ಕನ್ನಡಪ್ರಭ ವಾರ್ತೆ ಬಸವಾಪಟ್ಟಣಸಂಸ್ಕಾರ, ಸಂಸ್ಕೃತಿ ಶಾರದ ವಿದ್ಯಾಸಂಸ್ಥೆಯ ಪತ್ರೀಕವಾಗಿದೆ. ಶಾಲೆಯ ವಾತಾವರಣ ಉತ್ತಮವಾಗಿದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಮೊಬೈಲ್‌ಗಳನ್ನು ಬಿಟ್ಟು ಓದಿನ ಕಡೆ ಗಮನಹರಿಸಿ. ಸಾಧನೆಗಳು ಭಾಷಣದಿಂದ ಬರಬಾರದು. ಕಾರ್ಯವನ್ನು ಸಾಧಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿ ಈ ಸಂಸ್ಥೆಯಿಂದ ಹೊರಬರುತ್ತಿದ್ದು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಬಸವಾಪಟ್ಟಣದ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿ ಭೀಮಣ್ಣನವರು ತಿಳಿಸಿದರು.
ಅವರು ಬಸವಾಪಟ್ಟಣ ಶ್ರೀ ಶಾರದ ವಿದ್ಯಾಸಂಸ್ಥೆಯ ೨೦೫-೨೬ನೇ ಸಾಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಾ, ಗ್ರಾಮದಲ್ಲಿ ಶಾರದ ವಿದ್ಯಾಸಂಸ್ಥೆಯು ಉತ್ತಮವಾದ ಶಾಲೆಯಾಗಿದ್ದು, ಕಲಿಕೆಗೆ ಪೂರಕವಾಗಿದೆ ಎಂದರು. ಇದೇ ವೇಳೆ ಮಾತನಾಡಿದ ಶಾರದ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಕೆ ರಮೇಶ್, ಪೋಷಕರು ನಮ್ಮ ಶಾಲೆಯ ಮೇಲೆ ಇಟ್ಟಿರುವ ಭರವಸೆಯನ್ನು ನಾವು ಉಳಿಸಿಬೆಳೆಸಿಕೊಂಡು ಹೋಗುತ್ತೇವೆ. ತಮ್ಮ ಮೇಲೆ ವಿಶ್ವಾಸ ಹೀಗೆ ಮುಂದುವರಿಯಲಿ ಎಂದು ಕೋರಿದರು. ಇದೇ ವೇಳೆ ಅರಕಲಗೂಡು ತಾಲೂಕು ಶಿಕ್ಷಕ ಸಂಘದ ಕಾರ್ಯದರ್ಶಿ ಕೇಶವಮೂರ್ತಿ ಶಾರದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆಂಡಗಣ್ಣ ಎಸ್‌ಸಿವಿಡಿಎಸ್ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರು ಕೆಪಿಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರಾದ ನಾಗೇಂದ್ರ ಸಹಸದಸ್ಯರು ಅಲ್ಲದೆ ಶಾರದಾ ವಿದ್ಯಾಸಂಸ್ಥೆಯ ಸಹಶಿಕ್ಷಕರು ಪೋಷಕರು, ವಿದ್ಯಾರ್ಥಿಗಲು, ಹಾಜರಿದ್ದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಚೇತನ ಗಣಿತದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸಂಸ್ಕೃತ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಿಕ್ಷಕರು ವೈಯಕ್ತಿಕ ಬಹುಮಾನಗಳನ್ನು ನೀಡಲಾಯಿತು. ಶಾಲೆಗಾಗಿ ಅಂಬರೀಷ್ ಕೆಂಡಗಣ್ಣ ರಾಜೀವ್‌ರವರ ಕೊಡುಗೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.