ರೋಟರಿ ಮಂಗಳೂರು ಸಿಟಿ ಕ್ಲಬ್‌ಗೆ ‘ರೋಟರಿ ಗ್ಲೋಬಲ್ ಎಕ್ಸೆಲೆನ್ಸ್’ ಶ್ರೇಷ್ಠ ಪ್ರಶಸ್ತಿ

KannadaprabhaNewsNetwork | Published : Jul 2, 2025 11:50 PM
ರೋಟರಿ ಮಂಗಳೂರು ಸಿಟಿ ಕ್ಲಬ್‌ಗೆ ‘ರೋಟರಿ ಗ್ಲೋಬಲ್ ಎಕ್ಸೆಲೆನ್ಸ್’ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ರೋಟರಿ ಮಂಗಳೂರು ಸಿಟಿ ಕ್ಲಬ್ ಸಂಸ್ಥೆಯ ಪ್ರಾಯೋಜತ್ವದಲ್ಲಿ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ರ ಆಡಳಿತ ಸಮಿತಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪಿಲಿಕುಲ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.

ಕನ್ನಡಪ್ರಭ ವಾರ್ತೆ ಮಂಗಳೂರುರೋಟರಿ ಮಂಗಳೂರು ಸಿಟಿ ಕ್ಲಬ್ ಸಂಸ್ಥೆಯ ಪ್ರಾಯೋಜತ್ವದಲ್ಲಿ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ರ ಆಡಳಿತ ಸಮಿತಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪಿಲಿಕುಲ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.ರೋಟರಿ ಜಿಲ್ಲೆ ೩೧೮೧ರ ಗವರ್ನರ್‌ ವಿಕ್ರಮ್ ದತ್ತ ಸಮಾವೇಶ ಉದ್ಘಾಟಿಸಿ, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಶುಭ ಕೋರಿದರು. ರೋಟರಿ ಜಿಲ್ಲೆ ೩೧೮೨ ಗವರ್ನರ್ ದೇವಾನಂದ್, ಮಾಜಿ ಗವರ್ನರ್ ರವೀಂದ್ರ ಭಟ್, ಲಯನ್ಸ್ ಜಿಲ್ಲಾ ಗವರ್ನಾರ್ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿದ್ದರು. ಮಾಜಿ ಗವರ್ನರ್‌ ಅಲಗು ಅಲಗಪ್ಪ ದಿಕ್ಸೂಜಿ ಭಾಷಣ ಮಾಡಿದರು.

ಈ ಸಂದರ್ಭ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವಿವಿಧ ಸಮಾಜ ಸೇವಾ ಚಟುವಟಿಕೆಗಳು ಮತ್ತು ಜಿಲ್ಲಾ ಮಟ್ಟದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಮಧ್ಯಮ ವರ್ಗದ ಕ್ಲಬ್ ವಿಭಾಗದಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಗೆ ಶ್ರೇಷ್ಠ ಮಟ್ಟದ “ಗ್ಲೋಬಲ್ ಎಕ್ಸೆಲೆನ್ಸ್” ಪ್ರಶಸ್ತಿಯನ್ನು ಕ್ಲಬ್‌ನ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ಅವರಿಗೆ ಪ್ರದಾನ ಮಾಡಲಾಯಿತು.ವೇದಿಕೆಯಲ್ಲಿ ಸಹಾಯಕ ಗವರ್ನರ್‌ ಡಾ. ರಂಜನ್, ಸಂಸ್ಥೆಯ ಕಾರ್ಯದರ್ಶಿ ಸುದೇಶ್, ಸಂಘಟನಾ ಸಮಿತಿ ಅಧ್ಯಕ್ಷ ಸಮಿತ್ ರಾವ್, ಪ್ರಶಸ್ತಿ ಆಯ್ಕೆ ಸಮಿತಿ ಅದ್ಯಕ್ಷ ಅರವಿಂದ್ ಭಟ್, ಲತಾ ದತ್ತ, ಇನ್ನರ್ ವಿಲ್ ಕ್ಲಬ್‌ ಅಧ್ಯಕ್ಷೆ ವೈಶಾಲಿ ಕುಡ್ವ ಮತ್ತು ಕ್ಲಬ್‌ನ ಪದಾಧಿಕಾರಿಗಳು ಇದ್ದರು.

ರೋಟರಿ ಮಂಗಳೂರು ಸಿಟಿ ಸಂಸ್ಥೆಯು ನಗರದ ಲೇಡಿಗೋಶನ್ ಆಸ್ಪತ್ರೆಯ ಹೆರಿಗೆ ಮತ್ತು ನವಜಾತ ಶಿಶುಗಳ ವಿಭಾಗವನ್ನು ಆಧುನಿಕ ಶೈಲಿಯಲ್ಲಿ ಶ್ರೇಷ್ಠ ಮಟ್ಟಕ್ಕೆ ಪರಿವರ್ತಿಸಿ ನವೀಕರಿಸಿದ್ದು, ಕಿವುಡರಿಗೆ ಶ್ರವಣ ಯಂತ್ರೋಪರಣಗಳ ವಿತರಣೆ, ಶಾಲೆಗೆ ಮಳೆ ನೀರು ಕೊಯಿಲಿನ ಯಂತ್ರೋಪರಣಗಳ ಕೊಡುಗೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅನಾಥ ಆಶ್ರಮಗಳಿಗೆ ಪೀಠೋಪರಣ ಮತ್ತು ವಿದ್ಯುತ್ ಉಪಕರಣಗಳ ಕೊಡುಗೆ ಇತ್ಯಾದಿ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.