ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡು ಭ್ರಷ್ಟಚಾರ ಬಯಲಿಗೆಳೆಯಲು ಕಾರಣರಾಗಿದ್ದಾರೆ. ಅವರ ಕುಟುಂಬ ತುಂಬ ತೊಂದರೆಯಲ್ಲಿದ್ದರು ಕೂಡ ಸ್ವಾಭಿಮಾನಿಗಳಾಗಿದ್ದಾರೆ. ಸಹೋದರ ನೀಡಿದರೆಂದು ಅವರು ತೆಗೆದುಕೊಳ್ಳುತ್ತಿದ್ದಾರೆ ಅಷ್ಟೇ ಸಮಾಜದ ಋಣವನ್ನು ನಾವು ತೀರಿಸಬೇಕು. ಸರ್ಕಾರ ಕೂಡ ಈಗಾಗಲೇ ಪ್ರಕಟಿಸಿರುವಂತೆ 25 ಲಕ್ಷ ರು. ಹಣವನ್ನು ತಕ್ಷಣವೇ ನೀಡಬೇಕು ಎಂದರು.ನಾನು ತುಂಬಾ ನೊಂದು ಮಾತನಾಡ್ತಿದ್ದೀನಿ, ಇಡೀ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಾಕ್ಷಿ ಚಂದ್ರಶೇಖರ್ ಮೃತಪಟ್ಟಾಗ ಸಿಎಂ ಇಲ್ಲಿಗೆ ಬರಬೇಕಿತ್ತು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಅಂತಾ ಹೇಳಬೇಕಿತ್ತು ಎಂದು ಹೇಳಿದರು.
ಪರಿಹಾರ ವಿಳಂಬ ಆಗುತ್ತಿರುವುದನ್ನು ಗಮನಿಸಿ ಸೆ.20 ರಂದು ರಾಷ್ಟ್ರಭಕ್ತರ ಬಳಗದಿಂದ ಜೈಲು ಭರೋ ಚಳುವಳಿ ಹಮ್ಮಿಕೊಂಡಿದ್ದೆವು, ಆದರೆ, ನಿನ್ನೆ ಶಾಸಕರು ಮತ್ತು ಮುಖ್ಯಮಂತ್ರಿಗಳು ತಕ್ಷಣ ಪರಿಹಾರವನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ ಮೇರೆಗೆ ಜೈಲ್ ಭರೋ ಚಳುವಳಿಯನ್ನು ಮುಂದೂಡಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಈ.ಕಾಂತೇಶ್, ಈ.ವಿಶ್ವಾಸ್, ಮೋಹನ್‍ಕುಮಾರ್ ಜಾಧವ್, ಬಾಲು, ಭೂಪಾಲ್, ಶ್ರೀಕಾಂತ್, ಸೀತಾಲಕ್ಷ್ಮೀ, ಮಹೇಶ್, ಮೋಹನ್, ಸುವರ್ಣಶಂಕರ್, ಲಕ್ಷ್ಮೀಶಂಕರ್‍ನಾಯಕ್, ಶಂಕರ್‍ನಾಯಕ್, ಆಶಾ ಚನ್ನಬಸಪ್ಪ, ಕುಬೇರಪ್ಪ, ಪ್ರಕಾಶ್ ಜೋಡಿಯಾಕ್ ಪ್ರಕಾಶ್, ಶಿವಾಜಿ, ಮಂಜುನಾಥ್, ವಾಣಿ, ಭುವನೇಶ್ವರಿ, ಗಂಗಾಧರ್ ಮಂಡೇನಕೊಪ್ಪ ಮತ್ತಿತರರಿದ್ದರು.ಜೈಲು ಭರೋ ಚಳವಳಿ ಎಚ್ಚರಿಕೆ
ಮಾಜಿ ಸಚಿವ ನಾಗೇಂದ್ರ ಇವತ್ತು ಜೈಲಿನಲ್ಲಿ ಇದ್ದಾರೆ ಚಂದ್ರಶೇಖರ್ ಆತ್ಮಹತ್ಯೆಗೆ ಮುಖ್ಯಮಂತ್ರಿ ಪರಿಹಾರ ಕೊಡುವ ಭರ ವಸೆ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳ ಭರವಸೆ ಹಾಗೆಯೇ ಉಳಿದಿದೆ. ಚಂದ್ರಶೇಖರ್ ಕುಟುಂಬಕ್ಕೆ ಈ ಹಿಂದೆ ರಾಷ್ಟ್ರ ಭಕ್ತರ ಬಳಗದಿಂದ ಈ ಹಿಂದೆ 3 ಲಕ್ಷ ಕೊಟ್ಟಿದ್ದೆವು ಇಂದು 5 ಲಕ್ಷ ರು. ಪರಿಹಾರದ ಹಣ ಕೊಟ್ಟಿದ್ದೇವೆ. ಸೆ.20 ರೊಳಗೆ ಸರ್ಕಾರ ಪರಿಹಾರ ಕೊಡಬೇಕು, ಪರಿಹಾರ ಕೊಡದಿದ್ದರೆ ಜೈಲು ಭರೋ ಚಳವಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.