49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !

KannadaprabhaNewsNetwork |  
Published : Feb 06, 2026, 04:00 AM IST
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡಿದರು | Kannada Prabha

ಸಾರಾಂಶ

ಅಬುದಾಬಿಯ ಲಾಟರಿಯಲ್ಲಿ 49 ಕೋಟಿ ರು. ಗೆದ್ದಿರುವ ಓಮನ್‌ನಲ್ಲಿ ಉದ್ಯೋಗಿಯಾಗಿರುವ ಶಂತನು ಶೆಟ್ಟಿಗಾರ್ ಅವರ ಉದ್ಯಾವರದ ಮಟ್ಟುನಲ್ಲಿರುವ ಮನೆಯಲ್ಲಿ ಸಂತಸದ ಹೊಳೆಯೇ ಹರಿದಿದೆ. ತಿಂಗಳ ಹಿಂದೆ ಅವರು ಹೆಣ್ಣುಮಗುವಿನ ತಂದೆಯಾಗಿದ್ದು, ಹೆಣ್ಣುಮಗು ಅವರಿಗೆ ಅದೃಷ್ಟ ತಂದಿದೆ ಎಂದು ಸಂಭ್ರಮಿಸಿದ್ದಾರೆ.

ಉಡುಪಿ: ಅಬುದಾಬಿಯ ಲಾಟರಿಯಲ್ಲಿ 49 ಕೋಟಿ ರು. ಗೆದ್ದಿರುವ ಓಮನ್‌ನಲ್ಲಿ ಉದ್ಯೋಗಿಯಾಗಿರುವ ಶಂತನು ಶೆಟ್ಟಿಗಾರ್ ಅವರ ಉದ್ಯಾವರದ ಮಟ್ಟುನಲ್ಲಿರುವ ಮನೆಯಲ್ಲಿ ಸಂತಸದ ಹೊಳೆಯೇ ಹರಿದಿದೆ. ತಿಂಗಳ ಹಿಂದೆ ಅವರು ಹೆಣ್ಣುಮಗುವಿನ ತಂದೆಯಾಗಿದ್ದು, ಹೆಣ್ಣುಮಗು ಅವರಿಗೆ ಅದೃಷ್ಟ ತಂದಿದೆ ಎಂದು ಸಂಭ್ರಮಿಸಿದ್ದಾರೆ. ಇಲ್ಲಿನ ಕೃಷಿಕ ಕುಟುಂಬದ ಶಂತನು ಶೆಟ್ಟಿಗಾರ್ ಡಿಪ್ಲೋಮಾ ಮಾಡಿ ಓಮನ್ ನ ರಿಟೇಲ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಪದೇಪದೇ ಲಾಟರಿ ಟಿಕೇಟ್ ಖರೀದಿಸಿ ಅದೃಷ್ಟ ಪರೀಕ್ಷೆ ಮಾಡುತಿದ್ದರು. ಈ ಬಾರಿ ಗೆಳೆಯನೊಂದಿಗೆ ಪಾಲುದಾರಿಕೆಯಲ್ಲಿ 500 ದಿರ್ಹಂ (12,000 ರು.) ಕೊಟ್ಟು ಅಬುದಾಬಿಯಲ್ಲಿ ಡ್ರಾ ನಡೆಯುವ ವಿಶ್ವಮಟ್ಟದ ಲಾಟರಿ ಖರೀದಿಸಿದ್ದರು. ಈ ಬಾರಿ ಅದೃಷ್ಟ ಒಲಿದಿದೆ, 20 ಮಿಲಿಯನ್ ದಿರ್ಹಂ, ಅಂದರೆ 49 ಕೋಟಿ ರೂ. ಜಾಕ್‌ಪಾಟ್ ಹೊಡೆದಿದೆ. ಇದಕ್ಕೆ ಅವರಿಗೆ ಹೆಣ್ಣುಮಗು ಹುಟ್ಟಿದ್ದೆ ಕಾರಣ ಎಂದವರ ಮನೆಯವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಅವರ ಪತ್ನಿ ಹೆರಿಗೆಗೆಂದು ತವರು ಮನೆ ತೀರ್ಥಹಳ್ಳಿಯಲ್ಲಿದ್ದಾರೆ. ಅವರಂತೂ ಹೆಣ್ಣು ಮಗು ಹುಟ್ಟಿದ್ದ ಸಂತೋಷದಲ್ಲಿದ್ದು, ಇದೀಗ ಪತಿ ಲಾಟರಿ ಗೆದ್ದಿದ್ದು ಅವರ ಸಂತೋಷ ದುಪ್ಪಟ್ಟಾಗಿದೆ, ಜೊತೆಗೆ ಮಗುವನ್ನು ನೋಡಲು ಈ ತಿಂಗಳ ಕೊನೆಗೆ ಬರುವುದಾಗಿ ಶಂತನು ಹೇಳಿದ್ದು, ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ ಎಂದು ಮನೆಯವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌