ಧಾರವಾಡ: ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಸ್ಥಾಪನೆಯಾಗಿರುವ ಪಂಪ ಸ್ಮಾರಕ ಭವನದ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆಯಾಗಿದ್ದು ಸದ್ಯದಲ್ಲಿ ಅಭಿವೃದ್ಧಿ ಕಾರ್ಯ ಶುರುವಾಗಲಿದೆ.
ಪ್ರಮುಖವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಸ್ಮಾರಕ ಭವನ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆಯಾಗಿದ್ದು, ಕೆಆರ್‌ಡಿಎಲ್ ಮೂಲಕ ಅಭಿವೃದ್ಧಿ ಕಾರ್ಯ ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಭವನಕ್ಕೆ ಬೇಕಾದ ಪೀಠೋಪಕರಣಗಳು, ಸಭಾಂಗಣದ ವೇದಿಕೆ, ಸೌಂಡ್ ವ್ಯವಸ್ಥೆ, ಇತರೆ ರಿಪೇರಿ ಕಾರ್ಯಗಳು, ಸುಣ್ಣ-ಬಣ್ಣ ಸೇರಿದಂತೆ ಸುಸಜ್ಜಿತ ವೇದಿಕೆ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿ ಕಾರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಅನುದಾನ ಕೊಡಲು ಸಿದ್ಧವಿದೆ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಪುರಸರಭೆ ಮುಖ್ಯಾಧಿಕಾರಿ ಸಿದ್ದನಗೌಡರ ಹಾಗೂ ಪಂಪ ಸ್ಮಾರಕ ಭವನದ ಸಿಬ್ಬಂದಿ ಇದ್ದರು.