ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಮೂಲ್ಕಿ ವಲಯದ ಪದಗ್ರಹಣ

KannadaprabhaNewsNetwork |  
Published : Feb 06, 2026, 04:00 AM IST
ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಮೂಲ್ಕಿ ವಲಯದ ಪದಗ್ರಹಣ ಸಮಾರಂಭ | Kannada Prabha

ಸಾರಾಂಶ

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮೂಲ್ಕಿ: ಛಾಯಾಗ್ರಾಹಕರು ನೂತನ ತಂತ್ರಜ್ಞಾನ ಮೈಗೂಡಿಸಿಕೊಳ್ಳುವ ಜೊತೆಗೆ ಸಂಘಟನಾತ್ಮಕವಾಗಿ ಬೆಳೆಯಬೇಕೆಂದು ಮಂಗಳೂರು ಉಪವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ಶ್ರೀಕಾಂತ್ ಕೆ. ಹೇಳಿದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ದ.ಕ-ಉಡುಪಿ ಜಿಲ್ಲಾ ಅಧ್ಯಕ್ಷ ನವೀನ್ ರೈ ಪಂಜಳ ಮಾತನಾಡಿ, ಫೋಟೋಗ್ರಾಫರ್ಸ್‌ ಗಳಿಗಾಗಿ ಸಂಘಟನೆ, ಆರೋಗ್ಯ ಹಾಗೂ ವೃತ್ತಿ ತರಬೇತಿ ಯೋಜನೆಗಳನ್ನು ಹಮ್ಮಿಕೊಳ್ಳುವ ಜೊತೆಗೆ ಮಕ್ಕಳ ಶಿಕ್ಷಣ ಸಹಕಾರಿ ಯೋಜನೆಗಳನ್ನು ರೂಪಿಸಿದೆ ಎಂದರು. ಮೂಲ್ಕಿ ವಲಯದ ನೂತನ ಅಧ್ಯಕ್ಷ ಶ್ರೀನಿವಾಸ್ ಬಪ್ಪನಾಡು, ಕಾರ್ಯದರ್ಶಿ ನೀಲಕಂಠ ರಾವ್, ಕೋಶಾಧಿಕಾರಿ ಧನರಾಜ್ ಶೆಟ್ಟಿಗಾರ್ ಸಹಿತ ಪದಾಧಿಕಾರಿಗಳ ಪದಗ್ರಹಣವನ್ನು ಅವರು ನೆರವೇರಿಸಿದರು. ಈ ಸಂದರ್ಭ ಹಿರಿಯ ಛಾಯಾಗ್ರಹಕ ಪಾವಂಜೆ ಮೋಹನ್ ರಾವ್ ಅವರನ್ನು ಗೌರವಿಸಲಾಯಿತು. ಹಿರಿಯ ಛಾಯಾಗ್ರಾಹಕ ರಾಮಚಂದ್ರ ಬಪ್ಪನಾಡು ಮತ್ತು ಹರೀಶ್ ದೇವಾಡಿಗ ಹೆಜಮಾಡಿ ಅವರಿಗೆ ಗುರುವಂದನೆ ನಡೆಯಿತು. ಜಿಲ್ಲಾ ಸಮಿತಿ ಮತ್ತು ವಲಯದ ನಿಕಟಪೂರ್ವ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಮಾಜಸೇವಕಿ ಸುಷ್ಮಾ ಹರೀಶ್ ಕಾಮತ್, ಮೂಲ್ಕಿ ನೋಟರಿ ವಕೀಲ ಬಿಪಿನ್ ಪ್ರಸಾದ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಭಾಗವಹಿಸಿದ್ದರು. ಎಸ್‌ಕೆಪಿಎ ಲ್ಲಾ ಸಂಚಾಲಕ ಗೋಪಾಲ್ ಸುಳ್ಯ, ಎಸ್.ಕೆ.ಪಿ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಕೆ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಮೂಲ್ಕಿ ಪೋಲಿಸ್‌ ನಿರೀಕ್ಷಕ ಮಂಜುನಾಥ್ ಬಿ. ಎಸ್. ಉಪಸ್ಥಿತರಿದ್ದರು. ವಲಯದ ಮಾಜಿ ಅಧ್ಯಕ್ಷ ಪ್ರಕಾಶ್‌ಸುವರ್ಣ ಸ್ವಾಗತಿಸಿದರು. ಅರುಣ್ ಉಲ್ಲಂಜೆ ನಿರೂಪಿಸಿದರು. ಕಾರ್ಯದರ್ಶಿ ನೀಲಕಂಠ ರಾವ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !
ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ: ಹರಿನಾರಾಯಣ ದಾಸ ಆಸ್ರಣ್ಣ