ಹುಬ್ಬಳ್ಳಿ:
ವಿದ್ಯಾನಗರದ ನೇಕಾರ ಕಾಲನಿಯ ಹ್ಯಾಪಿ ಸ್ಕೂಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಹಾಗೂ ಸ್ವರ್ಣ ಸಮೂಹ ಸಂಸ್ಥೆಯಿಂದ ರೂಪಿಸಿದ್ದ ಮೂರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವರ್ಣ ಸಂಸ್ಥೆಯಿಂದ 2,000 ಚದರ ಅಡಿ ಪೇವರ್ಸ್ ಅಳವಡಿಕೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ದಾರಿ ಹಾಗೂ 2 ತರಗತಿ ಕೊಠಡಿಗೆ ಬಣ್ಣ, ಕಾರ್ಯಕ್ರಮ ನಡೆಯುವ ಜಾಗಕ್ಕೆ ಮಳೆ ಗಾಳಿ, ಬಿಸಿಲು ಬಡಿಯದಂತೆ ವೇದಿಕೆ ಮೇಲೆ ಹೊಸ ಶೆಡನ್ನ್ನು ನಮ್ಮ ಸಂಸ್ಥೆಯಿಂದ ನಿರ್ಮಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಸಭೆ ಆಯೋಜಿಸಲು ಹಾಗೂ ಇತರ ಶಾಲಾ ಕಾರ್ಯಕ್ರಮಗಳಿಗೆ ಅನುಕೂಲಕರ ಮತ್ತು ಸುರಕ್ಷಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಸರ್ಕಾರಿ ಶಾಲೆಗಳಿಗೆ ಸರ್ಕಾರ ಸರಿಯಾಗಿ ಅನುದಾನ ನೀಡದಿರುವ ಸಂದರ್ಭದಲ್ಲಿ ರೋಟರಿ ಸಂಸ್ಥೆ ಮುಂದೆ ಬಂದು ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿರುವುದು ಸಾರ್ಥಕ ಸೇವೆಯಾಗಿದೆ. ಇಂಥ ಕಾರ್ಯಗಳಿಗೆ ನಾನೂ ಕೂಡ ನನ್ನ ಕೈಲಾದ ಸಹಾಯ-ಸಹಕಾರ ನೀಡಿದ್ದೇನೆ. ಮುಂದಿನ ದಿನಗಳಲ್ಲೂ ಕ್ಲಬ್‍ನ ಸಾಮಾಜಮುಖಿ ಕಾರ್ಯಗಳಿಗೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.3170 ಡಿಸ್ಟ್ರಿಕ್ಟ್ ಜಿಲ್ಲಾ ಗೌರ್ವನರ್ ಅರುಣ ಭಂಡಾರೆ ಮಾತನಾಡಿ , ನಗರದಲ್ಲಿ 10ಕ್ಕೂ ಹೆಚ್ಚು ಹಿರಿಯ ಕ್ಲಬ್‍ಗಳ ಜತೆಗೆ ಕಳೆದ 3-4 ವರ್ಷಗಳಿಂದ ಸಾಮಾಜ ಸೇವೆಯಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ತೊಡಗಿಕೊಂಡಿರಿವುದನ್ನು ಶ್ಲಾಘಿಸಿದರು.