ಕನ್ನಡಪ್ರಭ ವಾರ್ತೆ ಚಾಮರಾಜನಗರ
ನೂತನ ಅಧ್ಯಕ್ಷೆ ರೂಪ ಮೋಹನ್ ಮಾತನಾಡಿ, ಗ್ರಾಪಂ ಎಲ್ಲ ಸದಸ್ಯರು ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರು ಒಟ್ಟಿಗೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಸಂಸದರು, ಶಾಸಕರು ಹಾಗೂ ಸ್ಥಳಿಯ ಮುಖಂಡರು ಯಜಮಾನರ ಸಹಕಾರದೊಂದಿಗೆ ಹೆಚ್ಚಿನ ಅನುದಾನವನ್ನು ತಂದು ಗ್ರಾಪಂ ಅನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವುದಾಗಿ ತಿಳಿಸಿದರು. ನೂತನ ಅಧ್ಯಕ್ಷೆ ರೂಪ ಮೋಹನ್ ಹಾಗೂ ಸದಸ್ಯರನ್ನು ಭಾರಿ ಗಾತ್ರದ ಹಾರಗಳನ್ನು ಹಾಕಿ ಅಭಿನಂದಿಸಿ ಸಿಹಿ, ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನವೀನ್‌ಕುಮಾರ್ ಸದಸ್ಯರಾದ ನಿರ್ಮಲರಾಮು, ಶಂಕರ್, ವಿಶಾಲಾಕ್ಷಿ, ರಂಗಸ್ವಾಮಿನಾಯಕ, ಮಹದೇವಶೆಟ್ಟಿ, ಶಿವಣ್ಣೇಗೌಡ, ಮಣಿಕಂಠ, ಕವಿತಾ, ಶೈಲಜಾ, ಕವಿತಾ, ಪೂವಮ್ಮ, ಚೈತ್ರ, ಸಿದ್ದರಾಜು, ನಾಗರತ್ನಮ್ಮ, ರಾಜಮ್ಮ, ಪದ್ಮ, ಮುಖಂಡರಾದ ದಿವಾಕರ್, ವೀರಣ್ಣ, ಹೊಂಗನೂರು ಪುಟ್ಟಸ್ವಾಮಿ, ತಾಪಂ ಮಾಜಿ ಸದಸ್ಯ ಸಿ.ಮಹದೇವ್, ಡಾ.ಸುಗಂಧರಾಜ್, ಕುನ್ನನಂಜಯ್ಯ, ಕುನ್ನನಾಯಕ, ಜಯರಾಜ್ ಇದ್ದರು.