ಸಿದ್ದರಾಮಯ್ಯ ಹಿಂದುತ್ವದ ಕಟ್ಟಾ ವಿರೋಧಿ : ಮುತಾಲಿಕ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಇದೀಗ ರೌಡಿ ಶೀಟರ್, ಗೂಂಡಾ ಕಾಯ್ದೆ, ಗಡಿಪಾರು ಕೆಲಸಗಳು ಶುರುವಾಗಿವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಬ್ಬಳ್ಳಿಯಲ್ಲಿ 31 ವರ್ಷ ಹಿಂದಿನ ಕರ ಸೇವಕರ ಹಳೆ ಕೇಸ್‌ಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತಿದೆ ಎಂದರು. ಕಾಂಗ್ರೆಸ್ ಯಾವಾಗಲೂ ಹಿಂದುತ್ವ ವಿರೋಧ ಮಾಡುತ್ತಾ ಬಂದಿದೆ. ಆದರೆ, ಸಿದ್ದರಾಮಯ್ಯ ತಮ್ಮನ್ನು ತಾವು ಕಟ್ಟಾ ಹಿಂದುತ್ವದ ವಿರೋಧಿಯೆಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ಕೇಸರಿ ಪೇಟ, ತಿಲಕ ಇಟ್ಟುಕೊಳ್ಳುವುದಿಲ್ಲ. ಹಿಂದೂಗಳ ಆಚರಣೆಯನ್ನೇ ಸಿಎಂ ಸಿದ್ದರಾಮಯ್ಯ ವಿರೋಧ ಮಾಡುತ್ತಾರೆ. ವಿಜಯಪುರದಲ್ಲಿ ದೇವಸ್ಥಾನದ ಉದ್ಘಾಟನೆಗೆಂದು ಹೋಗಿ, ದೇವಸ್ಥಾನದ ಒಳಗೂ ಹೋಗಿಲ್ಲ ಎಂದು ಹರಿಹಾಯ್ದರು.ಬಿ.ಕೆ.ಹರಿಪ್ರಸಾದ, ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾತನಾಡಿದ್ದನ್ನೂ ನಾನು ನೋಡಿದ್ದೇನೆ. ಗೋದ್ರಾ ರೀತಿ ಆಗುತ್ತದೆಂಬ ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಬಳಿ ಮಾಹಿತಿ ಇದ್ದರೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡಬೇಕಿತ್ತು. ಈ ರೀತಿ ಸಾಮಾನ್ಯ ಜನರು ಹೇಳಿದರೆ, ನೀವು ಸುಮ್ಮನೆ ಬಿಡುತ್ತಿದ್ದಿರಾ? ಎಂದು ಕಿಡಿಕಾರಿದರು.
ದಾವಣಗೆರೆ: ಹಿಂದೂ ಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ನಿಂದಿಸುವ ಭರದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ ಮುಸ್ಲಿಂ ಮಹಿಳೆಯ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಅದೇ ಮಹಿಳೆಯ ಧರ್ಮದ ಬಗ್ಗೆ ಮಾತನಾಡಿದರೆ ಏನಾಗುತ್ತದೆ? ಮತ್ತೊಂದು ಧರ್ಮದ ಬಗ್ಗೆ ಇಂತಹ ಪೋಸ್ಟ್ ಹಾಕಿರುವ ಮಹಿಳೆಯ ವಿರುದ್ಧ ಪೊಲೀಸ್ ಇಲಾಖೆ ಮೊದಲು ಕ್ರಮ ಕೈಗೊಳ್ಳಲಿ ಎಂದು ತಾಕೀತು ಮಾಡಿದರು.