8 ರು. ಹಾಲಿನ ದರ ಹೆಚ್ಚಳ: ಸರ್ಕಾರದ ಸ್ವಾಗತಾರ್ಹ ಕ್ರಮ

KannadaprabhaNewsNetwork |  
Published : Nov 01, 2026, 03:00 AM IST
ಮಾಗಡಿ ಪಟ್ಟಣದ ಹೊಸಪೇಟೆಯ ಬಮೂಲ್ ಶಿಬಿರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬಮೂಲ್ ನಿರ್ದೇಶಕ ಎಚ್. ಎನ್.ಅಶೋಕ್ ಮಾತನಾಡಿದರು. | Kannada Prabha

ಸಾರಾಂಶ

ಮಾಗಡಿ: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಹೈನುಗಾರರ ನೆರವಿಗೆ ನಿಂತಿರುವ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕ್ರಮ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್.ಎನ್.ಅಶೋಕ್ ತಿಳಿಸಿದ್ದಾರೆ

ಮಾಗಡಿ: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಹೈನುಗಾರರ ನೆರವಿಗೆ ನಿಂತಿರುವ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕ್ರಮ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್.ಎನ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 3-4 ತಿಂಗಳಿಂದ ರೈತರು ರಾಮನಗರ ಜಿಲ್ಲಾಧಿಕಾರಿ ಕಚೇರಿ ಹಾಗೂ ಬಿಡದಿ ಬಳಿ ಪ್ರತಿಭಟನೆ ನಡೆಸಿ ಪ್ರತಿ ಲೀಟರ್‌ಗೆ ಕನಿಷ್ಠ 10 ರು. ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದರು. ರೈತರ ಕೂಗಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಒಟ್ಟು 8 ರು. ದರ ಹೆಚ್ಚಳ ಮಾಡಿದೆ. ಇದರಲ್ಲಿ 7 ರು. ನೇರವಾಗಿ ರೈತರ ಕೈಸೇರಲಿದ್ದು, ಉಳಿದ 1 ರು. ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು.

ಮಳೆ ಕೈಕೊಟ್ಟ ಪರಿಣಾಮ ಮೇವಿನ ಕೊರತೆಯಾಗಿದೆ. ರೈತರು ಹಾಸನ, ಮಂಡ್ಯ, ಗುಂಡ್ಲುಪೇಟೆ ಭಾಗಗಳಿಂದ ದುಬಾರಿ ಬೆಲೆ ನೀಡಿ ಸೈಲೇಜ್ ಜೋಳ ತರಿಸುತ್ತಿದ್ದಾರೆ. ಜತೆಗೆ ಹಿಂಡಿ, ಬೂಸಾ ಪಶು ಆಹಾರ ಬೆಲೆ ಗಗನಕ್ಕೇರಿದ್ದು, ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಗ್ರಾಮೀಣ ಭಾಗದ ಬಿಎಂಸಿ ಕೇಂದ್ರಗಳಿಂದ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಸಾರಿಗೆ ವೆಚ್ಚ ಸರಿದೂಗಿಸಲು ಒಕ್ಕೂಟಕ್ಕೆ 1 ರು. ಮೀಸಲಿಡಲಾಗಿದೆ ಎಂದರು. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಹೆಚ್ಚಳದ ನಂತರವೂ ಬೆಲೆ ನಿಯಂತ್ರಣದಲ್ಲಿದೆ. ರೈತರ ಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಪ್ರಮುಖ ಪಾತ್ರ ವಹಿಸಿದ್ದು, ಸರ್ಕಾರ ನೀಡುತ್ತಿರುವ 5 ರು. ಪ್ರೋತ್ಸಾಹ ಧನವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವಂತೆ ಒಕ್ಕೂಟ ಮನವಿ ಮಾಡಲಿದೆ ಎಂದರು.

ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತಮಾಡಿ, ಹಾಲಿನ ದರ ಹೆಚ್ಚಳ ಗ್ರಾಹಕರಿಗೆ ಹೊರೆಯಲ್ಲ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ, ಇಂಧನ ದರ ಹಾಗೂ ಪಶು ಆಹಾರದ ಬೆಲೆಗಳ ನಡುವೆ ಇದು ಅನಿವಾರ್ಯ ತೀರ್ಮಾನ. ಹಿಂದೆ ಲೀಟರ್ ಹಾಲಿನ ಸಾಗಾಣಿಕೆಗೆ ಪ್ರತಿ ಕಿಲೋ ಮೀಟರ್‌ಗೆ 30 ರು. ಇದ್ದ ಟ್ಯಾಂಕರ್ ದರ ಇಂದು 60 ರು.ಗೆ ಏರಿಕೆಯಾಗಿದೆ. ನೌಕರರ ವೇತನ, ಡೀಸೆಲ್ ದರ ಸರಿದೂಗಿಸಲು ಕನಿಷ್ಠ 6 ರಿಂದ 7 ರು. ವ್ಯತ್ಯಾಸದ ಅಗತ್ಯವಿತ್ತು. ಆದರೂ ಒಕ್ಕೂಟ ಕೇವಲ1 ರು. ಇಟ್ಟುಕೊಂಡು, ರೈತರಿಗೆ ಬರೋಬ್ಬರಿ 7 ರು. ತಲುಪುವಂತೆ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಪಂಚ ಗ್ಯಾರಂಟಿಗಳ ತಾಲೂಕು ಅಧ್ಯಕ್ಷ ಬೆಳ್ಳಿಯಪ್ಪ, ಮಾಜಿ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಡೇರಿ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಸಿ.ವಿ.ರಾಜಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಮುರುಳಿ, ಪ್ರಕಾಶ್, ಹೊಸಪೇಟೆ ರಮೇಶ್, ಅಜಯ್, ಆನಂದ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಞನ್‌)

ಮಾಗಡಿಯ ಹೊಸಪೇಟೆ ಶಿಬಿರ ಕಚೇರಿಯಲ್ಲಿ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಡೇರಿ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ರಾಜಣ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ