
ಭಟ್ಕಳ: ಇಲ್ಲಿನ ನವಾಯತ್ ಕಾಲೋನಿಯಲ್ಲಿ ನಡೆದ ರೋಟರಿ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶಾಕೀರ್ ಹುಸೇನ್ ಹಾಗೂ ಕಾರ್ಯದರ್ಶಿಯಾಗಿ ಮಿಸ್ಟಾ ಉಲ್ ಹಕ್ ಅಧಿಕಾರ ಸ್ವೀಕರಿಸಿದರು.
ಅಸಿಸ್ಟೆಂಟ್ ಗವರ್ನರ್ ಮಹೇಶ ಕಲ್ಯಾಣಪುರ ರೋಟರಿ ಸಂಘಟನೆಯು ಕೇವಲ ಕಾರ್ಯಕ್ರಮಗಳಿಗಾಗಿ ಅಲ್ಲ, ಬದಲಾಗಿ ಸೇವಾ ಮನೋಭಾವ, ಬದ್ಧತೆ ಹಾಗೂ ಒಗ್ಗಟ್ಟು ಇದರ ಮೂಲ ಅಂಶಗಳಾಗಿವೆ ಎಂದರು.
ಡಾ.ಸವಿತಾ ಕಾಮತ್, ಇಷ್ತಿಯಾಕ್ ಹಸನ್, ಡಾ.ಝಹೀರ್ ಕೋಲಾ, ಜಲಾಲುದ್ದೀನ್ ಕಾಸರಗೋಡು, ರಾಜೇಶ್ ನಾಯಕ್, ಎಸ್.ಎಂ. ಖಾನ್, ನಜೀರ್ ಕಾಶೀಮ್‌ಜಿ ಮೊದಲಾದವರು ಉಪಸ್ಥಿತರಿದ್ದರು.ಡಾ. ಗೌರೀಶ್ ಪಡುಕೋಣೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಉತ್ತಮ ಸೇವೆ ನೀಡಿದ ಶುಶ್ರೂಕಿಯರು ಹಾಗೂ ವಾಹನ ತರಬೇತುದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಟ್ಕಳ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಶುಶ್ರೂಷಕಿ ಅರ್ಚನಾ ಅವರನ್ನು ಸನ್ಮಾನಿಸಿರುವುದು.