ಕನ್ನಡಪ್ರಭ ವಾರ್ತೆ ಜಮಖಂಡಿ:
ಉತ್ತಮ ಅವಕಾಶವನ್ನು ರೋಟರಿ ಸಂಸ್ಥೆ ಒದಗಿಸಿದೆ ಒಂದೇ ವರ್ಷದ ಅಲ್ಪ ಸಮಯದಲ್ಲಿ ತಮಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡುವ ಜವಾಬ್ದಾರಿ ಇದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉದಾಹರಣೆ ನೀಡಿ ಮಾತನಾಡಿದ ಅವರು ಅಸಾಧ್ಯವೆಂದು ಸುಮ್ಮನಾಗಬಾರದು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರಾಗಿ ಕಿರಣ ಕುಮಾರ ದೇಸಾಯಿ, ಕಾರ್ಯದರ್ಶಿಯಾಗಿ ಮಲ್ಲಪ್ಪ ಬುಜರುಕ್, ಇನ್ನರ್‌ವ್ಹೀಲ್‌ನ ಅಧ್ಯಕ್ಷರಾಗಿ ಅಲಕಾ ಮಾಳಗಿ, ಕಾರ್ಯದರ್ಶಿಯಾಗಿ ಗಿರಿಜಾ ಮೈತ್ರಿ, ಅಧಿಕಾರ ವಹಿಸಿಕೊಂಡರು. ಬೆಳಗಾವಿಯ ಇನ್ನರ ವ್ಹೀಲ್ ಕ್ಲಬ್‌ನ ರೂಪಾ ಪೋತದಾರ ಮಹಿಳಾ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿಸಿದರು. ಡಾ.ಮಾಳೇಶ ಪೂಜಾರ, ಡಾ.ಜ್ಯೋತಿ ದೇವರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಇನ್ನರ್‌ವ್ಹೀಲ್ ಅಧ್ಯಕ್ಷೆ ಡಾ.ಅಶ್ವಿನಿ ಪೂಜಾರ ವರದಿ ವಾಚನ ಮಾಡಿದರು. ನೂತನ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.