ಸಣ್ಣ ....ರೌಡಿ ಶೀಟರ್ ಗಜಾನನ ದೇಶಪಾಂಡೆ ಗಡಿಪಾರು

KannadaprabhaNewsNetwork |  
Published : Aug 16, 2026, 02:30 AM IST
ತಾಲೂಕು ಆಡಳಿತ ಬೆಳ್ತಂಗಡಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮಿನಿ ವಿಧಾನ ಸೌಧದ ಆವರಣದಲ್ಲಿ ನಡೆಯಿತು. | Kannada Prabha

ಸಾರಾಂಶ

ಫರಹತಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಯ “ಬಿ” ರೌಡಿ ಶೀಟರ್ ಗಜಾನನ. ಅರುಣ ಕುಮಾರ್ ದೇಶಪಾಂಡೆ (37)ಯನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಕರುಣೇಶ್ವರ ನಗರ ನಿವಾಸಿ ಗಜಾನನ ದೇಶಪಾಂಡೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಈತನ ವಿರುದ್ಧ ಕಲಬುರಗಿ ನಗರ ಮತ್ತು ಕಲಬುರ್ಗಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಕಲಂ ಅಡಿಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಆರೋಪಿಯು ರೂಢಿಗತ ಅಪರಾಧಿಯಾಗಿದ್ದು, ಈತನ ವಿರುದ್ಧ 2013 ರಿಂದ 2026 ರ ವರೆಗೆ ಭಾರತೀಯ ದಂಡ ಸಂಹಿತೆ ಅಡಿ 4 ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ-2023 ರ ಅಡಿ 01 ಪ್ರಕರಣ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ 02 ಪ್ರಕರಣಗಳು ದಾಖಲಾಗಿವೆ.

ಕಲಬುರಗಿ: ಫರಹತಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಯ “ಬಿ” ರೌಡಿ ಶೀಟರ್ ಗಜಾನನ. ಅರುಣ ಕುಮಾರ್ ದೇಶಪಾಂಡೆ (37)ಯನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಕರುಣೇಶ್ವರ ನಗರ ನಿವಾಸಿ ಗಜಾನನ ದೇಶಪಾಂಡೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಈತನ ವಿರುದ್ಧ ಕಲಬುರಗಿ ನಗರ ಮತ್ತು ಕಲಬುರ್ಗಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಕಲಂ ಅಡಿಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಆರೋಪಿಯು ರೂಢಿಗತ ಅಪರಾಧಿಯಾಗಿದ್ದು, ಈತನ ವಿರುದ್ಧ 2013 ರಿಂದ 2026 ರ ವರೆಗೆ ಭಾರತೀಯ ದಂಡ ಸಂಹಿತೆ ಅಡಿ 4 ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ-2023 ರ ಅಡಿ 01 ಪ್ರಕರಣ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ 02 ಪ್ರಕರಣಗಳು ದಾಖಲಾಗಿವೆ.

ಆರೋಪಿತನು ಸಾರ್ವಜನಿಕರ ನೆಮ್ಮದಿಗೆ ಕಂಟಕ ಪ್ರಾಯವಾಗಿದ್ದು ಕಾನೂನು ವ್ಯವಸ್ಥೆಗೆ ದಕ್ಕೆ ತರುವಂತ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಘೋರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ.

ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಎಸ್ ಡಿ ನಿರ್ದೇಶನದ ಮೇರೆಗೆ ಆರೋಪಿತನ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ, ಮನವರಿಕೆ ಮಾಡಿಕೊಡಲು, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಈತನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾದದ್ದು ಎಂದು ಫರಹತಾಬಾದ ಪೊಲೀಸ್ ಠಾಣೆ ಪಿ.ಐ. ಹುಸೇನ್ ಭಾಷಾ ಅವರು ಪೊಲೀಸ್‌ ಕಾಯ್ದೆ 1963 ಕಲಂ 55 (ಎ), 55(ಬಿ) ರ ಅಡಿಯಲ್ಲಿ ಗಡಿಪಾರು ಮಾಡಲು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪ-ಪೊಲೀಸ್ ಆಯುಕ್ತರಾದ ಶಾಲೂ ಹಾಗೂ ನಗರದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರ ನ್ಯಾಯಾಲಯ ವಿಚಾರಣೆ ಕೈಗೊಂಡು ರೌಡಿ ಶೀಟರ್ ನನ್ನು 01ವರ್ಷದ ಅವಧಿಗೆ ದಿನಾಂಕ: 03-08-2016 ರಿಂದ 02-08-2027 ರ ವರೆಗೆ ಮುರುಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ರೈತರಿಂದ ಪ್ರತಿಭಟನೆ
ಮಂಡ್ಯ: ಜನಾಕರ್ಷಿಸಿದ ಒಂದು ಸಾವಿರ ಅಡಿ ತಿರಂಗಾ ಪ್ರದರ್ಶನ