ಶ್ರೀಮಠಕ್ಕೆ ಬರುವಂತಹ ಭಕ್ತರ ಕುಡಿಯುವ ನೀರಿಗೆ ಅನಾನುಕೂಲ ಉಂಟಾಗುತ್ತಿತ್ತು, ಸಿದ್ಧರಬೆಟ್ಟ ರೋಟರಿ ಸಂಸ್ಥೆಯು ಶಾಶ್ವತವಾಗಿ ನೂತನ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ ಲಕ್ಷಾಂತರ ಭಕ್ತರ ದಣಿವನ್ನು ನೀಗಿಸಿದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಶ್ರೀಮಠಕ್ಕೆ ಬರುವಂತಹ ಭಕ್ತರ ಕುಡಿಯುವ ನೀರಿಗೆ ಅನಾನುಕೂಲ ಉಂಟಾಗುತ್ತಿತ್ತು, ಸಿದ್ಧರಬೆಟ್ಟ ರೋಟರಿ ಸಂಸ್ಥೆಯು ಶಾಶ್ವತವಾಗಿ ನೂತನ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ ಲಕ್ಷಾಂತರ ಭಕ್ತರ ದಣಿವನ್ನು ನೀಗಿಸಿದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸಿ.ಎನ್.ದುರ್ಗಾ ಹೋಬಳಿ ಸಸ್ಯಕಾಶಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ರೋಟರಿ ಬೆಂಗಳೂರು ಬ್ರಿಗೇಡ್ ಮತ್ತು ಸಿದ್ದರಬೆಟ್ಟ ರೋಟರಿ ಸಂಸ್ಥೆಯಿಂದ ನೂತನವಾಗಿ ಸ್ಥಾಪಿಸಲಾದ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಶುದ್ಧ ನೀರಿನ ಅವಶ್ಯಕತೆ ಪ್ರತಿಯೊಬ್ಬ ವ್ಯಕ್ತಿಗೂ ಇದೆ, ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ರೋಟರಿ ಬೆಂಗಳೂರು ಬ್ರಿಗೇಡ್ ಮತ್ತು ಸಿದ್ಧರಬೆಟ್ಟ ರೋಟರಿ ಸಂಸ್ಥೆ ಮುಖ್ಯಸ್ಥರ ಬಳಿ ಶ್ರೀಮಠದಿಂದ ಮನವಿ ಮಾಡಲಾಗಿತ್ತು, ರೋಟರಿ ಬೆಂಗಳೂರು ಬ್ರಿಗೇಡ್ ಅಧ್ಯಕ್ಷೆ ಮಹದೇವಿ ಬಿರಾದಾರ್, ರೋಟರಿ ಸಿದ್ದರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್ ಸಹಕಾರದಿಂದ ಶ್ರೀಮಠಕ್ಕೆ ಸಾವಿರ ಲೀಟರ್ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದೆ ಎಂದರು.ರೋಟರಿ ಬೆಂಗಳೂರು ಬ್ರಿಗೇಡ್ ಅಧ್ಯಕ್ಷೆ ಮಹಾದೇವಿ ಬಿರಾದಾರ್ ಮಾತನಾಡಿ, ಸಂಜೀವಿನ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಪ್ರಕೃತಿ ಸೊಬಗು ನೋಡುವುದೇ ಒಂದು ಪುಣ್ಯ, ಶ್ರೀಮಠದಿಂದ ಭಕ್ತರಿಗೆ ಅತ್ಯವಶ್ಯಕವಾಗಿ ಬೇಕಿರುವ ಶುದ್ದ ನೀರಿನ ಘಟಕ ಸ್ಥಾಪನೆಗೆ ಮನವಿ ಮಾಡಿದ್ದರು, ಸಿದ್ದರಬೆಟ್ಟ ರೋಟರಿ ಸಂಸ್ಥೆ ಸಹಕಾರದಿಂದ ಶ್ರೀಮಠದ ಪೂಜ್ಯರಿಂದ ಇಂದು ನೀರಿನ ಘಟಕವನ್ನು ಉದ್ಘಾಟಿಸಲಾಗಿದೆ ಎಂದರು.ರೋಟರಿ ಸಿದ್ದರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, ರೋಟರಿ ಸಿದ್ದರಬೆಟ್ಟ ಸಂಸ್ಥೆಯು ಶ್ರೀಗಳ ಮಾರ್ಗದರ್ಶನದಲ್ಲಿ ಕಾಮಧೇನು ಯೋಜನೆ ಮೂಲಕ ರೈತರ ಆರ್ಥಿಕತೆ ಅಭಿವೃದ್ಧಿಗೆ ನೆರವು, ಕೊರಟಗೆರೆ ರೇಣುಕಾ ಆಸ್ಪತ್ರೆ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ, ಈಗೇ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಶ್ರೀಮಠಕ್ಕೆ ಬರುವ ಭಕ್ತರಿಗೆ, ವಿದ್ಯಾರ್ಥಿಗಳಿಗಾಗಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ಬ್ರಿಗೇಡ್ ರೋಟರಿ ದಯಾನಂದ್, ಕಾರ್ಯದರ್ಶಿ ಭವೇಶ್ ಶಾ, ರೋಟರಿ ಸಿದ್ದರಬೆಟ್ಟ ಕಾರ್ಯದರ್ಶಿ ರವಿ, ಖಚಾಂಚಿ ಸಚಿನ್, ನಿರ್ದೇಶಕ ದೊಡ್ಡೆಗೌಡ್ರು, ರಾಮಯ್ಯ, ಗಂಗಾಧರ ಶಾಸ್ತ್ರೀ, ರಘು ಕೆ.ಎನ್, ಗುರುಶಾಂತಪ್ಪ, ಸಿದ್ದಬಸಪ್ಪ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.