ರಸ್ತೆಗಳ ಅಭಿವೃದ್ಧಿಗೆ ₹೮ ಕೋಟಿ ಅನುದಾನ

KannadaprabhaNewsNetwork |  
Published : Aug 07, 2025, 12:45 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ವಿರೋಧ ಪಕ್ಷದವರ ಟೀಕೆ- ಟಿಪ್ಪಣಿಗಳು ಆರೋಗ್ಯಕರವಾಗಿ ಇರಬೇಕು. ನಾನು ಎರಡು ವರ್ಷದ ಕೂಸು. ನನ್ನನ್ನು ತಿದ್ದುವ ಕೆಲಸ ಮಾಡಲಿ, ಅದನ್ನು ಸ್ವಾಗತ ಮಾಡುತ್ತೇನೆ. ಅನಗತ್ಯ ಟೀಕೆಗಳಿಗೆ ಉತ್ತರಿಸಲು ನನಗೆ ಸಮಯವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಸಿ.ಸಿ. ರಸ್ತೆ, ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕ ದೇವೇಂದ್ರಪ್ಪ

- - -

ಕನ್ನಡಪ್ರಭ ವಾರ್ತೆ ಜಗಳೂರು

ವಿರೋಧ ಪಕ್ಷದವರ ಟೀಕೆ- ಟಿಪ್ಪಣಿಗಳು ಆರೋಗ್ಯಕರವಾಗಿ ಇರಬೇಕು. ನಾನು ಎರಡು ವರ್ಷದ ಕೂಸು. ನನ್ನನ್ನು ತಿದ್ದುವ ಕೆಲಸ ಮಾಡಲಿ, ಅದನ್ನು ಸ್ವಾಗತ ಮಾಡುತ್ತೇನೆ. ಅನಗತ್ಯ ಟೀಕೆಗಳಿಗೆ ಉತ್ತರಿಸಲು ನನಗೆ ಸಮಯವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ದಾವಣಗೆರೆ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಜಗಳೂರು ಪಟ್ಟಣದಲ್ಲಿ ೨೦೨೪- ೨೫ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಯೋಜನೆಯಡಿ ಅಂದಾಜು ಮೊತ್ತ ₹೮ ಕೋಟಿ ವೆಚ್ಚದ ವಿವಿಧ ವಾರ್ಡ್‌ಗಳಲ್ಲಿ ಸಿ.ಸಿ. ರಸ್ತೆ ಮತ್ತು ಸಿ.ಸಿ. ಚರಂಡಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕೇವಲ 2 ವರ್ಷಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದರೂ ಅದನ್ನು ರಾಜಕೀಯವಾಗಿ ನೋಡುತ್ತೀರಲ್ಲ. ರಸ್ತೆಗಳ ಅಭಿವೃದ್ಧಿಗೆ ₹೮ ಕೋಟಿ ಅನುದಾನ ನೀಡಲಾಗಿದೆ. ರಾಮನ ಸಂದೇಶವೇನು? ಇದಕ್ಕೇನಾ ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆ ಕಂಡಿದ್ದು? ಒಂದು ವರ್ಗಕ್ಕೆ ಸೀಮಿತವಾಗಿ ಇರುವಂತಹ ರಾಮನನ್ನು ನಾನು ಒಪ್ಪುವುದಿಲ್ಲ ಎಂದರು.

ರಾಮನಾಗುವವರೆಗೂ ರಾಜಕೀಯ ಮಾಡು, ರಾಜನಾದ ಮೇಲೆ ರಾಜನೀತಿ, ರಾಜಧರ್ಮ ಪಾಲನೆ ಮಾಡುವ ರಾಮನನ್ನು ಒಪ್ಪುತ್ತೇನೆ. ಅದನ್ನು ಮೈಗೂಡಿಸಿಕೊಂಡಿದ್ದೇನೆ. ಮನುಷ್ಯ ಸಂಘ ಜೀವಿ. ಒಗ್ಗಟ್ಟಿನಲ್ಲಿ ಬಲವಿದೆ. ರಾಜಕೀಯ ಬಂದಾಗ ರಾಜಕೀಯ ಮಾಡೋಣ, ಉಳಿದವುಗಳನ್ನು ಪಕ್ಷಬೇಧ ಮರೆತು ನೆಲ, ಜಲ, ನುಡಿಗಾಗಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಈ ಸಂದರ್ಭ ಜಿಪಂ ಎಇಇ ಶಿವಮೂರ್ತಿ, ಎಂಜಿನಿಯರ್ ವಿಜಯ್‌ ನಾಯ್ಕ, ಪ.ಪಂ. ಸದಸ್ಯರಾದ ಮಂಜುನಾಥ್, ಸಣ್ಣ ತಾನಾಜಿ ಗೋಸಾಯಿ, ಕುರಿ ಜಯಣ್ಣ, ಮುಖಂಡ ರಮೇಶ್, ಕಿಶೋರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ, ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಮುಖಂಡರಾದ ಗೌರಿಪುರ ಶಿವಣ್ಣ, ರಮೇಶ್, ಸುಭಾನ್ ಮತ್ತಿತರರಿದ್ದರು.

- - -

(ಕೋಟ್‌) ಜಗಳೂರು ಪಟ್ಟಣದಲ್ಲಿ ಅಲ್ಪ ಅನುದಾನದಿಂದ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಶಾಸಕರ ಅನುದಾನದಲ್ಲಿ ೧೨ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಆಗುತ್ತಿರುವುದು ಶ್ಲಾಘನೀಯ.

- ಲೋಕ್ಯಾನಾಯ್ಕ, ಮುಖ್ಯಾಧಿಕಾರಿ, ಪಪಂ

- - -

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ