ಬಸವೇಶ್ವರ ಜಾತ್ರೆಯ ದಾಸೋಹಕ್ಕೆ ಮಹಿಳೆಯರಿಂದ ರೊಟ್ಟಿ ಸೇವೆ

KannadaprabhaNewsNetwork |  
Published : Aug 25, 2024, 01:53 AM IST
24ಬಿಎಸ್ವಿ03- ಬಸವನಬಾಗೇವಾಡಿಯಲ್ಲಿ ಬಸವೇಶ್ವರ ಜಾತ್ರೆಯ ದಾಸೋಹಕ್ಕಾಗಿ ಮಹಿಳೆಯರು ರೊಟ್ಟಿಗಳ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು. | Kannada Prabha

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ದಾಸೋಹಕ್ಕೆ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ಬುಟ್ಟಿಯಲ್ಲಿ ಇಟ್ಟು ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಶನಿವಾರ ಸಂಜೆ ವಿರಕ್ತಮಠದಿಂದ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ತಲುಪಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ದಾಸೋಹಕ್ಕೆ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ಬುಟ್ಟಿಯಲ್ಲಿ ಇಟ್ಟು ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಶನಿವಾರ ಸಂಜೆ ವಿರಕ್ತಮಠದಿಂದ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ತಲುಪಿಸಿದರು.

ಸ್ಥಳೀಯ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಹಿಳೆಯರು ರೊಟ್ಟಿಯ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಬಸವಜನ್ಮ ಸ್ಮಾರಕ, ಪಲ್ಲೇದ ಕಟ್ದೆ, ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿದರು.ಪಟ್ಟಣದ ವಿವಿಧ ಗಲ್ಲಿಯ ಮಹಿಳೆಯರು 3 ಸಾವಿರಕ್ಕಿಂತ ಹೆಚ್ಚು ರೊಟ್ಟಿಗಳನ್ನು ಹಾಗೂ ತಾಳಿಕೋಟೆ ತಾಲೂಕಿನ ಹಗರಗುಂಡ ಎಲ್.ಟಿ ಯ ಸುರೇಶ ರಾಠೋಡ ಅವರು ಟ್ರ್ಯಾಕ್ಟರ ಮೂಲಕ ಎರಡು ಸಾವಿರ ರೊಟ್ಟಿಗಳನ್ನು ದಾಸೋಹ ಭವನಕ್ಕೆ ತಲುಪಿಸಿದರು.ಜಾತ್ರೆಗೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ನಿರಂತರವಾಗಿ ದಾಸೋಹ ನಡೆಯುತ್ತದೆ. ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ದಾಸೋಹಕ್ಕೆ ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಲಿದೆ. ಜಾತ್ರೆಯ ಮೆರಗನ್ನು ಹೆಚ್ಚಿಸಲಿದೆ ಎಂದು ಶ್ರೀಗಳು ತಿಳಿಸಿದರು.ಮೆರವಣಿಗೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಮುಖಂಡರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅನಿಲ ಅಗರವಾಲ, ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ, ಬಾಬುಗೌಡ ಪಾಟೀಲ, ಶ್ರೀಕಾಂತ ಪಟ್ಡಣಶೆಟ್ಟಿ, ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ರಾಯಣ್ಣ ಮಸಬಿನಾಳ, ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರಶೇಖರಗೌಡ ಪಾಟೀಲ, ಎಂ.ಬಿ.ತೋಟದ, ಪ್ರಭಾಕರ ಖೇಡದ, ಕೊಟ್ರೇಶಿ ಹೆಗ್ಡಾಳ, ಮಹಾದೇವಿ ಬಿರಾದಾರ, ಲಲಿತಾ ಗಬ್ಬೂರ, ಪುಷ್ಪಾ ಸಂಗಮ, ಮಹಾದೇವಿ ಪಡಶೆಟ್ಟಿ, ಶಾಂತಾಬಾಯಿ ಕುಂಬಾರ ಸೇರಿದಂತೆ ಇತರರು ಭಾಗವಹಿಸಿದ್ದರು. ರೊಟ್ಟಿ ಸೇವೆ ನೀಡಿದ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌