- ಪ್ರಜಾಕುಮಾರೀಸ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ’ದಿವ್ಯ ಬೆಳಕು’ ಕಾರ್ಯಕ್ರಮ
ಜೀವನದಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ, ಬೆಳಕನ್ನು ಚೆಲ್ಲುವುದೇ ದೀಪಾವಳಿ ಹಬ್ಬದ ಉದ್ದೇಶ ಎಂದು ಶ್ರೀ ಶಕ್ತಿ ಮದ್ಯವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕ ಡಾ.ಅನೀತ್‌ಕುಮಾರ್ ಹೇಳಿದರು.
ನಗರದ ಪ್ರಜಾ ಕುಮಾರೀಸ್ ಸಂಸ್ಥೆಯಲ್ಲಿ ಭಾನುವಾರ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ಧ ’ದಿವ್ಯ ಬೆಳಕು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನದಲ್ಲಿ ತುಂಬಿರುವ ಕಲ್ಮಶ ತ್ಯಜಿಸಿ ಸೌಹಾರ್ದತೆಯಿಂದ ಬಾಳುವ ಪರಿಪಾಠ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಮನುಷ್ಯ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳುವ ಬದಲು ರಾವಣನ ಗುಣದಂತೆ ವರ್ತಿಸುತ್ತಿದ್ದಾನೆ. ಇದರಿಂದ ಹೊರಬಂದು ಸದ್ವಿಚಾರ, ಸನ್ನಡತೆ ಹಾಗೂ ಒಳಿತನ್ನು ಬಯಸುವ ಮಾನವ ಗುಣಗಳನ್ನು ಮನಸ್ಸಿನಲ್ಲಿ ಅಚ್ಚಳಿಯದೇ ಸ್ಥಾಪಿಸಬೇಕು ಎಂದು ಹೇಳಿದರು.ರೋಟರಿ ಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್ ಮಾತನಾಡಿ, ಕೆಟ್ಟತನ ದೂರಗೊಳಿಸಲು ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮರು ಕೆಟ್ಟಶಕ್ತಿಯನ್ನು ಸಂಹಾರಗೊಳಿಸಿ ಮಾನವ ಕುಲಕ್ಕೆ ಒಳಿತು ಬಯಸಿದವರು. ಆ ಭಗವಂತನ ಆದರ್ಶ ಇಟ್ಟುಕೊಂಡು ಬಾಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.ಅಣುವ್ರತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ ಮಾತನಾಡಿ, ದೀಪಾವಳಿ ಹಬ್ಬವೆಂದರೆ ಪಟಾಕಿ ಸಿಡಿಸಿ ಸಂಭ್ರಮಿಸುವುದಲ್ಲ. ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಬಾಳುವುದು. ಹಿರಿಯರು ಕಟ್ಟಿಕೊಟ್ಟಿರುವ ಹಬ್ಬದ ಆಚರಣೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಭಾರತೀಯ ಸಂಸ್ಕೃತಿ ಹಬ್ಬವನ್ನು ಎಲ್ಲೆಡೆ ಪಸರಿಸಬೇಕು ಎಂದು ತಿಳಿಸಿದರು.ಬ್ರಹ್ಮ ಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ, ಬ್ರಹ್ಮಕುಮಾರೀಸ್ ಪಿತಾಮಹಾ ಬಾ ಬಾರವರ ಆರ್ಶೀವಾದದ ಜೊತೆಗೆ ನಾವೆಲ್ಲರೂ ಆಧಾತ್ಮಕ ಚಿಂತನೆ ಹೊಂದಬೇಕು. ರಾವಣನ ನಕಾರಾತ್ಮಕ ಚಿಂತನೆಗಳನ್ನು ಬದಿಗಿರಿಸಿ, ಶ್ರೀರಾಮನ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದೇ ದೀಪಾವಳಿ ಧ್ಯೇಯವಾಗಿದೆ ಎಂದು ಹೇಳಿದರು.ಇದೇ ವೇಳೆ ಮಕ್ಕಳಿಂದ ಆದಿಲಕ್ಷ್ಮೀ, ವಿಜಯಲಕ್ಷ್ಮೀ, ಗಜಲಕ್ಷ್ಮೀ, ಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ಸರಸ್ವತಿ ವೇಷಭೂಷಣದಲ್ಲಿ ಪಾಲ್ಗೊಂಡು ಸಭಿಕರನ್ನ ರಂಜಿಸಿದರು. ಅಲ್ಲದೇ ಶ್ರೀ ಕೃಷ್ಣ, ನಾರಾಯಣ ಹಾಗೂ ರಾಧೆ ವೇಷಧಾರಿಗಳು ನೋಡುಗರನ್ನು ಮನಸೂರೆಗೊಂಡವು. ಬಳಿಕ ಅಷ್ಟ ಲಕ್ಷ್ಮೀಯರಿಗೆ ಮಹಿಳೆಯರು ಆರತಿ ಎತ್ತಿ ಪೂಜಿಸಿದರು.ಬಳಿಕ ಶ್ರೀರಾಮಾಯಣ ಹಾಗೂ ಭಗವಂತ ಮತ್ತು ಮಾಯೆ ಕುರಿತು ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ರಾಜಪ್ಪ, ಕನ್ನಡಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರಗೌಡ, ನಿವೃತ್ತ ಅಧಿಕಾರಿ ದಯಾನಂದ್, ವೈದ್ಯ ಡಾ. ರಶ್ಮಿ, ಜ್ಞಾನ ರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್, ಮುಖಂಡ ಗೌತಮ್ ಉಪಸ್ಥಿತರಿದ್ದರು. 26 ಕೆಸಿಕೆಎಂ 2ಚಿಕ್ಕಮಗಳೂರಿನ ಪ್ರಜಾಕುಮಾರೀಸ್ ಸಂಸ್ಥೆಯಲ್ಲಿ ಭಾನುವಾರ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ಧ ’ದಿವ್ಯ ಬೆಳಕು’ ಕಾರ್ಯಕ್ರಮವನ್ನು ಡಾ.ಅನೀತ್‌ಕುಮಾರ್ ಅವರು ಉದ್ಘಾಟಿಸಿದರು.