಸಿಹಿ ಭಾಷೆ ಎಲ್ಲರಿಗೂ ಪ್ರಿಯವಾದ ಭಾಷೆ ಕೂಡ ಹೌದು ಎಂದು ಹೇಳಿದರು.ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ. ಕೆ.ಎಂ. ಸೈಯದ ಮಾತನಾಡಿ, ಕನ್ನಡ ಉರ್ದು ಹಿಂದಿ ಎಲ್ಲ ಭಾಷೆಗಳಿಗೆ ಜನ ಪ್ರೀತಿಸುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ ಪ್ರತಿ ವರ್ಷ ಇಲ್ಲಿ ಬೃಹತ್ ಕವಿ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸ ಉಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ. ಪಾಷಾ, ಆಸಿಫ್ ಕರ್ಕಿಹಳ್ಳಿ, ಎಂ.ತಾಹಿರ ಅಲಿ ಜಾಫರ್ ಖಾನ್, ರಫೀ ಕೋತ್ವಾಲ್, ಶಫೀಕ್ ದಾಗ್ದಾರ್, ಮೊಹಮ್ಮದ್ ಜಿಲಾನ್ ಕೀಲ್ಲೇದಾರ್, ಚಾಂದ್ ಪಾಷಾ ಕೀಲ್ಲೇದಾರ್, ಸಾವಿತ್ರಿ ಮುಜುಮ್ದಾರ್, ಜೇಬಾ ತಬಸ್ಸುಮ್, ಮಾನ್ವಿ ಪಾಷಾ, ಹುಸೇನ್ ಪೀರಾ ಮುಜಾವರ್ , ಶಮಿಮುನ್ನಿಸ ಬೇಗಂ ಹುನಗುಂದ, ಹಬೀಬ್ ಖಾನ್, ಸೈಯದ್ ಇಮಾಮ್ ಹುಸೇನ್ ಸಿಂದೋಗಿ, ದಾವುದ್ ಹುನಗುಂದ , ಸಿರಾಜ್ ಲಾಟಿ ರಿಯಾಜ್, ಅಹಮದ್ ಸಿದ್ದೀಕ್, ಹುಸೇನ್ ಕರ್ಕಿಹಳ್ಳಿ, ಅಬ್ದುಲ್ ಅಜೀಜ್ ಮಾನ್ವಿಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿಗಷ್ಟೇ ಡಾಕ್ಟರೇಟ್ ಪದವಿ ಪಡೆದ ಡಾ, ಕೆಎಂ ಸೈಯದಗೆ ಸನ್ಮಾನಿಸಲಾಯಿತು.