ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.19ರಂದು ನಡೆಯಲಿರುವ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿಮಾನ, ಪ್ರೀತಿಗಾಗಿ ವಿಜಯಪುರದಲ್ಲಿ ಹಾಡು ಬಿಡುಗಡೆಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜನತೆ, ಅಭಿಮಾನಿಗಳು ಆಗಮಿಸಬೇಕು ಎಂದು ವಿನಂತಿಸಿದರು.
ರೋಣ ಚಿತ್ರದ ನಿರ್ದೇಶಕ ಸತೀಶಕುಮಾರ ಮಾತನಾಡಿ, ಈ ಚಿತ್ರದಲ್ಲಿ ಪೊಲಿಟಿಕಲ್ ಡ್ರಾಮಾ, ತಂದೆ-ಮಗನ ಬಾಂಡಿಂಗ್, ಸ್ನೇಹಿತರ, ಸಂಬಂಧಿಕರ ವರ್ತನೆ, ಹಲವಾರು ಥ್ರಿಲ್ಲರ್ ವಿಚಾರಗಳು ಸೇರಿದಂತೆ ಎಲ್ಲವನ್ನು ಇದು ಒಳಗೊಂಡಿದೆ. ಪ್ರೇಕ್ಷಕರಿಗೆ ಇದು ಪೂರ್ಣ ಪ್ರಮಾಣದ ಮಸಾಲಾ ಚಿತ್ರ ಎಂದರು. ಚಿತ್ರಗಳಗಲ್ಲಿ ಬರುವ ಪಾತ್ರಗಳು ಎಲ್ಲರಿಗೂ ತಮ್ಮ ಸುತ್ತಮುತ್ತಲಿನ ಘಟನೆಗಳನ್ನು ನೆನಪಿಸುತ್ತವೆ. ಇದರಲ್ಲಿ ಒಟ್ಟು ನಾಲ್ಕು ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂದರು.ರೋಣ ಚಿತ್ರದ ನಾಯಕ ರಘುರಾಜನ ಮಾತನಾಡಿ, ನಾಯಕಿಯಾಗಿ ಪ್ರಕೃತಿ ಪ್ರಸಾದ ಅಭಿನಯಿಸಿದ್ದಾರೆ. ಹಿರಿಯ ನಟರಾದ ಅವಿನಾಶ ಸೇರಿದಂತೆ ಹಲವಾರ ತಾರಾಗಣವೇ ಇದೆ. ಚಿತ್ರೋದ್ಯಮವನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಹೆಚ್ಚು ಪ್ರೀತಿಸುತ್ತಾರೆ. ಅವರ ಅಭಿಮಾನಕ್ಕೆ ನಾವು ರುಣಿಯಾಗಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದ ಗೀತಾ, ದರ್ಶನ, ಮನೋಜ, ಆದೀಶ್ವರ ಉಪಸ್ಥಿತರಿದ್ದರು.